More

    ಹಾನಗಲ್ಲನಲ್ಲಿ ತರಕಾರಿ – ಕಾಳು ಮಾರಾಟಕ್ಕೆ ಪ್ರತ್ಯೇಕ ಸ್ಥಳ

    ಹಾನಗಲ್ಲ: ಪಟ್ಟಣದ ವಾರದ ಸಂತೆ ದಿನದಂದು ಯಾವ ವಸ್ತುಗಳನ್ನು ಯಾವ ಬೀದಿಗಳಲ್ಲಿ ಮಾರಾಟ ಮಾಡಬೇಕು ಎಂಬುದನ್ನು ನಿರ್ಧರಿಸಲಾಗಿದ್ದು, ಮಾರಾಟಗಾರರು ಕಡ್ಡಾಯವಾಗಿ ಸೂಚನೆಗಳನ್ನು ಪಾಲಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ ಹೇಳಿದರು.


    ಪುರಸಭೆ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಸಂತೆ ಮಾರಾಟದ ಕುರಿತು ಮಾರಾಟಗಾರರಿಗೆ ಸೂಚನೆಗಳನ್ನು ನೀಡಿದರು.

    ಹಾನಗಲ್ಲ- ಶಿವಮೊಗ್ಗ ಹೆದ್ದಾರಿಯಲ್ಲಿ ವಾಹನ ನಿಲುಗಡೆ ಮತ್ತು ತರಕಾರಿ ಇತರ ವಸ್ತುಗಳನ್ನು ಮಾರಾಟ ಮಾಡುವುದರಿಂದ ಸಂಚಾರಕ್ಕೆ ವ್ಯತ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ ಮಾರಾಟಗಾರರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಯಿತು.


    ಬನಶಂಕರಿ ದೇವಸ್ಥಾನದಿಂದ ದತ್ತಾತ್ರೇಯ ದೇವಸ್ಥಾನದವರೆಗೆ ತರಕಾರಿ ಮಾರಾಟ. ಚಾವಡಿ ಕ್ರಾಸ್‌ನಿಂದ ಪ್ರಸನ್ನ ಮಾರುತಿ ದೇವಸ್ಥಾನದವರೆಗೆ ಕಾಳು- ಕಡಿ ಮಾರಾಟ. ಕೈ ಗಾಡಿಗಳನ್ನು ಸಂತೆಯ ಫುಟ್‌ಪಾತ್ ಮೇಲೆ ಇಟ್ಟು ಮಾರಾಟ ಮಾಡುವುದು.

    ಚಾವಡಿ ಕ್ರಾಸ್‌ನಿಂದ ಗಜಾನನ ಭವನದವರೆಗೆ ಹಣ್ಣು ಹಾಗೂ ಇತರ ಅಂಗಡಿ ಹಚ್ಚಬೇಕು. ಹಳೆಯ ತರಕಾರಿ ವ್ಯಾಪಾರಿಗಳಿಗೆ (2 ವರ್ಷಗಳ ಹಿಂದೆ) ಮೊದಲಿದ್ದ ಜಾಗವನ್ನು ಬಿಟ್ಟು ಕೊಡಬೇಕು.

    ಕಲ್ಲಭಾವಿ ಸಮೀಪದ ಹೆದ್ದಾರಿಯಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ. ಪ್ರಸನ್ನ ಮಾರುತಿ ದೇವಸ್ಥಾನದಿಂದ ಕಲ್ಲಭಾವಿ ರಸ್ತೆವರೆಗೆ ಯಾವುದೇ ವಸ್ತುಗಳನ್ನು ಮಾರಾಟಕ್ಕೆ ಇಡುವಂತಿಲ್ಲ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.


    ಸಿಪಿಐ ಎಸ್.ಆರ್. ಶ್ರೀಧರ, ಪಿಎಸ್‌ಐ ಶರಣಬಸಪ್ಪ ಕಾಂದೆ, ಪುರಸಭೆ ಸದಸ್ಯ ಪರಶುರಾಮ ಖಂಡೂನವರ, ಸಂತೆ ವ್ಯಾಪಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts