ಪುನೀತ್​ ನೆನಪಲ್ಲಿ ಮತ್ತೊಂದು ದೊಡ್ಡ ಕಾರ್ಯಕ್ರಮ: ಕನ್ನಡ ಕಿರುತೆರೆ ವತಿಯಿಂದ ‘ಅಪ್ಪು ಅಮರ’

ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​ ಅವರ ನೆನಪಲ್ಲಿ ನ.28ರಂದು ಮತ್ತೊಂದು ದೊಡ್ಡ ಕಾರ್ಯಕ್ರಮ ನಡೆಯಲಿದೆ. ಅಪ್ಪು ಸ್ಮರಣಾರ್ಥ ಸ್ಯಾಂಡಲ್​ವುಡ್​ನಿಂದ ನ.16ರಂದು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ‘ಪುನೀತ ನಮನ’ ಕಾರ್ಯಕ್ರಮ ನಡೆದಿತ್ತು. ದೊಡ್ಮನೆ ಕುಟುಂಬಸ್ಥರು, ದಕ್ಷಿಣ ಭಾರತದ ಸಿನಿದಿಗ್ಗಜರು ಪಾಲ್ಗೊಂಡು ಚಂದನವನದ ‘ರಾಜಕುಮಾರ’, ಕೋಟ್ಯಂತರ ಅಭಿಮಾನಿಗಳ ಪಾಲಿನ ಪ್ರೀತಿಯ ‘ಅಪ್ಪು’ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದರು. ‘ಸ್ವರಮಾಂತ್ರಿಕ’ರಿಂದ ‘ಅಭಿಮಾನಿಗಳ ದೇವರು’ಗೆ ಸ್ವರ ನಮನ ಮಾಡಲಾಗಿತ್ತು. ಇದೇ ರೀತಿ ಕಿರುತೆರೆ ಕಲಾವಿದರು ಮತ್ತು ತಂತ್ರಜ್ಞರಿಂದ ‘ಅಪ್ಪು ಅಮರ’ ಕಾರ್ಯಕ್ರಮ ನಡೆಯಲಿದೆ. … Continue reading ಪುನೀತ್​ ನೆನಪಲ್ಲಿ ಮತ್ತೊಂದು ದೊಡ್ಡ ಕಾರ್ಯಕ್ರಮ: ಕನ್ನಡ ಕಿರುತೆರೆ ವತಿಯಿಂದ ‘ಅಪ್ಪು ಅಮರ’