ಸಿನಿಮಾ

ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ರಸ್ತೆ ಓಟ

ಮೈಸೂರು ಜಿಲ್ಲಾ ಮಾಸ್ಟರ್ಸ್‌ ಅಥ್ಲೆಟಿಕ್ಸ್ ಅಸೋಸಿಯೇಷನ್ ಹಾಗೂ ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಮೇ 28 ರಂದು ರಸ್ತೆ ಓಟ ಸ್ಪರ್ಧೆ ಆಯೋಜಿಸಿದೆ.

‘ಆರ್.ಎಂ.ಎಂ. ವಿಜಯಲಕ್ಷ್ಮಿ ನಾರಾಯಣಸಿಂಗ್ ಮೆಮೋರಿಯಲ್ ರೋಡ್‌ರೇಸ್ ಆರೋಗ್ಯಕ್ಕಾಗಿ ಓಟ ಅಥ್ಲೆಟಿಕ್ಸ್ ಸಂಭ್ರಮ’ ಎಂಬ ಶೀರ್ಷಿಕೆಯಲ್ಲಿ ಅಂದು ಬೆಳಗ್ಗೆ 6.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಿವಿಧ ವಿಭಾಗದಲ್ಲಿ ಓಟ ಸ್ಪರ್ಧೆ ಜರುಗಲಿದೆ.
10 ವರ್ಷದ ಒಳಗಿನ ಬಾಲಕ/ಬಾಲಕಿಯರಿಗೆ 100 ಮೀ.ಓಟ, 12 ವರ್ಷ ಒಳಗಿನ ಬಾಲ/ಬಾಲಕಿಯರಿಗೆ 1 ಕಿ.ಮೀ. ಓಟ, 14 ವರ್ಷದೊಳಗಿನ ಬಾಲಕ/ಬಾಲಕಿಯರಿಗೆ 2 ಕಿ.ಮೀ. ಓಟ, 17 ವರ್ಷದೊಳಗಿನ ಬಾಲಕ/ಬಾಲಕಿಯರಿಗೆ 4 ಕಿ.ಮೀ.ಓಟ, 20 ವರ್ಷದೊಳಗಿನ ಯುವಕ/ಯುವತಿಯರಿಗೆ 5 ಕಿ.ಮೀ.ಓಟ ಹಾಗೂ 35 ವರ್ಷದಿಂದ 65 ವರ್ಷ ಮೇಲ್ಪಟ್ಟವರಿಗೆ 1 ಕಿ.ಮೀ. ಓಟದ ಸ್ಪರ್ಧೆ ನಡೆಯಲಿದೆ.

ಪ್ರತಿ ವಿಭಾಗದಲ್ಲಿ ಮೊದಲ 6 ಸ್ಥಾನ ಪಡೆದ ಸ್ಪರ್ಧಿಗಳಿಗೆ ಪ್ರಶಸ್ತಿ ಪತ್ರ, ಮೊದಲ ಮೂರು ಸ್ಥಾನಗಳಿಸಿದ ಸ್ಪರ್ಧಿಗಳಿಗೆ ನಗದು ಬಹುಮಾನ ನೀಡಲಾಗುತ್ತದೆ. ಪ್ರವೇಶ ಉಚಿತ ಕಲ್ಪಿಸಲಾಗಿದ್ದು, ನೋಂದಾಣಿಗೆ ಮೊ.ಸಂಖ್ಯೆ 9901841314/9731808008 ಅನ್ನು ಸಂಪರ್ಕಿಸಲು ಪ್ರಕಣೆಯಲ್ಲಿ ಕೋರಲಾಗಿದೆ.

Latest Posts

ಲೈಫ್‌ಸ್ಟೈಲ್