More

  ಸ್ನೇಹಿತರ ಗಲಾಟೆ, ಮಕ್ಕಳ ಏರ್ ಪಿಸ್ತೂಲ್ ಪ್ರದರ್ಶನ

  ಶಿವಮೊಗ್ಗ: ಸ್ನೇಹಿತನಿಗೆ ಮಕ್ಕಳ ಆಟಿಕೆಯ ನಕಲಿ ಏರ್ ಪಿಸ್ತೂಲ್ ತೋರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರುದ್ಧ ಸಾಗರ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಕಲಿ ಏರ್ ಪಿಸ್ತೂಲ್‌ನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

  ಭಾನುವಾರ ರಾತ್ರಿ ಸ್ನೇಹಿತರಾದ ಆಯನೂರಿನ ದರ್ಶನ್ (19) ಮತ್ತು ಸಾಗರ ಪಟ್ಟಣದ ನವೀನ್ (25) ಸಾಗರಟೌನ್‌ನ ಜಿ.ಪಿ.ರಸ್ತೆಯಲ್ಲಿ ಗಲಾಟೆ ಮಾಡಿಕೊಂಡಿದ್ದರು. ಈ ವೇಳೆ ದರ್ಶನ್ ಮಕ್ಕಳ ಆಟಿಕೆಯ ಏರ್ ಪಿಸ್ತೂಲ್ ತೋರಿಸಿದ್ದ. ಈ ವಿಡಿಯೋ ವೈರಲ್ ಆಗಿತ್ತು. ಸಾಗರ ಟೌನ್ ಇನ್‌ಸ್ಪೆಕ್ಟರ್ ಸೀತರಾಮ್ ಮತ್ತು ಸಿಬ್ಬಂದಿ ವಿಡಿಯೋ ಪರಿಶೀಲಿಸಿ ಯುವಕರಿಬ್ಬರನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ನಕಲಿ ಏರ್ ಪಿಸ್ತೂಲ್ ಎಂಬುದು ಗೊತ್ತಾಗಿದೆ. ಇಬ್ಬರಿಗೂ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts