ಕತಾರ್​-ಭಾರತ ಸಾಂಸ್ಕೃತಿಕ ವರ್ಷದ ಸಂಭ್ರಮದಲ್ಲಿ ಎ.ಆರ್​.ರೆಹಮಾನ್​ ಸಂಗೀತ ಹಬ್ಬ

ಕತಾರ್​: ದೋಹಾದ ಖಲೀಫ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಾ.22ರಂದು ಸಂಗೀತ ಮಾಂತ್ರಿಕ, ಪದ್ಮಭೂಷಣ ಪುರಸ್ಕೃತ ಎ.ಆರ್​.ರೆಹಮಾನ್ ​ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಕತಾರ್​-ಭಾರತ ಸಾಂಸ್ಕೃತಿಕ ವರ್ಷ-2019ರ ಅಂಗವಾಗಿ ಈ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕತಾರ್​ನ ಭಾರತೀಯ ರಾಯಭಾರಿ ಪಿ.ಕುಮರನ್​ ತಿಳಿಸಿದ್ದಾರೆ.

ಸಂಗೀತ ನಿರ್ದೇಶಕ, ಸಂಯೋಜಕ, ಗಾಯಕ ಹೀಗೆ ಸಂಗೀತ ಕ್ಷೇತ್ರದಲ್ಲಿ ಎಲ್ಲ ಸ್ತರಗಳಲ್ಲೂ ಪರಿಣಿತಿ ಹೊಂದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಎ.ಆರ್​.ರೆಹಮಾನ್​ ಹಲವು ಪ್ರಶಸ್ತಿ ಪುರಸ್ಕೃತರೂ ಹೌದು.
6 ರಾಷ್ಟ್ರೀಯ ಪ್ರಶಸ್ತಿಗಳು, ಎರಡು ಅಕಾಡೆಮಿ, ಎರಡು ಗ್ರಾಮಿ ಪ್ರಶಸ್ತಿಗಳು, ಬ್ರಿಟಿಷ್​ ಅಕಾಡೆಮಿ ಆಫ್​ ಫಿಲ್ಮ್​ ಆ್ಯಂಡ್​ ಟೆಲಿವಿಷನ್​ ಆರ್ಟ್ಸ್​, ಗೋಲ್ಡನ್​ ಗ್ಲೋಬ್​ ಪ್ರಶಸ್ತಿ, 15 ಫಿಲ್ಮ್​ ಫೇರ್​ ಅವಾರ್ಡ್​, ದಕ್ಷಿಣ ಭಾರತದ ಹದಿನೇಳು ಫಿಲ್ಮ್​ಫೇರ್ ಪ್ರಶಸ್ತಿಗಳಿಗೆ ಭಾಜನರಾಗಿದ್ದು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮುಂದುವರಿದಿದೆ.