More

    ಹೂ ಬಿಟ್ಟ ಅಪರೂಪದ ಸಪ್ತಪರ್ಣಿ

    ಧಾರವಾಡ: ಸಪ್ತಪರ್ಣಿ (ಅಲ್​ಸ್ಟೋನಿಯಾ ಸ್ಕೊಲ್ಯಾರಿಸ್) ಎಂದು ಕರೆಯಲಾಗುವ ಮೂಲ ಚೈನಾ, ಆಸ್ಟ್ರೇಲಿಯಾ ಮತ್ತು ಭಾಗಶಃ ಟ್ರಾಪಿಕಲ್ ಏಷ್ಯಾ ಭಾಗದ 6 ಮರಗಳು 5 ವರ್ಷಗಳ ಬಳಿಕ, ನಗರದ ಕೆಲಗೇರಿ ಬಳಿಯ ಗಾಯತ್ರಿಪುರಂ ಬಡಾವಣೆಯಲ್ಲಿ ಪ್ರಥಮ ಬಾರಿಗೆ ಸುವಾಸನೆ ಬೀರುವ ಹೂಗಳನ್ನು ಮೈತುಂಬ ಹೊದ್ದು ನಿಂತಿವೆ.

    ಬ್ಲಾ ್ಯ್ಬೋರ್ಡ್ ಟ್ರೀ ಅಥವಾ ಡೆವಿಲ್ಸ್ ಟ್ರೀ ಎಂದು ಕರೆಯಲಾಗುವ ಗಿಡಗಳು, ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಾಣಸಿಗುವ, ಎಪೋಸಿನೇಸಿಯೆ ಕುಟುಂಬ ಪ್ರಬೇಧಕ್ಕೆ ಸೇರಿದವು. ಗಾಯತ್ರಿ ಕನ್​ಸ್ಟ್ರಕ್ಷನ್​ದವರು ಸಪ್ತಪರ್ಣಿ ಸಸಿಗಳನ್ನು ನೆಟ್ಟಿದ್ದರು.

    ರವೀಂದ್ರನಾಥ ಟ್ಯಾಗೋರರು ಪಶ್ಚಿಮ ಬಂಗಾಳದ ಶಾಂತಿ ನಿಕೇತನದ ವಿಶ್ವಭಾರತಿ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಸ್ನಾತಕೋತ್ತರ ಮತ್ತು ಸ್ನಾತಕ ಪದವಿ ಪ್ರಮಾಣಪತ್ರದೊಂದಿಗೆ, ವಿಧಿವತ್ತಾಗಿ ಸಪ್ತಪರ್ಣಿ ಹೂವನ್ನು ಯುವ ಪದವೀಧರರಿಗೆ ನೀಡುವ ಸಂಪ್ರದಾಯ ಹಾಕಿಕೊಟ್ಟರು. ಆದರೆ, ಹೂಗಳ ಅನಗತ್ಯ ಮತ್ತು ಅಪರಿಮಿತ ಬಳಕೆ ತಪ್ಪಿಸಲು ಈಗ ಸಾಂಕೇತಿಕವಾಗಿ ಮಾತ್ರ ಈ ಹೂವನ್ನು ಪ್ರದರ್ಶಿಸಲಾಗುತ್ತದೆ.

    ಸಪ್ತಪರ್ಣಿ ಗಿಡದ ಕಾಂಡವನ್ನು ಪೆನ್ಸಿಲ್ ತಯಾರಿಕೆಯಲ್ಲಿ ಹೆಚ್ಚು ಬಳಸಲಾಗುತ್ತದೆ. ಶ್ರೀಲಂಕಾದಲ್ಲಿ ಶವಪೆಟ್ಟಿಗೆಗಳ ತಯಾರಿಕೆಯಲ್ಲಿ ಬಳಕೆಯಲ್ಲಿದೆ. ಬೋರ್ನಿಯೋದಲ್ಲಿ ಮೀನುಗಾರಿಕೆಯ ಬಲೆಗಳನ್ನು ತೇಲಿಸಲು ಕಾಂಡ ಬಳಸಲಾಗುತ್ತದೆ. ಮಹತ್ವದ ಪೇಯಗಳ ಬಾಟಲಿಯ ಮುಚ್ಚಳ (ಕಾರ್ಕ್) ಆಗಿಯೂ ಈ ಮರ ಬಳಕೆಯಲ್ಲಿದೆ.

    ಗೌತಮ ಬುದ್ಧ ಜ್ಞಾನೋದಯಕ್ಕಾಗಿ ತಪಸ್ಸಿಗೆ ಕುಳಿತದ್ದು ಮತ್ತು ಜ್ಞಾನದೋಯ ಆಗಿದ್ದು ಈ ಬೋಧಿ ವೃಕ್ಷದ ಕೆಳಗಡೆ. ಆ ಮರವೇ ಸಪ್ತಪರ್ಣಿ. ಬೌದ್ಧರು ಈ ಮರವನ್ನು ಆದರದಿಂದ ಕಾಣುತ್ತಾರೆ. ಆಯುರ್ವೆದದಲ್ಲಿ ಹಲವು ವ್ಯಾಧಿಗಳಿಗೆ ಔಷಧಿಯಾಗಿಯೂ ಮರದ ಟೊಂಗೆಗಳನ್ನು ಬಳಸಲಾಗುತ್ತದೆ. ಮರದ ಎಲ್ಲ ಭಾಗಗಳೂ ತುಂಬ ಕಹಿ. ಪ್ರಮಾಣ ಮೀರಿದರೆ ವಿಷವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

    ಸಪ್ತಪರ್ಣಿ ತುಂಬ ಸುಂದರವಾದ ಬಿಳಿ ಹೂವು ಬಿಡುವ ಮತ್ತು ಸುವಾಸನೆ ಬೀರುವ ಗಿಡ. ಧಾರವಾಡದಲ್ಲಿ ಪ್ರಥಮ ಬಾರಿಗೆ ಈ ಗಿಡಗಳು ಹೂವು ಬಿಟ್ಟಿರುವುದು ಸಂತಸದ ಸಂಗತಿ. ನಮ್ಮ ತೋಟದಲ್ಲಿಯೂ ಈ ಪ್ರಜಾತಿಯ 2 ಮರಗಳಿವೆ. ಆದರೆ ಈವರೆಗೆ ಹೂ ಬಿಟ್ಟಿಲ್ಲ.

    | ಪಂಚಾಕ್ಷರಿ ಹಿರೇಮಠ, ಅಧ್ಯಕ್ಷ, ನೇಚರ್ ರಿಸರ್ಚ್ ಸೆಂಟರ್, ಧಾರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts