ಮೆಲ್ಬೋರ್ನ್: ಹಾಲಿ ಋತುವಿನ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕಳೆದ ವರ್ಷದ ಯಶಸ್ಸನ್ನು ಪುನರಾವರ್ತಿಸುವಲ್ಲಿ ಭಾರತದ ಅಗ್ರ ಸಿಂಗಲ್ಸ್ ತಾರೆ ಸುಮಿತ್ ನಗಾಲ್ ವಿಫಲಗೊಂಡಿದ್ದಾರೆ. ಕಳೆದ ವರ್ಷದ ಟೂರ್ನಿಯ ಎರಡನೇ ಸುತ್ತಿಗೇರಿ ನಿರೀಕ್ಷೆ ಮೂಡಿಸಿದ್ದ ನಗಾಲ್ ಈ ಬಾರಿ ಮೊದಲ ಸುತ್ತಿನಲ್ಲೇ ಮುಗ್ಗರಿಸುವುದರೊಂದಿಗೆ ಪುರುಷರ ಸಿಂಗಲ್ಸ್‌ನಲ್ಲಿ ಭಾರತೀಯರ ಸವಾಲು ಅಂತ್ಯಗೊಂಡಿದೆ.
ಮಹಿಳಾ ವಿಭಾಗದಲ್ಲಿ ಹಾಲಿ ಚಾಂಪಿಯನ್ ಅರಿನಾ ಸಬಂಲೆಕಾ, ಪ್ಯಾರಿಸ್ ಒಲಿಂಪಿಕ್ಸ್ ಸ್ವರ್ಣ ವಿಜೇತೆ ಚೀನಾದ ಕ್ವಿನೆನ್ ಝೆಂಗ್, ಕ್ರೊವೇಷಿಯಾದ ಡೋನ್ನಾ ವೆಕಿಕ್, ರಷ್ಯಾದ ಮೀರ‌್ರಾ ಆಂಡ್ರಿವಾ, ಪುರುಷರ ವಿಭಾಗದಲ್ಲಿ ನಾರ್ವೆಯ ಕ್ಯಾಸ್ಪರ್ ರುಡ್, ಜಪಾನ್ ಕೀ ನಿಶಿಕೊರಿ, ್ರಾನ್ಸ್‌ನ ಹ್ಯೂಗೋ ಗ್ಯಾಸ್ಟನ್ ಎರಡನೇ ಸುತ್ತಿಗೇರಿದರು.
ಭಾನುವಾರ ಆರಂಭಗೊಂಡ ಟೂರ್ನಿಯ ಆರಂಭಿಕ ಸುತ್ತಿನ ಪಂದ್ಯದಲ್ಲಿ ನಗಾಲ್ 3-6,1-6, 5-7ರಿಂದ ವಿಶ್ವ ನಂ.25, ಜೆಕ್ ಗಣರಾಜ್ಯದ ತೊಮಸ್ ಮಚಾಕ್ ಎದುರು ಸೋಲುಂಡರು. ನಗಾಲ್ ಅವರ ಅನಿರ್ಬಂಧಿತ ತಪ್ಪು ಹಾಗೂ ಡಬಲ್ ಾಲ್ಟ್ ಲಾಭವೆತ್ತಿದ ಒಲಿಂಪಿಕ್ಸ್ ಮಿಶ್ರ ವಿಭಾಗದ ಚಿನ್ನ ವಿಜೇತ ಮಚಾಕ್, ಎರಡು ಗಂಟೆ 5 ನಿಮಿಷಗಳ ಹೋರಾಟದಲ್ಲಿ ಗೆದ್ದು ಬೀಗಿದರು. ಮೊದಲ ಸುತ್ತಿನಲ್ಲಿ ನಿರಾಸೆ ಅನುಭವಿಸಿದ ನಡುವೆಯೂ ನಗಾಲ್ 70 ಲಕ್ಷ ರೂ.ಗಳನ್ನು ಜೇಬಿಗಿಳಿಸಿಕೊಂಡಿದ್ದಾರೆ.
ನಿಶಿಕೊರಿ ಗೆಲುವಿನ ಪುನರಾಗಮನ: ಪುರುಷರ ವಿಭಾಗದ ಮೊದಲ 3 ಪಂದ್ಯಗಳಲ್ಲಿ ಎರಡು ಐದು ಸೆಟ್‌ಗಳಿಗೆ ವಿಸ್ತರಿಸಲ್ಪಟ್ಟವು. ಪಾದದ ಮತ್ತು ಮೊಣಕಾಲು ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ನಾಲ್ಕು ವರ್ಷಗಳ ಬಳಿಕ ಮೆಲ್ಬೋರ್ನ್‌ನಲ್ಲಿ ಕಣಕ್ಕಿಳಿದಿರುವ 2014ರ ಯುಎಸ್ ಓಪನ್ ರನ್ನರ್ ಅಪ್ ನಿಶಿಕೋರಿ, ಅರ್ಹತಾ ಸುತ್ತಿನ ಆಟಗಾರ ಥಿಯಾಗೊ ಮೊಂಟೆರೊ ಅವರನ್ನು 4-6, 6-7 (4), 7-5, 6-3 ಸೆಟ್‌ಗಳಿಂದ ಸೋಲಿಸಿದರು.
ಮೂರು ಬಾರಿ ಫೈನಲಿಸ್ಟ್ 6ನೇ ಶ್ರೇಯಾಂಕಿತ ಕ್ಯಾಸ್ಪರ್ ರುಡ್, ಜೌಮ್ ಮುನಾರ್‌ರನ್ನು 6-3,1-6, 7-5, 2-6, 6-1 ರಿಂದ ಸೋಲಿಸಿದರು.2ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೇರೆವ್ 6-4, 6-4, 6-4 ಮೂರು ಸೆಟ್‌ಗಳ ಹೋರಾಟದಲ್ಲಿ ವೈಲ್ಡ್ ಕಾರ್ಡ್ ಆಟಗಾರ ಲೂಕಸ್ ಪೌಲಿ ಎದುರು ಗೆಲುವು ಕಂಡರು.
ಸಬಲೆಂಕಾಗೆ ಸುಲಭ ಗೆಲುವು: ಮಹಿಳಾ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತೆ ಬೆಲಾರಸ್‌ನ ಅರಿನಾ ಸಬಲೆಂಕಾ 6-3, 6-2 ನೇರಸೆಟ್‌ಗಳಿಂದ ಅಮೆರಿಕದ ಸ್ಲೋವನ್ ಸ್ಟೀನ್ಸ್ ಎದುರು ಸುಲಭ ಗೆಲುವು ಒಲಿಸಿಕೊಂಡರು. 2023, 2024ರ ಪ್ರಶಸ್ತಿ ಬಳಿಕ ಹ್ಯಾಟ್ರಿಕ್ ನಿರೀಕ್ಷೆಯಲ್ಲಿರುವ ಅಬಲೆಂಕಾ, ಆಸ್ಟ್ರೇಲಿಯನ್ ಓಪನ್‌ನಲ್ಲಿ ಅಜೇಯ ಓಟವನ್ನು 15ನೇ ಪಂದ್ಯಕ್ಕೆ ವಿಸ್ತರಿಸಿದರು.ಬ್ರಿಸ್ಬೇನ್ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ವಶಪಡಿಸಿಕೊಳ್ಳುವ ಮೂಲಕ ಸಬಲೆಂಕಾ ಹಾಲಿ ವರ್ಷ ಪ್ರಾರಂಭಿಸಿದ್ದರು.
ಕಳೆದ ಬಾರಿ ರನ್ನರ್ ಅಪ್ ಕ್ವಿನೆನ್ ಝೆಂಗ್ 7-6(3), 6-1ರಿಂದ ಅರ್ಹತಾ ಸುತ್ತಿನ ರೊಮೇನಿಯಾದ ಅನೊಕ ಟೊಡೋನಿ ಅವರನ್ನು ಪರಾಭವಗೊಳಿಸಿದರು. 18ನೇ ಶ್ರೆಯಾಂಕಿತೆ ಡೊನ್ನಾ ವೆಕಿಕ್ 6-4, 6-4ರಿಂದ ್ರಾನ್ಸ್‌ನ ಡಯೇನ್ ಪ್ಯಾರಿ ವಿರುದ್ಧ ಜಯ ಕಂಡಿರು. ವೆಕಿಕ್ ಈ ಗೆಲುವನ್ನು ಲಾಸ್ ಏಂಜಲೀಸ್‌ನ ಕಾಳ್ಗಿಚ್ಚಿನ ಸಂತ್ರಸ್ತರಿಗೆ ಅರ್ಪಿಸಿದರು.