ಬೆಂಗಳೂರು: ಜನಸಂದಣಿ ಇರುವ ಕಡೆ ಮೊಬೈಲ್ ಕದ್ದು ಕೇರಳಕ್ಕೆ ಮಾರಾಟ ಮಾಡುತ್ತಿದ್ದ ಮತ್ತು ಸ್ವೀಕರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಭದ್ರಾವತಿ ನಿವಾಸಿ ಶ್ರೀನಿವಾಸ್ (29) ಮತ್ತು ಕೇರಳ ಮೂಲದ ಕೆ.ಪಿ. ಶಫೀಕ್ (33) ಬಂಧಿತರು. ಆರೋಪಿಗಳಿಂದ 10.50 ಲಕ್ಷ ರೂ. ಮೌಲ್ಯದ 52 ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ನಾಲ್ವರ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಿವಾಸ್‌ನ ನಾಲ್ವರ ಸಹಚರರ ಮೂಲಕ ಸಭೆ, ಸಮಾರಂಭ, ಜಾತ್ರೆ ಮತ್ತು ಜನಸಂದಣಿ ಇರುವ ಕಡೆಗಳಲ್ಲಿ ಮೊಬೈಲ್ ಕಳವು ಮಾಡಿಕೊಂಡು ಬಂದು ನೀಡುತ್ತಿದ್ದರು. ಕದ್ದ ಮೊಬೈಲ್‌ಗಳಿಗೆ ಇಂತಿಷ್ಟು ಹಣವನ್ನು ಕೊಡುತ್ತಿದ್ದ ಶ್ರೀನಿವಾಸ್, ಆ ಮೊಬೈಲ್‌ಗಳನ್ನು ಕೋರಿಯರ್‌ನಲ್ಲಿ ಕೇರಳಕ್ಕೆ ಪಾರ್ಸೆಲ್ ಮಾಡುತ್ತಿದ್ದ. ಆ ಪಾರ್ಸೆಲ್ ಅನ್ನು ಶಫೀಕ್ ಪಡೆದು ಕೆಲವೊಂದು ಸೆಕೆಂಡ್ ಹ್ಯಾಂಡ್ ಎಂದು ಮಾರಾಟ ಮಾಡುತ್ತಿದ್ದ. ಕೆಲವೊಂದರ ಬಿಡಿ ಭಾಗಗಳನ್ನು ಬಿಚ್ಚಿ ಮಾರಾಟ ಮಾಡುತ್ತಿದ್ದ.
ಇದರ ಲವಾಗಿ ಶಫೀಕ್, ಆನ್‌ಲೈನ್‌ನಲ್ಲಿ ಶ್ರೀನಿವಾಸ್‌ಗೆ ಹಣ ವರ್ಗಾವಣೆ ಮಾಡುತ್ತಿದ್ದ. ಇದೇ ಮಾದರಿ ಕೆಲ ವರ್ಷಗಳಿಂದ ಕದ್ದ ಮೊಬೈಲ್‌ಗಳ ಜಾಲ ಬೆಳೆದುಕೊಂಡಿತ್ತು. ಅ.14ರಂದು ಶ್ರೀನಿವಾಸ್ ಕಳುಹಿಸಿದ್ದ ಕೋರಿಯರ್ ಅನ್ನು ಕೇರಳದಲ್ಲಿ ಸ್ವೀಕರಿಸದ ಕಾರಣಕ್ಕೆ ವಾಪಸ್ ಬಂದಿತ್ತು. ಕೋರಿಯರ್ ಕಚೇರಿ ಸಿಬ್ಬಂದಿ, ಪಾರ್ಸೆಲ್ ಮಾಡಿದ್ದ ಶ್ರೀನಿವಾಸ್‌ಗೆ ಹಲವು ಬಾರಿ ೆನ್ ಮಾಡಿದರೂ ಸ್ವೀಕರಿಸಿರಲಿಲ್ಲ. ಅನುಮಾನ ಬಂದು ಬಾಕ್ಸ್ ತೆಗೆದು ನೋಡಿದಾಗ ಅದರಲ್ಲಿ 12 ಮೊಬೈಲ್ ಇರುವುದು ಗೊತ್ತಾಗಿ ಚಂದ್ರಾ ಲೇಔಟ್ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ಎಂ.ಎಂ. ಭರತ್ ನೇತೃತ್ವದ ತಂಡ, ಕೋರಿಯಲ್ ಪಾರ್ಸೆಲ್ ಮಾಡಿದ್ದ ವ್ಯಕ್ತಿಯ ಪೂರ್ವಪರ ಜಾಲಾಡಿದರು. ಕೊನೆಗೆ ತಾಂತ್ರಿಕ ಸಾಕ್ಷಾೃಧಾರಗಳನ್ನು ಸಂಗ್ರಹಿಸಿ ಭದ್ರಾವತಿಯಲ್ಲಿರುವ ಬಸವೇಶ್ವರ ಸರ್ಕಲ್‌ನಲ್ಲಿ ಶ್ರೀನಿವಾಸ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಪ್ಪೊಪ್ಪಿಕೊಂಡಿದ್ದಾನೆ.
ಕೋರ್ಟ್ ಅನುಮತಿ ಪಡೆದು ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ಶಫೀಕ್ ಸುಳಿವು ಲಭ್ಯವಾಯಿತು. ಆನಂತರ ಕೇರಳದ ಕೊಂಡುಪರಂಬಿಲ್ ಎಂಬಲ್ಲಿ ಆರೋಪಿ ಶಫೀಕ್‌ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸತ್ಯಾಂಶ ಬಾಯ್ಬಿಟ್ಟಿದ್ದಾನೆ. ಆತನ ಅಂಗಡಿ ಮೇಲೆ ದಾಳಿ ನಡೆಸಿದಾಗ ಶ್ರೀನಿವಾಸ್‌ನಿಂದ ಪಡೆದಿದ್ದ 30 ಮೊಬೈಲ್‌ಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.