ಮೂಗೂರು: ರಾಜ್ಯ ಸರ್ಕಾರದ ಜನಪರ ಯೋಜನೆಗಳು ನನ್ನನ್ನು ಕೈ ಹಿಡಿದಿದ್ದು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಮತದಾರರು ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ನೂತನ ಸಂಸದ ಸುನೀಲ್ ಬೋಸ್ ಹೇಳಿದರು.
ಮಂಗಳವಾರ ಸಂಜೆ ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧಿಗಳಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಅದರಂತೆ ಕ್ಷೇತ್ರದಲ್ಲಿ ಎಲ್ಲರ ವಿಶ್ವಾಸ ಗಳಿಸಿ ಅಭಿವೃದ್ಧಿಯತ್ತ ಗಮನಹರಿಸಲಾಗುವುದು ಎಂದು ತಿಳಿಸಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಬಸವರಾಜು ಮಾತನಾಡಿದರು. ಇದಕ್ಕೂ ಮುನ್ನ ಪಕ್ಷದ ಕಾರ್ಯಕರ್ತರು, ಎಂ.ಡಿ.ಬಸವರಾಜು ಅಭಿಮಾನಿ ಬಳಗ ವತಿಯಿಂದ ದೇಗುಲ ಬಳಿ ಪಟಾಕಿ ಸಿಡಿಸಿ ಸಿಹಿ ಹಂಚಲಾಯಿತು. ಪಕ್ಷದ ಮುಖಂಡರಾದ ಹ್ಯಾಕನೂರು ಉಮೇಶ್, ಬನ್ನೂರು ಸ್ವಾಮಿಗೌಡ, ಚೆಲುವರಾಜು, ಎ.ಬಿ.ಮಂಜುನಾಥ್, ಎಂ. ಎನ್.ಸೋಮಣ್ಣ, ಎಂ.ಬಿ.ಸಾಗರ್, ಎಂ.ಎಂ.ಜಗದೀಶ್, ಚಿಕ್ಕಮಾಧು, ಶಿವಮಲ್ಲು, ಕನ್ನಹಳ್ಳಿ ಲಕ್ಷ್ಮಣ, ಶಿವಕುಮಾರ್, ಕನ್ನಹಳ್ಳಿ ಮೋಳೆ ನಟರಾಜ್, ನಾಗರಾಜು, ಲಕ್ಷ್ಮಿನಾರಾಯಣ, ನಾಗಣ್ಣ ಇತರರಿದ್ದರು.