ನರಗುಂದ: ಮೊಬೈಲ್ ಆ್ಯಪ್ ಮತ್ತು ವೆಬ್ ಅಪ್ಲಿಕೇಷನ್‌ಗಳ ಮೂಲಕ ಕಾರ್ಯ ನಿರ್ವಹಿಸುತ್ತಿರುವಾಗ ಆಗತ್ತಿರುವ ತಾಂತ್ರಿಕ ದೋಷಗಳನ್ನು ನಿವಾರಿಸಬೇಕು ಹಾಗೂ ಅಗತ್ಯ ಸಲಕರಣೆ ವಿತರಿಸಬೇಕು ಎಂದು ಆಗ್ರಹಿಸಿ ಗ್ರಾಮಾಡಳಿತಾಧಿಕಾರಿಗಳು ತಹಸೀಲ್ದಾರ್ ಶ್ರೀಶೈಲ ತಳವಾರ ಮೂಲಕ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೋಮವಾರ ಮನವಿ ಸಲ್ಲಿಸಿದರು.
ಕಂದಾಯ ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ತಂತ್ರಾಶಗಳ ಮೂಲಕ ಕಾರ್ಯನಿರ್ವಹಿಸುವಂತೆ ನಮ್ಮ ಮೇಲೆ ಒತ್ತಡವಿದೆ. ಆದರೆ, ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯವಿರುವ ಮೊಬೈಲ್, ಲ್ಯಾಪ್‌ಟಾಪ್, ಇಂಟರ್‌ನೆಟ್ ಮತು ಸ್ಕ್ಯಾನರ್ ಸೇರಿದಂತೆ ಅಗತ್ಯವಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡಿಲ್ಲ. ಹೀಗಾಗಿ ತೀವ್ರ ಒತ್ತಡದಲ್ಲಿ ಕಾರ್ಯನಿರ್ವಹಿಸುವಂತಾಗಿದೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ವೃತ್ತಕ್ಕೆ ಒಂದರಂತೆ ಮೂಬೈಲ್, ಲ್ಯಾಪ್‌ಟಾಪ್, ಪ್ರಿಂಟರ್, ಇಂಟರ್‌ನೆಟ್ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಅಲ್ಲದೆ, ರಾಜ್ಯದ ಗ್ರಾಮ ಆಡಳಿತಾಧಿಕಾರಿಗಳು ಪದೋನ್ನತಿಯಲ್ಲಿ ವಂಚಿತರಾಗಿದ್ದು ಈ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಕಂದಾಯ ನಿರೀಕ್ಷಕ ಎಸ್.ಎಲ್. ಪಾಟೀಲ, ಗ್ರಾಮಾಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಅನೀಲ ಕುಮಾರ ಭೋವಿ, ಎಂ.ವಿ. ಶೆಟ್ಟರ, ಮುತ್ತು ಮೇಗಿಲಮನಿ, ನಾಗಪ್ಪ ಚಿಕ್ಕನವರ, ಅನೀಲ ಹದಗಲ, ಮಲ್ಲಪ್ಪ ಮಮದಾಪೂರ, ಪ್ರಕಾಶ ಪೂಜಾರ, ಎಸ್.ಎಂ. ಜಲಗೇರಿ, ಬಿ.ಎಫ್. ಕುರಿ, ಎಂ.ಎಂ. ಧಪೇದಾರ, ಮಂಜು ಮಲಗಾಣ, ದೀಪಾ ಸಂಕನಗೌಡ್ರ, ಎಂ.ಎಂ. ಮುಲ್ಲಾ, ಮಂಜುನಾಥ ಕೊಣ್ಣೂರ ಇತರರಿದ್ದರು.