ಇಂಡಿ: ಅರವಿಂದರು ಜಗತ್ತಿಗೆ ಪೂರ್ಣ ಯೋಗಮಾರ್ಗವನ್ನು ತೋರುವ ಜತೆಗೆ ಕವಿ, ತತ್ವಜ್ಞಾನಿಯಾಗಿಯೂ ಸಮಾಜದ ಮೇಲೆ ತಮ್ಮ ಪ್ರಭಾವ ಬೀರಿದ್ದಾರೆ ಎಂದು ಸಾಹಿತಿ ಗೀತಯೋಗಿ ತಿಳಿಸಿದರು.
ತಾಲೂಕಿನ ಸಾಲೋಟಗಿ ಗ್ರಾಮದ ಅರವಿಂದೋ ಸಮಿತಿ ಮತ್ತು ಸರಕಾರಿ ಹಿರಿಯ ಹೆಣ್ಣು ಮಕ್ಕಳ ಶಾಲೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುರುೇತ್ರ ಯುದ್ದದಲ್ಲಿ ಭಾಗಿಯಾದರೂ ಯುದ್ದ ಮಾಡದೆ ಧರ್ಮದ ಪರ ಯುದ್ದ ಗೆಲ್ಲಿಸಿದ ಶ್ರೀಕೃಷ್ಣನಂತೆ ಅರವಿಂದರು ಸ್ವಾತಂತ್ರ ಹೋರಾಟದಿಂದ ದೂರವಿದ್ದರು ಪರೋವಾಗಿ ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಭಾರತಕ್ಕೆ ಸ್ವಾತಂತ್ರ ಸಿಗಲು ಕಾರಣರಾಗಿದ್ದಾರೆ.
ಇವರಿಗೆ ಇಂಗ್ಲಿಷ್, ಗ್ರೀಕ್, ಲ್ಯಾಟಿನ್, ್ರೆಂಚ್, ಜರ್ಮನಿ, ಇಟಲಿ, ಹಿಂದಿ, ಬಂಗಾಲಿ ಹಾಗೂ ಸಂಸತ ಭಾಷೆಗಳ ಜ್ಞಾನ ಹೊಂದಿದ್ದರು ಎಂದರು. 1920 ರಲ್ಲಿ ಇವರ ಆಧ್ಯಾತ್ಮಿಕ ಸಾಧನೆಯ ಸಹಪಯಣಿಗರಾಗಿ ಬಂದ ್ರೆಂಚ್ ದೇಶದ ಮೀರಾ ಅಲ್ಪಸಾ ಆಧ್ಯಾತ್ಮಿಕ ೇತ್ರವನ್ನು ಶ್ರೀಮಂತಗೊಳಿಸಿದರು. ಅರವಿಂದರು ಇವರನ್ನು ಶ್ರೀ ಮಾತಾ ಎಂದು ಕರೆಯುತ್ತಿದ್ದರು ಎಂದು ತಿಳಿಸಿದರು.
ದುಂಡಪ್ಪ ಹ್ಯಾಳದ, ಸುಭಾಸಚಂದ್ರ ಗದ್ಯಾಳ, ಅಶೋಕ ಚನಗೊಂಡ, ಹಣಮಂತ ತಡಲಗಿ ಇತರರಿದ್ದರು.ವಿನೋದಕುಮಾರ ದೊಡ್ಡಗಾಣಿಗೇರ ನಿರೂಪಿಸಿದರು.