ಪುನೀತ್​ ಕಣ್ಣು ಇಬ್ಬರಿಗಲ್ಲ, ನಾಲ್ವರ ಬದುಕಿಗೆ ಬೆಳಕಾಯ್ತು! ಆ ನಾಲ್ವರೂ ಕರ್ನಾಟಕದವರೇ…

ಬೆಂಗಳೂರು: ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರು ಕಣ್ಣುಗಳನ್ನ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದವರು. ಅವರ ಕಣ್ಣುಗಳಿಂದ ಇಬ್ಬರಿಗಲ್ಲ, ನಾಲ್ವರ ಬದುಕಿಗೆ ಬೆಳಕು ಸಿಕ್ಕಿದೆ. ಪುನೀತ್​ರ ಎರಡು ಕಣ್ಣುಗಳಿಂದ ನಾಲ್ವರಿಗೆ ದೃಷ್ಟಿ ಬಂದಿದೆ ಎಂದು ನಾರಾಯಣ ನೇತ್ರಾಲಯ ಆಸ್ಪತ್ರೆ ಮುಖ್ಯಸ್ಥ ಡಾ.ಭುಜಂಗಶೆಟ್ಟಿ ಮಾಹಿತಿ ನೀಡಿದ್ದಾರೆ. ಪುನೀತ್​ ನಿಧನಕ್ಕೆ ಸಂತಾಪ ಸೂಚಿಸಿರುವ ನಾರಾಯಣ ನೇತ್ರಾಲಯದ ವೈದ್ಯರು ಸೋಮವಾರ ಕರುನಾಡ ಪ್ರೀತಿಯ ಅಪ್ಪುಗೆ ವಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಪುನೀತ್​ರ ಭಾವಚಿತ್ರಕ್ಕೆ ದೀಪ ಬೆಳಗಿ ನಮಿಸಿದರು. … Continue reading ಪುನೀತ್​ ಕಣ್ಣು ಇಬ್ಬರಿಗಲ್ಲ, ನಾಲ್ವರ ಬದುಕಿಗೆ ಬೆಳಕಾಯ್ತು! ಆ ನಾಲ್ವರೂ ಕರ್ನಾಟಕದವರೇ…