19.5 C
Bangalore
Wednesday, December 11, 2019

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ ಇರದು; ಹಾವಿನ ರೋಷಕ್ಕೆ ಪ್ರತ್ಯುತ್ತರ ಕೊಟ್ಟು ಗೆದ್ದು ಬೀಗಿದ್ದು ಚಿರತೆ…

Latest News

ತಳೇವಾಡ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು: ಇಂದು ಮೃತ ದೇಹ ಪತ್ತೆ

ವಿಜಯಪುರ: ಕೆರೆಯಲ್ಲಿ ಈಜಲು ತೆರಳಿದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬಸವನ ಬಾಗೇವಾಡಿ ತಾಲೂಕಿನ ತಳೇವಾಡ ಗ್ರಾಮದಲ್ಲಿ ಸಂಭವಿಸಿದೆ. ಸುದೀಪ (10)...

ಗ್ರಾಹಕರಿಗೆ ಸಿಹಿ ಸುದ್ದಿ: ಹೊಸ ಬೆಳೆಯ ಆಗಮನದಿಂದ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆಯಲ್ಲಿ ಇಳಿಕೆ

ನವದೆಹಲಿ: ಇತ್ತೀಚಿನ ವಾರಗಳಲ್ಲಿ ಗ್ರಾಹಕರಿಗೆ ಗಗನಕುಸುಮವಾಗಿದ್ದ ಈರುಳ್ಳಿ ಬೆಲೆಯು ಕೊಂಚ ಕೊಂಚವಾಗಿ ಇಳಿಯುವ ಲಕ್ಷಣಗಳು ಕಾಣುತ್ತಿವೆ. ರೈತರು ಹೊಸ ಬೆಳೆಯನ್ನು ಗುಜರಾತ್​ ಮತ್ತು...

ನ್ಯೂಜೆರ್ಸಿ ಕಿರಾಣಿ ಅಂಗಡಿಯಲ್ಲಿ ಶಂಕಿತ ಬಂದೂಕುಧಾರಿಗಳಿಂದ ಗುಂಡಿನ ದಾಳಿ : 6 ಮಂದಿ ಸಾವು

ನ್ಯೂಯಾರ್ಕ್: ನ್ಯೂಜೆರ್ಸಿ ನಗರದ ಜೆರ್ಸಿಯಲ್ಲಿರುವ ಕಿರಾಣಿ ಅಂಗಡಿಯಲ್ಲಿ ಅಡಗಿ ಕುಳಿತ​ ಶಂಕಿತ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಇಬ್ಬರು...

ಸಿಎಂ ಬಿಎಸ್​ವೈ ಪುತ್ರ ವಿಜಯೇಂದ್ರರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಬುಲಾವ್​!

ಬೆಂಗಳೂರು: ಉಪಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಬಹುತೇಕ ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರವನ್ನು ಸುಭದ್ರ ಮಾಡಿಕೊಂಡಿದೆ. ಅದರಲ್ಲೂ ಇದೇ ಮೊದಲ ಬಾರಿಗೆ ಮಂಡ್ಯದ ಕೆ.ಆರ್​.ಪೇಟೆ...

ಜೋಳದ ಬೆಲೆ ಏರಿಕೆ: ರೊಟ್ಟಿಯೂ ಈಗ ಬಲು ತುಟ್ಟಿ!

ಲಕ್ಷ್ಮೇಶ್ವರ: ರೊಟ್ಟಿ ತಿಂದವನೇ ಬಲು ಗಟ್ಟಿ ಎಂಬುದು ಉತ್ತರ ಕರ್ನಾಟಕದ ನಾಣ್ಣುಡಿ. ಆದರೆ, ಈಗ ರೊಟ್ಟಿಯೂ ತುಟ್ಟಿಯಾಗುತ್ತಿದೆ. ಜೋಳದ ಬೆಲೆ ದಿನೇದಿನೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ ಇರದು.
ಕೀನ್ಯಾದ ಮಸಾಯಿ ಮಾರಾ ಸಂರಕ್ಷಿತ ಅರಣ್ಯಪ್ರದೇಶದಲ್ಲಿ ಬೃಹತ್​ ಗಾತ್ರದ ಹೆಬ್ಬಾವು ಮತ್ತು ಚಿರತೆಯ ನಡುವೆ ನಡೆದ ಕಾಳಗವನ್ನು ವಿಡಿಯೋದಲ್ಲಿ ನೋಡಬಹುದು.

ಕಾಡಿನಲ್ಲಿ ಹೆಬ್ಬಾವು ಮತ್ತು ಚಿರತೆ ಎದುರುಬದುರಾದಾಗ ಸ್ವಲ್ಪ ಹೊತ್ತು ಒಂದನ್ನೊಂದು ನೋಡುತ್ತವೆ. ಆದರೆ ಹೆಬ್ಬಾವು ಕೂಡಲೇ ಚಿರತೆಯ ಮೇಲೆ ದಾಳಿ ಮಾಡುತ್ತದೆ. ಅದಕ್ಕೆ ಚಿರತೆ ಪ್ರತಿರೋಧವನ್ನು ಒಡ್ಡಿದರೂ ಬಿಡದ ದೊಡ್ಡ ಹೆಬ್ಬಾವು, ಚಿರತೆಯನ್ನು ನೆಲಕ್ಕೆ ಕೆಡುವಿ ಅದನ್ನು ಸುತ್ತಿಕೊಳ್ಳಲು ಆರಂಭಿಸುತ್ತದೆ. ಆದರೆ ಆ ಕ್ಷಣದಲ್ಲಿ ಚಿರತೆ ಚಂಗನೆ ಹಾರಿ ತಪ್ಪಿಸಿಕೊಳ್ಳುವ ಪರಿ ನಿಜಕ್ಕೂ ರೋಚಕವೆನಿಸುತ್ತದೆ. ಅಷ್ಟು ಸೆಣೆಸಾಡಿದರೂ ಕೂಡ ಕೊನೆಯಲ್ಲಿ ಚಿರತೆಯೇ ಗೆಲ್ಲುತ್ತದೆ.

ಇದು ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾದ ವಿಡಿಯೋ ಎನ್ನಲಾಗಿದೆ. ನಾವೆಲ್ಲ ಹೆಬ್ಬಾವು ಚಿರತೆಯನ್ನು ಕೊಲ್ಲುತ್ತದೆ ಎಂದೇ ಭಾವಿಸಿದ್ದೆವು. ಯಾಕೆಂದರೆ ಅದರ ಹಿಡಿತ ಅಷ್ಟು ಬಲವಾಗಿತ್ತು. ರೋಷದಿಂದ ಹೋರಾಡುತ್ತಿತ್ತು. ಆ ಕಾಳಗ ನೋಡಲೇ ತುಂಬ ಸೊಗಸಾಗಿತ್ತು. ಕೊನೆಗೆ ಚಿರತೆ ಹಾವಿನ ತಲೆಯನ್ನೇ ಕಚ್ಚಿದೆ. ಬಹುಶಃ ಆ ಹಾವು ಬದುಕುವ ಸಾಧ್ಯತೆ ಇಲ್ಲ ಎಂದು ಆ ಕಾಳಗವನ್ನು ನೋಡಿದ ಪ್ರವಾಸಿಗರಲ್ಲಿ ಒಬ್ಬರಾದ ಮೈಕ್​ ವೆಲ್ಟನ್​ ಎಂಬುವರು ತಿಳಿಸಿದ್ದಾರೆ.  ಅಲ್ಲದೆ ಇದೊಂದು ಬಲು ಅಪರೂಪದ ಸೆಣೆಸಾಟ. ನೋಡಲು ಸಿಗುವುದು ವಿರಳಾತಿವಿರಳ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

Stay connected

278,740FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...