ತಂಬಾಕು ಬೆಳೆ ಬೆಂಕಿಗಾಹುತಿ


ಸರಗೂರು: ತಾಲೂಕಿನ ಹಂಚೀಪುರ ಗ್ರಾಮದಲ್ಲಿ ಹೊಗೆಸೊಪ್ಪು ಹದ ಮಾಡುವ ಬ್ಯಾರಲ್‌ಗೆ ಸೋಮವಾರ ಬೆಂಕಿ ತಗುಲಿ ತಂಬಾಕು ಬೆಳೆ ಸುಟ್ಟು ಕರಕಲಾಗಿದೆ.
ಗ್ರಾಮದ ಸರ್ವಮಂಗಳಮ್ಮ ಎಂಬುವರು ತಮ್ಮ ಜಮೀನಿನಲ್ಲಿ ತಂಬಾಕು ಕೃಷಿ ಮಾಡಿದ್ದರು. ಬೆಳೆ ಬಂದ ನಂತರ ಸೊಪ್ಪನ್ನು ಹದ ಮಾಡಲು ಬ್ಯಾರಲ್‌ನಲ್ಲಿ ಇಡಲಾಗಿತ್ತು. ಇದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಹೊಗೆಸೊಪ್ಪು ಸಂಪೂರ್ಣವಾಗಿ ನಾಶವಾಗಿದೆ.
ಸುಮಾರು 350 ಕೆ.ಜಿ.ಯಷ್ಟು ಸೊಪ್ಪು ಭಸ್ಮವಾಗಿದ್ದು, ಅಂದಾಜು 1.5 ಲಕ್ಷ ರೂ. ನಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *