ಮೈಸೂರು: ದೇಶಕ್ಕೆ ಅರಣ್ಯ ಹೇಗೆ ಮುಖ್ಯನೋ ಹಾಗೆಯೇ ದೇಶಕ್ಕೆ ರಂಗಭೂಮಿಯೂ ಮುಖ್ಯ ಎಂಬುದನ್ನು ಸಮಾಜಕ್ಕೆ ಹೇಳಬೇಕು. ಮೈಸೂರು ಅದ್ಭುತವಾದ ಸಾಂಸ್ಕೃತಿಕ ಕೇಂದ್ರವಾಗುತ್ತಿದೆ. ಇಂತಹ ಉತ್ಸವಗಳು ನಡೆಯಲು ರಂಗಾಸಕ್ತರು ಕಾರಣ. ಆದರೆ, ಈ ಸಂದರ್ಭದಲ್ಲಿ ರಂಗಾಯಣವನ್ನು ಉಳಿಸಿಕೊಳ್ಳಬೇಕಾದ ಸ್ಥಿತಿಯಲ್ಲಿ ಇದ್ದೇವೆ ಎಂದು ನಟ ಪ್ರಕಾಶ್‌ರಾಜ್ ಬೇಸರ ವ್ಯಕ್ತಪಡಿಸಿದರು.
ಮೈಸೂರು ರಂಗಾಯಣ ಮಂಗಳವಾರ ಆಯೋಜಿಸಿದ್ದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಹವ್ಯಾಸಿ ರಂಗಭೂಮಿ ಕಲಾವಿದರು ಸಹ ರಂಗಾಯಣವನ್ನು ಉಳಿಸಿಕೊಳ್ಳಬೇಕಾಗಿದೆ. ರಂಗಾಯಣದ ಹೆಸರಿನಲ್ಲಿ ಒಂದು ಕಟ್ಟಡ ವನ್ನು ಸಹ ಕಟ್ಟಲು ಸಾಧ್ಯವಾಗದ ಪರಿಸ್ಥಿತಿ ಇದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಥವಾ ಜಿಲ್ಲಾಧಿಕಾರಿ ಹೆಸರಿನಲ್ಲಿ ಕಟ್ಟಡ ನಿರ್ಮಿಸಬೇಕಾ ಗುತ್ತದೆ. ರಂಗಾಯಣಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಸರ್ಕಾರ ಅನುದಾನ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ರಂಗಾಯಣವನ್ನು ಉಳಿಸಿಕೊಳ್ಳುವ ಕುರಿತು ಚರ್ಚಿಸೋಣ ಎಂದರು.