More

  ಬೆಚ್ಚಿ ಬೀಳಿಸುವ ಡಿಜಿಟಲ್ ಅರೆಸ್ಟ್; ಸೈಬರ್ ಮಾಫಿಯಾ

  ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
  ನೀವಿರುವ ಜಾಗವೇ ಜೈಲು… ನಿಮ್ಮ ಕೈಯಲ್ಲಿರುವ ಮೊಬೈಲ್ ಅಥವಾ ನಿಮ್ಮ ಮುಂದಿರುವ ಕಂಪ್ಯೂಟರ್ ಪರದೆಯೇ ನಿಮ್ಮನ್ನು ಬಂಧಿಸಿರುವ ‘ಕೋಳ’…! ಇದನ್ನೇ ತಾಂತ್ರಿಕ ಪರಿಭಾಷೆಯಲ್ಲಿ ‘ಡಿಜಿಟಲ್ ಅರೆಸ್ಟ್’ ಎಂದು ವ್ಯಾಖ್ಯಾನಿಸಲಾಗುತ್ತದೆ. ಆದರೆ, ಇದು ಶಿಕ್ಷೆಯಲ್ಲ… ಜನರನ್ನು ಹೆದರಿಸಿ ಅವರ ಬಳಿಯಿರುವ ಹಣವನ್ನು ಲಪಟಾಯಿಸುವ ಸೈಬರ್ ಕ್ರಿಮಿನಲ್‌ಗಳ ಕೃತ್ಯ. ಹೀಗಾಗಿ ಪೊಲೀಸ್, ಕಸ್ಟಮ್ಸ್, ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡುವವರ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವ ಅಗತ್ಯವಿದೆ.

  ವಿಪರ್ಯಾಸವೆಂದರೆ ಐಟಿ ಸಿಟಿ ಬೆಂಗಳೂರಿನಲ್ಲೇ 300ಕ್ಕೂ ಅಧಿಕ ‘ಡಿಜಿಟಲ್ ಆರೆಸ್ಟ್’ ಪ್ರಕರಣಗಳು ದಾಖಲಾಗಿದ್ದು, ಸರ್ಕಾರಿ ಅಧಿಕಾರಿಗಳು, ಸ್‌ಟಾವೇರ್ ಇಂಜಿನಿಯರ್, ಉದ್ಯಮಿಗಳು, ನಿವೃತ್ತ ಅಧಿಕಾರಿ, ವಿಜ್ಞಾನಿಗಳು ವಂಚನೆಗೆ ಒಳಗಾಗಿದ್ದಾರೆ. ೆನ್ ಕಾಲ್ ಮಾಡಿ ಕಂಪ್ಯೂಟರ್ ಅಥವಾ ೆನ್‌ನಲ್ಲಿ ಲೈವ್‌ನಲ್ಲಿ ಇರಿಸಿಕೊಂಡು ಪೊಲೀಸ್ ಕೇಸ್, ಜೈಲು ಎಂದು ಬ್ಲ್ಯಾಕ್‌ಮೇಲ್ ಮಾಡಿ ಬ್ಯಾಂಕ್ ಖಾತೆಗೆ ಕನ್ನ ಅಥವಾ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಸೈಬರ್ ಅಪರಾಧ ಲೋಕದಲ್ಲಿ ಇದೊಂದು ದೊಡ್ಡ ಮಾಫಿಯಾ ಆಗಿ ಜನರಲ್ಲಿ ಭೀತಿ ಮೂಡಿಸಿದೆ.

  ಕೊರಿಯರ್, ಪಾರ್ಸೆಲ್ ಹೆಸರಲ್ಲಿ ಕರೆ: ಆರಂಭದಲ್ಲಿ ಯಾವುದೋ ಕೊರಿಯರ್ ಕಂಪನಿ ನೌಕರರ ಸೋಗಿನಲ್ಲಿ ಕರೆ ಮಾಡಿ, ಯಾವುದೋ ಊರಿಂದ ಮಾತನಾಡುತ್ತಿರುವುದಾಗಿ ಹೇಳುತ್ತಾರೆ. ‘ನಿಮ್ಮ ಆಧಾರ್ ನಂಬರ್, ಹೆಸರಿನಲ್ಲಿ ವಿದೇಶಕ್ಕೆ ಪಾರ್ಸೆಲ್ ಬುಕ್ ಆಗಿದೆ. ಹಳೆಯ ಪಾಸ್‌ಪೋರ್ಟ್, ಬ್ಯಾಂಕ್ ಕ್ರೆಡಿಟ್ ಕಾರ್ಡ್, ಡ್ರಗ್ಸ್ ಪಾರ್ಸೆಲ್‌ನಲ್ಲಿ ಪತ್ತೆಯಾಗಿದೆ. ಈ ಸಂಬಂಧ ಎನ್‌ಸಿಬಿ ಅಧಿಕಾರಿಗಳು ಮತ್ತು ಸೈಬರ್ ಕ್ರೈಂ ಪೊಲೀಸರು ಎ್ಐಆರ್ ದಾಖಲಿಸಿದ್ದಾರೆ’ ಎಂದು ಹೇಳುತ್ತಾರೆ.

  ಜತೆಗೆ ಆತನೇ ‘ಸ್ಕೈಪ್ ಆ್ಯಪ್’ ಲಿಂಕ್ ಕಳುಹಿಸಿ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಪೊಲೀಸರೊಂದಿಗೆ ಸಂಭಾಷಣೆ ನಡೆಸುವಂತೆ ಸಲಹೆ ಕೊಡುತ್ತಾರೆ. ಅಷ್ಟರಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿ ಸೋಗಿನಲ್ಲಿ ವಿಡಿಯೋ ಕಾಲ್ ಮಾಡಿ ನಕಲಿ ಐಡಿ ಕಾರ್ಡ್ ತೋರಿಸಿ ಮಾತು ಶುರು ಮಾಡುತ್ತಾನೆ.
  ವಿದೇಶಕ್ಕೆ ನಿಮ್ಮ ಹೆಸರಿನಲ್ಲಿ ಪಾರ್ಸೆಲ್ ಹೋಗುತ್ತಿದ್ದು, ಅದರಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಇದರ ಮೇರೆಗೆ ನಾರ್ಕೋಟಿಕ್ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಇದಲ್ಲದೆ, ನಿಮ್ಮ ಆಧಾರ್ ದುರ್ಬಳಕ್ಕೆ ಮಾಡಿಕೊಂಡು ಬ್ಯಾಂಕ್ ಖಾತೆ ತೆರೆದು ಕೋಟ್ಯಂತರ ರೂಪಾಯಿ ಅಕ್ರಮ ವಹಿವಾಟು ನಡೆದಿದೆ. ಇದರ ಮೇರೆಗೆ ಲೇವಾದೇವಿ ಕಾಯ್ದೆಯಡಿಯೂ ಪ್ರಕರಣ ಸಹ ದಾಖಲಾಗಿದೆ ಎಂದು ಹೆದರಿಸುತ್ತಾನೆ.

  ತಪ್ಪಿಸಿಕೊಳ್ಳೋಕು ದಾರಿ ತೋರಿಸ್ತಾರೆ: ಈ ಕೇಸಿನಿಂದ ನಿಮಗೆ ನಿರಪರಾಧಿ ಪ್ರಮಾಣಪತ್ರ ಕೊಡುತ್ತೇವೆ. ನಾವು ಹೇಳಿದಂತೆ ಕೇಳಬೇಕು. ಮುಂಬೈ ಸೈಬರ್ ಕ್ರೈಂ ವಿಭಾಗದ ಡಿಸಿಪಿ ವರ್ಚುವಲ್ ವಿಚಾರಣೆ ಮತ್ತು ತನಿಖೆ ನಡೆಸಲಿದ್ದಾರೆ. ಅಲ್ಲಿಯವರೆಗೂ ಯಾರೊಂದಿಗೂ ಮಾಹಿತಿ ಹಂಚಿಕೊಳ್ಳಬಾರದು. ತಪ್ಪಿದರೆ ಸ್ಥಳೀಯ ಪೊಲೀಸ್ ಸಹಾಯದಿಂದ ಬಂಧಿಸಬೇಕಾಗುತ್ತದೆ ಎಂದು ಬೆದರಿಕೆ ನೀಡಲಾಗುತ್ತದೆ. ಈ ವೇಳೆಗೆ ಕಂಪ್ಯೂಟರ್ ಅಥವಾ ಮೊಬೈಲ್ ಪರದೆ ಎದುರೇ ನೀವು ‘ಸ್ತಬ್ಧ’ರಾಗಿರುತ್ತೀರಿ. ಇದಾದ ಕೆಲ ಹೊತ್ತಿಗೆ ಹಿರಿಯ ಅಧಿಕಾರಿ ಸೋಗಿನಲ್ಲಿ ಮತ್ತೊಬ್ಬ ವಿಡಿಯೋ ಕಾಲ್ ಮಾಡಿ ವಿಚಾರಣೆ ನೆಪದಲ್ಲಿ ಬ್ಯಾಂಕ್ ಖಾತೆ ಮಾಹಿತಿ ಕಲೆ ಹಾಕುತ್ತಾನೆ.

  ಅಂದರೆ ‘ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಹಣ ಮತ್ತು ಎ್ಡಿ ಇದ್ದರೂ ಅದನ್ನು ಡ್ರಾ ಮಾಡಿ ಆರ್‌ಬಿಐ ರಹಸ್ಯ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಕೇಸ್ ಕ್ಲಿಯರ್ ಆದ ಅರ್ಧ ಗಂಟೆಯಲ್ಲಿ ನಿಮ್ಮ ಖಾತೆಗೆ ಜಮೆ ಆಗಲಿದೆ ಎಂದು ಸಲಹೆ ಕೊಡುತ್ತಾರೆ. ನಿಜ ಇರಬೇಕೆಂದು ವಂಚಕರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿ ಮೋಸಕ್ಕೆ ಒಳಗಾಗುತ್ತಿದ್ದಾರೆ.

  ಸ್ಕೈಪ್ ಆ್ಯಪ್ ಬಳಕೆ

  ಪೊಲೀಸರ ತನಿಖೆ ದಾರಿ ತಪ್ಪಿಸಲು ಸೈಬರ್ ಕಳ್ಳರು, ಸಿಮ್ ಕಾರ್ಡ್ ಬಳಸುತ್ತಿಲ್ಲ. ಬದಲಿಗೆ ಸ್ಕೈಪ್ ಆ್ಯಪ್‌ನಲ್ಲಿ ಅಮಾಯಕರ ಜತೆ ಸಂಭಾಷಣೆ ನಡೆಸುತ್ತಿದ್ದಾರೆ. ಬ್ಯಾಂಕ್ ಖಾತೆಗೆ ಹಣ ಜಮೆಯಾದ ಕೂಡಲೇ ಡ್ರಾ ಮಾಡಿಕೊಂಡು ಕ್ರಿಪ್ಟೋ ಕರೆನ್ಸಿ ಮೂಲಕ ಬೇರೆಡೆ ವರ್ಗಾವಣೆ ಮಾಡುತ್ತಿದ್ದು, ಇದನ್ನು ವಶಪಡಿಸಿಕೊಳ್ಳುವುದು ಪೊಲೀಸರಿಗೂ ಸವಾಲಾಗಿದೆ.

  ಆಧಾರ್ ವಿವರವೇ ; ಬೆದರಿಕೆಗೆ ದಾರಿ

  ಆಧಾರ್ ಕಾರ್ಡನ್ನೇ ಟಾರ್ಗೆಟ್ ಮಾಡುವ ಸೈಬರ್ ಕಳ್ಳರು, ಜನರಿಗೆ ಮೊದಲಿಗೆ ನಿಮ್ಮ ಆಧಾರ್ ಬಳಸಿ ಹಲವು ಸಿಮ್ ಕಾರ್ಡ್ ಖರೀದಿಸಿ ಉಗ್ರ ಸಂಘಟನೆ ಜತೆಗೆ ಸಂಭಾಷಣೆ ಅಥವಾ ಕೋಮು ಗಲಭೆ ಸೃಷ್ಟಿಸುವ ಸಂದೇಶ ವೈರಲ್ ಆಗುತ್ತಿವೆ. ತನಿಖೆ ನಡೆಸಬೇಕೆಂದು ಆಧಾರ್‌ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ವಿವರ ಪಡೆದು ಕನ್ನ ಹಾಕುತ್ತಿದ್ದಾರೆ. ಮತ್ತೊಂದು ಕೇಸಿನಲ್ಲಿ ವಿದೇಶಕ್ಕೆ ಮಕ್ಕಳನ್ನು ಮಾನವ ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಬ್ಲ್ಯಾಕ್‌ಮೇಲ್ ಮಾಡಿ ಅಪರಿಚಿತ ವಿಡಿಯೋ, ೆಟೋ ತೋರಿಸಿ ವರ್ಚ್ಯುವಲ್ ವಿಚಾರಣೆ ನೆಪದಲ್ಲಿ ಹಣ ದೋಚುತ್ತಿದ್ದಾರೆ.

  4 ಗಂಟೆ ಸೆರೆ, ₹1.52 ಕೋಟಿಗೆ ಕನ್ನ

  ಮೈಕೋ ಲೇಔಟ್ ಎಲ್ ಆ್ಯಂಡ್ ಟಿ ಸೌತ್ ಸಿಟಿಯ ದೇಬಶಿಸ್ ದಾಸ್ ಎಂಬುವರನ್ನು ನ.10ರ ಮಧ್ಯಾಹ್ನ 12 ಗಂಟೆಗೆ ಡಿಜಿಟಲ್ ಆರೆಸ್ಟ್ ಮಾಡಿ 4 ತಾಸು ಕೂರಿಸಿಕೊಂಡು 1.52 ಕೋಟಿ ರೂ. ದೋಚಿದ್ದಾರೆ.

  ಐಐಎಸ್ಸಿ ವಿಜ್ಞಾನಿ ಮಿಡ್‌ನೈಟ್ ಸೆರೆ

  ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿಯೊಬ್ಬರಿಗೆ ಡಿ.15ರ ಸಂಜೆ 4 ಗಂಟೆಗೆ ಮೊದಲ ಕರೆ ಮಾಡಿದ ಸೈಬರ್ ಕಳ್ಳರು ಡಿ.16ರ ತಡರಾತ್ರಿ 12 ವರೆಗೂ ‘ಪರದೆ ಎದುರೇ’ ಇರುವಂತೆ ಮಾಡಿ ಬರೋಬ್ಬರಿ 83 ಲಕ್ಷ ರೂ. ಸುಲಿಗೆ ಮಾಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts