ಹನಗೋಡು: ಕಲ್‌ಬೆಟ್ಟ ಗ್ರಾಮದಲ್ಲಿ ಹೋಟೆಲ್ ಮುಂದೆ ಕಟ್ಟಿದ ಸಾಕು ನಾಯಿಯೊಂದನ್ನು ಚಿರತೆ ದಾಳಿ ನಡೆಸಿ ತಿಂದು ಹಾಕಿದೆ.
ಹನಗೋಡು ಹೋಬಳಿಯ ಕಲ್‌ಬೆಟ್ಟ ಗ್ರಾಮದ ಹೋಟೆಲ್ ಉದ್ಯಮಿ ಜಯಂತಿ ಅವರು ತಮ್ಮ ಹೋಟೆಲ್ ಮುಂಭಾಗ ಸಾಕು ನಾಯಿಯನ್ನು ಕಟ್ಟಿ ಹಾಕಿದ್ದು ಸೋಮವಾರ ಮುಂಜಾನೆ ಮುತ್ತುರಾಯನ ಹೊಸಹಳ್ಳಿ ಮೀಸಲು ಅರಣ್ಯ ಪ್ರದೇಶದಿಂದ ಹೊರಬಂದ ಚಿರತೆಯು ನಾಯಿಯನ್ನು ತಿಂದು ಹಾಕಿದೆ. ಇದರಿಂದ ಹೋಟೆಲ್ ಮಾಲೀಕರು ಭಯಭೀತರಾಗಿದ್ದು ಚಿರತೆಯನ್ನು ಸೆರೆ ಹಿಡಿದು ವನ್ಯಜೀವಿ ಅರಣ್ಯ ಪ್ರದೇಶಕ್ಕೆ ಬಿಡಬೇಕೆಂದು ಒತ್ತಾಯಿಸಿದ್ದಾರೆ.