ಚಿಮ್ಮಡ: ನಿಶ್ಚಿತಾರ್ಥಕ್ಕೆಂದು ರಜೆಗೆ ಗ್ರಾಮಕ್ಕೆ ಆಗಮಿಸಿದ ಯೋಧ ದಾನೇಶ ಈಶ್ವರ ಹಳ್ಳೂರ ತುರ್ತು ಕರೆಯ ಮೇರೆಗೆ ರಜೆ ಮೊಟಕುಗೊಳಿಸಿ ಬುಧವಾರ ಮತ್ತೆ ಸೇವೆಗೆ ಮರಳಿದರು.

ಕಳೆದ ಹದಿನೈದು ದಿನಗಳ ಹಿಂದೆ ರಜೆಗೆ ಆಗಮಿಸಿದ್ದ ಯೋಧ ದಾನೇಶ ಒಂದು ವಾರದ ಹಿಂದೆ ನಂದೇಶ್ವರದ ಶ್ರುತಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಜೆ ಇನ್ನೂ ಹದಿನೈದು ದಿನ ಇರುವಾಗಲೇ ದೇಶದ ಗಡಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಸೇನಾ ಕಚೇರಿಯಿಂದ ತುರ್ತು ಕರೆ ಬಂದಿದ್ದರಿಂದ ಕರ್ತವ್ಯ ಸ್ಥಳವಾದ ಪಂಜಾಬ್‌ಗೆ ಮರಳಿದರು.
ಸ್ಥಳೀಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ದಾನೇಶ ಅವರನ್ನು ಸತ್ಕರಿಸಿ ಆಶೀರ್ವಾದಿಸಿದರು. ಕುಟುಂಬ ಸದಸ್ಯರು, ಸ್ನೇಹಿತರು ಭಾವುಕರಾಗಿ ಪುಪ್ಪವೃಷ್ಟಿಯೊಂದಿಗೆ ಬೀಳ್ಕೊಟ್ಟರು.