28.5 C
Bengaluru
Monday, January 20, 2020

ಮಾದಕ ವ್ಯಸನಮುಕ್ತ… ನೃತ್ಯ ಗುರುವಿನತ್ತ… 

Latest News

ವಿಪಕ್ಷ ನಾಯಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಲಿ: ಜಿ. ಪರಮೇಶ್ವರ್

ಬೆಂಗಳೂರು: ವಿಪಕ್ಷ ನಾಯಕ ಸ್ಥಾನ ಮತ್ತು ಕಾಂಗ್ರಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಿರಲಿ ಎಂಬ ಅಭಿಪ್ರಾಯವನ್ನು ಹಿರಿಯ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್...

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಗುರುತು ಪತ್ತೆ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದೆ.ವಿಮಾನ ನಿಲ್ದಾಣದಲ್ಲಿರುವ ಸಿಸಿಟಿವಿಯಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ದೃಶ್ಯ ಪತ್ತೆಯಾಗಿದೆ.ಶಂಕಿತ...

ವಸತಿ ಸಹಾಯಧನ ಹೆಚ್ಚಳ ಕೋರಿ ಪ್ರಧಾನಿ ಬಳಿ ರಾಜ್ಯದ ನಿಯೋಗ : ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು: ವಿಧಾನ ಸೌಧ ಕೊಠಡಿಯಲ್ಲಿ ಬೆಂಗಳೂರು ನಗರ ವಸತಿ ಯೋಜನೆ ಕುರಿತು ಸಂಸದ, ಶಾಸಕರ ಸಭೆಯಲ್ಲಿ ಸೋಮವಾರ ಈ ವಿಷಯ ತಿಳಿಸಿದರು.ಕೇಂದ್ರ ಸಹಾಯಧನ...

ಜೂಜುಕೋರರ ಗಡಿಪಾರು ಖಚಿತ: ಎಸ್‌ಪಿ ವಂಶಿಕೃಷ್ಣ ಎಚ್ಚರಿಕೆ

ಪಾವಗಡ: ಮಟ್ಕಾ ಮತ್ತು ಇಸ್ಪೀಟು ಆಡುವವರನ್ನು ಮತ್ತು ಆಡಿಸುವವರನ್ನು ಗಡಿಪಾರು ವಾಡಲು ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತುಮಕೂರು ಜಿಲ್ಲಾ ಎಸ್‌ಪಿ ಡಾ.ಕೆ.ವಂಶಿಕೃಷ್ಣ...

ವಿಶ್ವಶಾಂತಿಗೆ ಸಂತರ ಮಾರ್ಗದರ್ಶನ ಅಗತ್ಯ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ತುಮಕೂರು: ವಿಶ್ವವೇ ಸಂಕಷ್ಟದ ಸನ್ನಿವೇಶದಲ್ಲಿದ್ದು ಜನರ ಭಯ ತೊಲಗಿಸಲು ಸುಖ-ಶಾಂತಿ ನೆಲೆಸಲು ಸಂತರ ಮಾರ್ಗದರ್ಶನ ಅಗತ್ಯವಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಸಿದ್ಧಗಂಗಾ...

ಸಂಗೀತ ಮತ್ತು ನೃತ್ಯಕ್ಕೆ ಬದುಕಿನ ದಿಕ್ಕನ್ನೇ ಬದಲಿಸುವ ಅಪೂರ್ವ ಗುಣವಿದೆ ಎನ್ನುವುದು ತುಂಬಾ ಹಿಂದಿನಿಂದಲೂ ಕೇಳಿಕೊಂಡು ಬಂದಿರುವ ಮಾತು. ಈ ಮಾತಿಗೆ ಪೂರಕ ಎಂಬಂತೆ ಸುಮಾರು 20 ವರ್ಷಗಳ ಹಿಂದೆ ವಿಪರೀತವಾಗಿ ಮಾದಕ ವ್ಯಸನಕ್ಕೆ ತುತ್ತಾಗಿದ್ದ 20 ವರ್ಷದ ಯುವಕನೊಬ್ಬ ನೃತ್ಯದ ಮೂಲಕ ತನ್ನ ಬದುಕಿನ ದಿಕ್ಕನ್ನೇ ಬದಲಿಸಿಕೊಂಡು, ನೃತ್ಯಗುರುವಾಗಿದ್ದಾನೆ. ಇದಕ್ಕೆ ಕಾರಣ ‘ಡೂಪ್’

ಕೌಶಲ್. ದೆಹಲಿಯ 20 ವರ್ಷ ವಯಸ್ಸಿನ ಯುವಕ ಇಂದು ತನ್ನ ಅಮೋಘ ನೃತ್ಯಕಲೆಯ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವಾತ. ಈತನ ನೃತ್ಯ ಕಾರ್ಯಕ್ರಮ ಎಲ್ಲಿಯೇ ಇದ್ದರೂ ಜನ ಮುಗಿಬೀಳುವಷ್ಟರ ಮಟ್ಟಿಗೆ ಹೆಸರು ಮಾಡಿರುವ ಕಲಾವಿದನೀತ. ಅಷ್ಟೇ ಅಲ್ಲದೆ, ಸಹಸ್ರಾರು ಸಂಖ್ಯೆಯಲ್ಲಿ ಮಕ್ಕಳಿಗೆ ನೃತ್ಯ ತರಬೇತಿ ನೀಡುತ್ತಾ, ಅವರ ಬದುಕಿಗೂ ಆಸರೆಯಾಗುತ್ತಿರುವಾತ.

ಕೆಲ ವರ್ಷಗಳ ಹಿಂದಕ್ಕೆ ಸರಿದರೆ, ಈತನ ಹೆಸರು ಮಾದಕ ವ್ಯಸನಿಗಳ ಗುಂಪಿನಲ್ಲಿ ಈತ ಗುರುತಿಸಿಕೊಂಡವ. ಕೆಟ್ಟ ಸ್ನೇಹಿತರ ಸಹವಾಸದಿಂದ ಮಾದಕ ವ್ಯಸನಕ್ಕೆ ಬಲಿಯಾಗಿದ್ದ ಈತ ದುಡ್ಡು ಸಿಗದಿದ್ದಾಗ ದಿನನಿತ್ಯವೂ ಅವರಿವರ ಬಳಿ ಹಣ ಕೇಳುವುದು, ಹಣ ಸಿಗದಾಗ ಕದಿಯುವ ಕೆಲಸ ಮಾಡುತ್ತಿದ್ದ. ಜೇಬುಗಳ್ಳತನವನ್ನೂ ಮಾಡಿ ಸಿಕ್ಕಿಬಿದ್ದಾತ. ಈ ವ್ಯಸನದಿಂದ ಹೊರಕ್ಕೆ ಬರಲು ಆತ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದರೆ ಒಮ್ಮೆ ಮಾದಕ ವ್ಯಸನದ ಸಾಮ್ರಾಜ್ಯದೊಳಕ್ಕೆ ಹೋಗಿಬಿಟ್ಟರೆ ಅಲ್ಲಿಂದ ತಪ್ಪಿಸಿಕೊಂಡು ಬರುವುದು ಅಷ್ಟು ಸುಲಭವಾಗಿರಲಿಲ್ಲ.

ಅದೇ ಹೊತ್ತಿಗೆ ಈತನ ಕಿವಿಯ ಮೇಲೆ ಬಿದ್ದುದು ದೆಹಲಿಯ ಸಿಂಹಾಯನ ಫೌಂಡೇಷನ್ ಎಂಬ ಸ್ವಯಂ ಸೇವಾ ಸಂಸ್ಥೆ ನಡೆಸುತ್ತಿರುವ ‘ಡಾನ್ಸ್ ಔಟ್ ಆಫ್ ಪಾವರ್ಟಿ’ (ಡಿಒಒಪಿ- ಡೂಪ್) ಎಂಬ ನೃತ್ಯ ಪ್ರಯೋಗ. ನೃತ್ಯದ ಮೂಲಕವೇ ತನ್ನ ಚಟಗಳಿಂದ ಹೊರಬರಲು ಸಾಧ್ಯ ಎಂಬುದನ್ನು ಈತ ಕೇಳಿ ತಿಳಿದುಕೊಂಡ. ಬಾಲ್ಯದಿಂದಲೂ ನೃತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಕೌಶಲ್​ಗೆ ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ನೃತ್ಯದಲ್ಲಿಯೇ ಮುಂದುವರಿಯಲು ಸಾಧ್ಯವಾಗಿರಲಿಲ್ಲ. ಆದರೆ ‘ಡೂಪ್’ ಉಚಿತವಾಗಿ ನೃತ್ಯ ತರಬೇತಿ ನೀಡುತ್ತಿದ್ದುದರಿಂದ ಕೌಶಲ್ ಅದರಲ್ಲಿಯೇ ತನ್ನ ನೃತ್ಯದ ಆಸೆ ಪೂರೈಸಿಕೊಳ್ಳುವ ಜತೆಜತೆಗೆ, ವ್ಯಸನಮುಕ್ತ ಜೀವನ ನಡೆಸಲು ಸಾಧ್ಯ ಎಂಬುದನ್ನು ಮನಗಂಡು ಅದನ್ನು ಸೇರಿದರು. ಅಲ್ಲಿಂದಲೇ ಜೀವನ ಸಂಪೂರ್ಣ ಬದಲಾಯಿತು.

‘ನನ್ನ ತಂದೆ ಕಾರ್ಖಾನೆಯಲ್ಲಿ ವೆಲ್ಡರ್ ಕೆಲಸ ಮಾಡುತ್ತಿದ್ದಾರೆ. ನೃತ್ಯ ತರಬೇತಿಗಾಗಿ ಹಣ ನೀಡಲು ಅವರಿಗೆ ಆಗುತ್ತಿರಲಿಲ್ಲ. ಹಾಗಾಗಿ ನನ್ನ ಕನಸು ನನಸಾಗದ ನೋವು ನನ್ನಲ್ಲಿ ಉಳಿದುಕೊಂಡು ಬಿಟ್ಟಿತ್ತು. ಅದಕ್ಕೆ ಏನೋ, ನಾನು ಮಾದಕ ವ್ಯಸನಿಗಳ ಲೋಕದೊಳಗೆ ಹೋಗಿಬಿಟ್ಟೆ. ಆದರೆ 2017 ರಲ್ಲಿ ‘ಡಾನ್ಸ್ ಔಟ್ ಆಫ್ ಪಾವರ್ಟಿ’ ಆಂದೋಲನಕ್ಕೆ ಸೇರಿದೆ. ಅವರು ನನ್ನಿಂದ ಸ್ವಲ್ಪವೂ ಶುಲ್ಕ ಪಡೆಯದೇ ನೃತ್ಯ ತರಬೇತಿ ನೀಡಿದರು. ಆರಂಭದಲ್ಲಿ ನಾನು ಇರುವ ಪ್ರದೇಶಕ್ಕೆ ಬಂದು ಫ್ರೀಸ್ಟೈಲ್ ಮೂವ್​ಗಳನ್ನು ಕಲಿಸಿದರು. ಅಲ್ಲಿಂದ ನನ್ನಲ್ಲಿ ಭಾರಿ ಬದಲಾವಣೆ ಕಾಣಲು ಶುರುವಾಯಿತು. ಪಾಸಿಟಿವ್ ಎನರ್ಜಿ ಈ ನೃತ್ಯವು ನನ್ನಲ್ಲಿ ತುಂಬಿ ಈಗ ಸಂಪೂರ್ಣ ವ್ಯಸನಮುಕ್ತನಾಗಿದ್ದೇನೆ’ ಎನ್ನುತ್ತಾರೆ ಕೌಶಲ್.

ಇದೀಗ ನೃತ್ಯದಲ್ಲಿಯೇ ತನ್ನನ್ನು ಸಂಪೂರ್ಣ ಸಮರ್ಪಿಸಿಕೊಂಡಿರುವ ಕೌಶಲ್, ದೆಹಲಿಯ ಮ್ಯೂಸಿಕಾನಿಕ್ ಡ್ಯಾನ್ಸ್ ಅಕಾಡೆಮಿಯಲ್ಲಿ ಅರೆಕಾಲಿಕ ನೃತ್ಯ ಬೋಧಕರಾಗಿ ಕೆಲಸ ಮಾಡುತ್ತಾ ಸಂಪಾನೆ ಮಾಡುತ್ತಿದಾರೆ. ಇದರ ಜತೆಗೆ, ದೆಹಲಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಓಪನ್ ಲರ್ನಿಂಗ್​ನಿಂದ ಪದವಿ ಪಡೆಯುತ್ತಿದ್ದಾರೆ.

ಏನಿದು ‘ಡಾನ್ಸ್ ಔಟ್ ಆಫ್ ಪಾವರ್ಟಿ’?

2016ರಲ್ಲಿ ‘ಡಾನ್ಸ್ ಔಟ್ ಆಫ್ ಪಾವರ್ಟಿ’ ಆಂದೋಲವನ್ನು ಶುರು ಮಾಡಿದ್ದು, ಸಿಂಹಾಯನ ಫೌಂಡೇಶನ್​ನ ಸಂಸ್ಥಾಪಕ 30 ವರ್ಷದ ವಿನಪ್ ಶರ್ವ. ಚಲನಚಿತ್ರ ನಿರ್ದೇಶಕರಾದ ರಾಜ್​ಕುಮಾರ್ ಸಂತೋಷಿಗೆ ಸಹಾಯಕ ನಿರ್ದೇಶಕ ಕಮ್ ಕೊರಿಯೋಗ್ರಫರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಇವರಿಗೆ ನೃತ್ಯದ ಮೂಲಕ ಸಮಾಜದಲ್ಲಿ ಏನಾದರೊಂದು ಪರಿವರ್ತನೆ ಮಾಡಬೇಕು, ದೀನದಲಿತ ಮಕ್ಕಳ ಜೀವನವನ್ನು ನೃತ್ಯದ ಮೂಲಕ ಪರಿವರ್ತಿಸಬೇಕು ಎಂಬ ಕನಸಿತ್ತು. ಅದಕ್ಕಾಗಿಯೇ ತಮ್ಮ ಉದ್ಯೋಗವನ್ನು ತೊರೆದರು.

‘ನೃತ್ಯವನ್ನು ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯ ಒಂದು ಭಾಗವೆಂದು ಪರಿಗಣಿಸದೇ ಇರುವುದು ವಿಷಾದನೀಯ. ಆದರೆ, ಸಂಗೀತ ಮತ್ತು ನೃತ್ಯಗಳಿಗೆ ಮಾನಸಿಕ ಸಮಸ್ಯೆಯೂ ಸೇರಿದಂತೆ ಅದೆಷ್ಟೋ ಸಮಸ್ಯೆಗಳನ್ನು ಸರಿಮಾಡುವ ತಾಕತ್ತು ಇದೆ. ಇದನ್ನು ಗುರುತಿಸಬೇಕಿದೆ. ನೃತ್ಯ ಕಲಿತ ನಂತರ, ಅದನ್ನು ಹವ್ಯಾಸವಾಗಿ ಅಥವಾ ವೃತ್ತಿಯಾಗಿ ಮುಂದುವರಿಸಬಹುದು. ಆದರೆ ನೃತ್ಯ ಮಾಡಬೇಕೆಂದು ಬಯಸುವ ಬಡ ಮಕ್ಕಳ ಕನಸು ನನಸಾಗುವುದೇ ಇಲ್ಲ.

ಈ ಒಂದು ಕನಸನ್ನು ತಮ್ಮ ಮನಸ್ಸಿನಲ್ಲಿಯೇ ಇಟ್ಟುಕೊಂಡು ಚಡಪಡಿಸುವ ಕೌಶಲ್​ನಂಥ ತುಂಬಾ ಮಕ್ಕಳನ್ನು ನಾನು ನೋಡಿದ್ದೇನೆ. ಇದೇ ಕಾರಣಕ್ಕೆ ‘ಡ್ಯಾನ್ಸ್ ಔಟ್ ಆಫ್ ಪಾವರ್ಟಿ’ ಎಂಬ ಪ್ರಯೋಗ ಶುರು ಮಾಡಿದೆ. ಇದು ಬಡ ಮಕ್ಕಳಿಗಾಗಿಯೇ ಇರುವ ಪ್ರಯೋಗವಾಗಿದ್ದು, ಅವರಿಗೆ ಉಚಿತವಾಗಿ ಹೇಳಿಕೊಡುತ್ತಿದ್ದೇನೆ’ ಎನ್ನುತ್ತಾರೆ ವಿನಪ್ ಶರ್ವ.

‘ಮಕ್ಕಳಿಗೆ ಆಹಾರ, ಆರೋಗ್ಯ ಮತ್ತು ಶಿಕ್ಷಣವನ್ನು ಒದಗಿಸಲು ಕೆಲಸ ಮಾಡುವ ಹಲವಾರು ಸಂಘಟನೆಗಳು ಇವೆ. ಆದರೆ ನೃತ್ಯದಂತಹ ಪ್ರದರ್ಶನ ಕಲೆಗಳಲ್ಲಿ ಅವರಿಗೆ ತರಬೇತಿ ನೀಡುವುದರ ಬಗ್ಗೆ ಹೆಚ್ಚಾಗಿ ಗಮನಹರಿಸಲಿಲ್ಲ. ಆದ್ದರಿಂದ ಯುವ ಮನಸ್ಸುಗಳಿಗೆ ನೃತ್ಯದಲ್ಲಿ ಉಚಿತ ತರಬೇತಿ ನೀಡಲು ಆರಂಭಿಸಿದೆ.

ಒಳ್ಳೆಯ ಉದ್ಯೋಗ ಬಿಟ್ಟು ಕೈಯಲ್ಲಿ ಕಾಸಿಲ್ಲದೇ ಈ ಕೆಲಸ ಮಾಡಲು ಹೊರಟಾಗ ಅನೇಕ ಮಂದಿ ಟೀಕೆ ಮಾಡಿದರು. ಆದರೆ ನಾನು ತಲೆ ಕೆಡಿಸಿಕೊಳ್ಳಲಿಲ್ಲ’ ಎನ್ನುವ ವಿನಪ್, ಆರ್ಥಿಕ ಸಂಕಷ್ಟದ ನಡುವೆಯೂ 200 ಕ್ಕೂ ಹೆಚ್ಚು ಮಕ್ಕಳಿಗೆ ನೃತ್ಯ ಕಾರ್ಯಾಗಾರವನ್ನು ನಡೆಸಿದರು. ಇದಕ್ಕೆ ಬಂದ ಅಭೂತಪೂರ್ವ ಯಶಸ್ಸನ್ನು ಕಂಡು ಕಾರ್ಯಾಗಾರವನ್ನು ದೆಹಲಿಯಿಂದ ಮುಂಬೈಗೂ ವಿಸ್ತರಿಸಿದರು. ಈಗ ಈ ಸಂಸ್ಥೆಯಲ್ಲಿ 12 ಮಂದಿ ನೃತ್ಯ ನಿರ್ದೇಶಕರಿದ್ದು ಎಲ್ಲರೂ ಉಚಿತವಾಗಿ ನೃತ್ಯ ತರಬೇತಿ ನೀಡುತ್ತಿದ್ದಾರೆ.

ಎಲ್ಲ ನಿರ್ದೇಶಕರು ವಾರಕ್ಕೆ ಮೂರು ಬಾರಿ 90 ನಿಮಿಷಗಳ ಸೆಷನ್​ಗಳ ಮೂಲಕ ವಿಭಿನ್ನ ಫ್ರೀಸ್ಟೈಲ್ ಚಲನೆಗಳಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಾರೆ. ಪ್ರತಿಯೊಂದು ಕೊಳೆಗೇರಿಗಳಲ್ಲಿನ ಸಂಪೂರ್ಣ ಕಾರ್ಯಕ್ರಮವು ಸುಮಾರು ಆರು ತಿಂಗಳಿಂದ ಒಂದು ವರ್ಷದವರೆಗೆ ನಡೆಯುತ್ತದೆ. ಇಷ್ಟೇ ಅಲ್ಲದೆ, ಪ್ರತಿವರ್ಷ, ರಾಷ್ಟ್ರೀಯ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ಮಕ್ಕಳಿಗೆ ನೃತ್ಯ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ. ಇಲ್ಲಿಯವರೆಗೆ, ವಿನಯ್, ಕೌಶಲ್ ಮತ್ತು ಅವರ ತಂಡವು 2,500ಕ್ಕೂ ಹೆಚ್ಚು ಮಕ್ಕಳು, ಯುವಕ-ಯುವತಿಯರಿಗೆ ನೃತ್ಯದಲ್ಲಿ ತರಬೇತಿ ನೀಡಿದೆ. ಅವರಲ್ಲಿ 80 ಮಂದಿ ನೃತ್ಯ ಬೋಧಕರಾಗಿ ಉದ್ಯೋಗಾವಕಾಶಗಳನ್ನು ಪಡೆದಿದ್ದಾರೆ. ಪ್ರಸ್ತುತ ವಿನಯ್ 2020 ರ ವೇಳೆಗೆ ಇನ್ನೂ ಕನಿಷ್ಠ ಮೂರರಿಂದ ನಾಲ್ಕು ನಗರಗಳಿಗೆ ತಮ್ಮ ಯೋಜನೆಯನ್ನು ವಿಸ್ತರಿಸಿ, 10 ಸಾವಿರ ಮಕ್ಕಳಿಗೆ ತರಬೇತಿ ನೀಡಲು ಯೋಜಿಸಿದ್ದಾರೆ. ಇದರಲ್ಲಿ ಕೌಶಲ್ ಕೂಡ ಒಬ್ಬರು.

ವಿಡಿಯೋ ನ್ಯೂಸ್

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...