More

  ಕುಣಿಗಲ್​ಗೂ ತಟ್ಟಿದ PSI ಎಕ್ಸಾಂ ಅಕ್ರಮದ ನಂಟು: ರೈತರಾದ ನಾವು 80 ಲಕ್ಷ ಹಣ ಎಲ್ಲಿಂದ ತರೋದು? ಪೇದೆ ತಂದೆ ಆಕ್ರೋಶ

  ಹುಲಿಯೂರುದುರ್ಗ: ರಾಜ್ಯಾದ್ಯಂತ ಚರ್ಚೆಯಾಗುತ್ತಿರುವ ಪಿಎಸ್​ಐ ನೇಮಕಾತಿ ಅಕ್ರಮದ ನಂಟು ತುಮಕೂರು ಜಿಲ್ಲೆಗೂ ತಟ್ಟಿದೆ. ಪರೀಕ್ಷೆಯಲ್ಲಿ 10ನೇ ರ್ಯಾಂಕ್​ ಪಡೆದಿದ್ದ ಸಿ.ಎಸ್​.ನಾಗೇಶ್​ಗೌಡ ಹೆಸರು ಕೂಡ ಚರ್ಚೆಯಾಗುತ್ತಿದೆ.

  ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪ ಮಾಡಿರುವ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಸಂಬಂಧಿ ನಾಗೇಶ್​ಗೌಡ ತುಮಕೂರು ಜಿಲ್ಲೆಯ ಕುಣಿಗಲ್​ ತಾಲೂಕಿನ ಚಿಕ್ಕಮಾವತ್ತೂರು ನಿವಾಸಿ.

  ಕುಣಿಗಲ್​ ತಾಲೂಕಿನ ಗಡಿಭಾಗದ ಗ್ರಾಮದ ನಿವಾಸಿ ನಾಗೇಶ್​ಗೌಡ 2020ರಲ್ಲಿ ಬೆಂಗಳೂರಿನಲ್ಲಿ ಪೊಲೀಸ್​ ಕಾನ್​ಸ್ಟೇಬಲ್​ ಆಗಿ ಇಲಾಖೆ ಸೇರಿದ್ದು, ದಾವಣಗೆರೆ, ಬಾಗಲಕೋಟೆಗೆಯಲ್ಲಿ ಕೆಲಸ ಮಾಡಿದ್ದರು. ಪ್ರಸ್ತುತ ನೆಲಮಂಗಲ ಠಾಣೆಯಲ್ಲಿ ಕಾನ್​ಸ್ಟೇಬಲ್​ ಆಗಿ ಕೆಲಸ ನಿರ್ವಹಿಸುತ್ತಿರುವ ನಾಗೇಶಗೌಡ, ಚಿಕ್ಕಮಾವತ್ತೂರಿನ ರೈತ ಸೋಬಗಯ್ಯ ಅವರ 5ನೇ ಮಗ.

  ನಾಗೇಶ್​ಗೌಡ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದು, ಇತ್ತೀಚೆಗೆ ಹುಟ್ಟೂರಿನ ಜತೆ ಅಷ್ಟೊಂದು ಸಂಪರ್ಕ ಇರಲಿಲ್ಲ ಎನ್ನಲಾಗಿದೆ. ಆದರೆ, ಊರಿನ ಗೆಳೆಯರಿಗೆ ನಾನು ಶೀಘ್ರದಲ್ಲಿ ಪಿಎಸ್​ಐ ಆಗುತ್ತೇನೆ ಎಂದು ಹೇಳಿಕೊಂಡಿದ್ದ ಎನ್ನಲಾಗಿದೆ. ಅಕ್ರಮದ ಅರೋಪ ಕೇಳಿ ಬಂದ ನಂತರ ನಾಗೇಶ್​ಗೌಡರ ಮೊಬೈಲ್​ ಸ್ಥಗಿತಗೊಂಡಿದ್ದು, ತನಿಖೆಗಾಗಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.

  ನಾಗೇಶ್​ಗೌಡ ತಂದೆ, ತಾಯಿ ಚಿಕ್ಕಮಾವತ್ತೂರು ಗ್ರಾಮದಲ್ಲಿ ವಾಸವಿದ್ದು, ಸಿಐಡಿ ಪೊಲೀಸರು ಈಗಾಗಲೇ ಗ್ರಾಮಕ್ಕೆ ಭೇಟಿ ನೀಡಿ ಹುಡಕಾಟ ನಡೆಸಿದ್ದಾರೆ.

  ಇತ್ತ ಮಗನ ಮೇಲಿನ ಆರೋಪ ಕುರಿತು ಪ್ರತಿಕ್ರಿಯಿಸಿದ ನಾಗೇಶ್​ಗೌಡರ ತಂದೆ ಸೋಬಗಯ್ಯ, ನಮಗೆ ಸಚಿವ ಅಶ್ವಥ್​​ನಾರಾಯಣ್​ ಗೊತ್ತೇ ಇಲ್ಲ, ಸಿದ್ದರಾಮಯ್ಯ ರಾಜಕೀಯಕ್ಕಾಗಿ ಈ ರೀತಿ ಮಾತನಾಡಿದ್ದಾರೆ. ಮೊದಲು ಮಾಗಡಿಯವರು ಅಂದ್ರು, ಈಗ ನನ್ನ ಮಗನನ್ನು ಹಿಡ್ಕೊಂಡಿದಾರೆ. ನಾವು ದುಡ್ಡ ಕೊಟ್ಟಿರುವ ಬಗ್ಗೆ ಸಾಕ್ಷ್ಯ ನೀಡಲಿ, ಅದು ಬಿಟ್ಟು ಬಡವರ ಮಗನನ್ನು ಬಲಿಪಶು ಮಾಡುವುದನ್ನು ನಿಲ್ಲಿಸಲಿ. ರೈತರಾದ ನಾವು ಎಲ್ಲಿಂದ 80-90 ಲಕ್ಷ ರೂಪಾಯಿ ತುರುವುದು? ಬಡವರ ಮೇಲೆ ರಾಜಕೀಯ ಮಾಡಬಾರದು ಎಂದು ಕಿಡಿಕಾರಿದರು.

  ಮೈಸೂರಲ್ಲಿ ‘ಕವಲಂದೆ ಮಿನಿ ಪಾಕಿಸ್ತಾನ’ ಎಂದು ಘೋಷಣೆ ಕೂಗಿದ್ದ ಆರೋಪಿಗಳ ಬಂಧನ

  ಕನ್ನಡದ ಕೋಟ್ಯಧಿಪತಿ ಖ್ಯಾತಿಯ ಲೈನ್​ಮನ್ ಆತ್ಮಹತ್ಯೆ! ಗೃಹಪ್ರವೇಶಕ್ಕೂ 2 ದಿನ ಮೊದಲೇ ದುರಂತ, ಆ ರಾತ್ರಿ ತೋಟದಲ್ಲಿ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts