More

  ಸಾಗರದ ಲಾಡ್ಜ್​ನಲ್ಲಿ ಯುವಕರಿಬ್ಬರು ಆತ್ಮಹತ್ಯೆ! ಸಾವಿಗೂ ಮುನ್ನ ವ್ಯಕ್ತಿಯೊಬ್ಬರ ಫೋಟೋಗೆ ಪೂಜೆ ಮಾಡಿದ್ದರು…

  ಸಾಗರ: ಶಿವಮಮೊಗ್ಗ ಜಿಲ್ಲೆ ಸಾಗರ ನಗರದ ಲಾಡ್ಜ್​ವೊಂದರಲ್ಲಿ ಯುವಕರಿಬ್ಬರು ನೇಣಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಲಾಡ್ಜ್​ನ ರೂಮಿನಲ್ಲೇ ವ್ಯಕ್ತಿಯೊಬ್ಬರ ಫೋಟೋಗೆ ಪೂಜೆ ಮಾಡಿದ್ದಾರೆ.

  ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದ ಸಂತೋಷ ಅಡವಿನ್ನವರ(23) ಮತ್ತು ಹನುಮಂತ ಆಲಗೂರ(28) ಆತ್ಮಹತ್ಯೆ ಮಾಡಿಕೊಂಡವರು.

  ಸಂತೋಷ್ ಮತ್ತು ಹನುಮಂತ ಅವರು ಸೆ.24ರ ತಡರಾತ್ರಿ ಲಾಡ್ಜ್​ಗೆ ಬಂದು ರೂಂ ಬಾಡಿಗೆಗೆ ಪಡೆದಿದ್ದರು. ಶನಿವಾರ ಮಧ್ಯಾಹ್ನ ಇಬ್ಬರೂ ಹೊರಗೆ ಬಂದು ಊಟ ತೆಗೆದುಕೊಂಡು ರೂಮ್ ಸೇರಿಕೊಂಡಿದ್ದರು. ಶನಿವಾರ ರಾತ್ರಿ 8.30ಕ್ಕೆ ರೂಮ್ ಬಾಯ್​ ಊಟ ಬೇಕೇ? ಎಂದು ಕೇಳಲು ಬಾಗಿಲು ಬಡಿದಾಗ ಇಬ್ಬರೂ ಹೊರಗೆ ಬಂದಿರಲಿಲ್ಲ. ಇಬ್ಬರೂ ಮಲಗಿರಬೇಕೆಂದು ರೂಮ್​ ಬಾಯ್ ವಾಪಸ್ ಹೋಗಿದ್ದ. ಭಾನುವಾರ ಬೆಳಗ್ಗೆ ರೂಮಿನ ಬಾಗಿಲು ಬಡಿದಾಗಲೂ ತೆರೆಯಲಿಲ್ಲ. ಇದರಿಂದ ಅನುಮಾನಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ರೂಮಿನ ಬಾಗಿಲು ಒಡೆದು ನೋಡಿದಾಗ ಇಬ್ಬರ ಶವಗಳು ಸೀಲಿಂಗ್​ಗೆ ಅಳವಡಿಸಿದ್ದ ಎರಡು ಫ್ಯಾನಿನಲ್ಲಿ ನೇತಾಡುತ್ತಿದ್ದವು.

  ಸಾವಿಗೂ ಮುನ್ನ ಮದ್ಯಪಾನ‌ ಮಾಡಿ ಊಟ ಮಾಡಿದ್ದ ಯುವಕರು‌, ವ್ಯಕ್ತಿಯಯೊಬ್ಬರ ಫೋಟೋಗೆ ಪೂಜೆ ಮಾಡಿ ಫೋಟೋ ಎದುರೇ ಮದ್ಯ ಇಟ್ಟಿದ್ದಾರೆ.

  ಊರಿನಲ್ಲಿ ಜಾತ್ರೆ ಇರುವ ಹಿನ್ನೆಲೆಯಲ್ಲಿ ಬನಹಟ್ಟಿಗೆ ಬರುವುದಾಗಿ ಕುಟುಂಬಸ್ಥರಿಗೆ ಕರೆ ಮಾಡಿ ಹೇಳಿದ್ದ ಯುವಕರು‌, ಬನಹಟ್ಟಿಗೆ ಹೋಗದೆ ಸಾಗರಕ್ಕೆ ಏಕೆ ಬಂದಿದ್ದರು ಎಂಬುದು ತನಿಖೆ ಬಳಿಕ ಬಯಲಾಗಬೇಕಿದೆ. ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಪ್ರಿಯಕರನ ಕೊಲ್ಲಲು ಮತ್ತೊಬ್ಬನೊಂದಿಗೆ ವಿವಾಹಿತೆಯ ಕಾಮದಾಟ: ಬೆಚ್ಚಿಬೀಳಿಸುತ್ತೆ ಇವಳ ಅಸಲಿ ಮುಖ!

  ಪ್ರಿಯಕರನೊಂದಿಗೆ ಕಬ್ಬಾಳು ಬೆಟ್ಟದಿಂದ ಹಾರಿ ಪ್ರಾಣಬಿಟ್ಟ ವಿವಾಹಿತೆ! 4 ದಿನದ ಬಳಿಕ ಬೆಚ್ಚಿಬಿದ್ದ ಸ್ಥಳೀಯರು

  ಟ್ಯೂಷನ್​ ಮುಗಿಸಿ ಮನೆಗೆ ಬಂದ ಬಾಲಕ ಚೀರಾಡುತ್ತಾ ಹೊರ ಓಡಿದ… ಒಳಹೊಕ್ಕ ಸ್ಥಳೀಯರಿಗೆ ಕಾದಿತ್ತು ಶಾಕ್​!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts