More

    ರಾಜ್ಯದ ಮೊದಲ ಮಹಿಳಾ ಶಿಲ್ಪಿ ಕನಕ ಮೂರ್ತಿ ನಿಧನ

    ಬೆಂಗಳೂರು: ರಾಜ್ಯದ ಪ್ರಸಿದ್ಧ ಶಿಲ್ಪಿ ಕನಕ ಮೂರ್ತಿ(79)ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಕನಕ ಮೂರ್ತಿ ಅವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು(ಗುರುವಾರ) ಬೆಳಗ್ಗೆ ನಿಧನರಾದರು.

    ಬಾಲ್ಯದಲ್ಲೇ ಶಿಲ್ಪ ಕಲೆಯತ್ತ ಆಸಕ್ತಿ ಬೆಳೆಸಿಕೊಂಡಿದ್ದ ಕನಕಮೂರ್ತಿ ಅವರು ಬಹುಬೇಗ ನಾಡಿನ ಪ್ರಮುಖ ಶಿಲ್ಪಿ ಎನ್ನಿಸಿ ಕೊಂಡಿದ್ದರು. ಪ್ರಥಮ ಮಹಿಳಾ ಶಿಲ್ಪಿ ಎಂಬ ಖ್ಯಾತಿಯನ್ನೂ ಗಳಿಸಿದ್ದರು. ಲಾಲ್​ಬಾಗ್ ಬಳಿಯ ಕುವೆಂಪು ಪ್ರತಿಮೆ, ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲಿ ರೈಟ್ ಸೋದರರ ಪ್ರತಿಮೆ, ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ, ಕೆ.ಎಂ.ಮುನ್ಶಿ ಹೀಗೆ ಅನೇಕ ಶಿಲ್ಪಗಳನ್ನು ನಿರ್ಮಿಸಿದ್ದಾರೆ. ಬಾಣಸವಾಡಿಯಲ್ಲಿರುವ 11 ಅಡಿ ಎತ್ತರದ ಆಂಜನೇಯ ಪ್ರತಿಮೆ ಇವರ ಮತ್ತೊಂದು ಸಾಧನೆ. ಶಿಲ್ಪರೇಖಾ ಮತ್ತು ತಮ್ಮ ಆತ್ಮ ಕಥೆ ‘ಹೌದು, ಇದು ನಾನೇ’ ಕೃತಿಗಳನ್ನೂ ರಚಿಸಿರುವ ಕನಕ ಮೂರ್ತಿ ಅವರಿಗೆ ಶಿಲ್ಪಕಲಾ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸುವರ್ಣ ಕರ್ನಾಟಕ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ. ಮೃತರಿಗೆ ಪತಿ ನಾರಾಯಣ ಮೂರ್ತಿ ಮತ್ತು ಮಗಳು ಸುಮತಿ ಇದ್ದಾರೆ.

    ಚಾಮರಾಜನಗರ ಆಕ್ಸಿಜನ್​ ದುರಂತ: ರೋಹಿಣಿ ಸಿಂಧೂರಿ ಸೇಫ್​​, ಕೊನೆಗೂ ಆ ದಿನದ ರಹಸ್ಯ ಬಿಚ್ಚಿಟ್ಟ ಸಮಿತಿ

    ಮಹಿಳೆ ಮೃತಪಟ್ಟ ಸಿಟ್ಟಿಂದ ಹಾವು ಕೊಂದ ಕುಟುಂಬಸ್ಥರಿಗೆ ಶಾಕ್​! ತಾಯಿ ಸಾವಿಗೆ ಸೇಡು ತೀರಿಸಿಕೊಂಡ ಹಾವಿನ ಮರಿಗಳು

    ಅನುಮಾನಾಸ್ಪದವಾಗಿ ಪತ್ನಿ ಸತ್ತ 5 ದಿನಕ್ಕೆ ಸಾವಿನ ಮನೆಯ ಕದ ತಟ್ಟಿದ ಟೆಕ್ಕಿ! ಕಳೆದ ತಿಂಗಳಷ್ಟೆ ಮದ್ವೆ ಆಗಿದ್ದವರ ಬದುಕಲ್ಲಿ ದುರಂತ

    ಗಂಡನ ಪ್ರಾಣ ಉಳಿಸಿಕೊಡಿ ಎಂದು ಅಂಗಲಾಚಿದ ಮಹಿಳೆಯನ್ನು ಮಂಚಕ್ಕೆ ಕರೆದ ಕೋವಿಡ್​ ಆಸ್ಪತ್ರೆ ಸಿಬ್ಬಂದಿ: ಮುಂದಾಗಿದ್ದು ದುರಂತ!

    ಲೈಂಗಿಕ ಕ್ರಿಯೆ ನಡೆಸಿದ ಕೋಣೆಯಲ್ಲೇ ವಿಷ ಕುಡಿದ ಪ್ರೇಮಿಗಳು: ಸಾವಿಗೂ ಮುನ್ನ ಪಾಲಕರಿಗೆ ಬಾಲಕಿ ಹೇಳಿದ್ಲು ಸ್ಫೋಟಕ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts