ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಭಾನುವಾರ ತಡರಾತ್ರಿ 20ಕ್ಕೂ ಹೆಚ್ಚು ಕರೊನಾ ಸೋಂಕಿತರು ಮೃತಪಟ್ಟಿದ್ದು, ಆಕ್ಸಿಜನ್ ಕೊರತೆಯಿಂದಲೇ ಈ ದುರಂತ ಸಂಭವಿಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸಿಎಂ ಯಡಿಯೂರಪ್ಪ, ಅಲ್ಲಿನ ವಾಸ್ತವ ಏನೆಂದು ವರದಿ ಸಲ್ಲಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್ಗೆ ಸೂಚಿಸಿದ್ದಾರೆ. ಸಿಎಂ ಸೂಚನೆ ಮೇರೆಗೆ ಚಾಮರಾಜನಗರ, ಮೈಸೂರು ಮತ್ತು ಮಂಡ್ಯದತ್ತ ಸುಧಾಕರ್ ಪ್ರಯಾಣ ಬೆಳೆಸಿದ್ದಾರೆ.
ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಚಾಮರಾಜನಗರ ಘಟನೆ ನೋವಿನ ಸಂಗತಿ. ಅತ್ಯಂತ ದುರದೃಷ್ಟಕರ ವಿಚಾರ. ಕೂಡಲೇ ಚಾಮರಾಜನಗರ, ಮೈಸೂರು, ಮಂಡ್ಯಕ್ಕೆ ತರಳುತ್ತೇನೆ. ಸಾವನ್ನಪ್ಪಲು ಏನು ಕಾರಣ? ನಿಜವಾಗಿಯೂ ಆಕ್ಸಿಜನ್ ಕೊರತೆ ಇತ್ತೇ ಎಂಬುದನ್ನ ಪರಿಶೀಲಿಸುತ್ತೇನೆ. ಈ ಘಟನೆ ಬಗ್ಗೆ ಹಠಾತ್ತಾಗಿ ಹೇಳುವ ಬದಲು ಸ್ಪಷ್ಟ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದರು. ಇದನ್ನೂ ಓದಿರಿ ನನ್ನ ಕಣ್ಮುಂದೆಯೇ ಹಲವರು ಪ್ರಾಣಬಿಟ್ಟರು, ನನಗೂ ಭಯವಾಗ್ತಿದೆ… ಎಂದು ಕರೆ ಮಾಡಿದ್ದ ನವವಿವಾಹಿತ 2 ತಾಸಲ್ಲೇ ಪ್ರಾಣಬಿಟ್ಟ
ನನ್ನ ಕಣ್ಮುಂದೆಯೇ ಹಲವರು ಪ್ರಾಣಬಿಟ್ಟರು, ನನಗೂ ಭಯವಾಗ್ತಿದೆ… ಎಂದು ಕರೆ ಮಾಡಿದ್ದ ನವವಿವಾಹಿತ 2 ತಾಸಲ್ಲೇ ಪ್ರಾಣಬಿಟ್ಟ
ನಿನ್ನೆ ಹಸೆಮಣೆಗೇರಿದ್ದ ಮದುಮಗ ಇಂದು ಕರೊನಾಗೆ ಬಲಿ! ಮನಕಲಕುತ್ತೆ ಈ ಘಟನೆ
ಆಸ್ಪತ್ರೆ ಒಳಗೂ ಹೆಣಗಳ ರಾಶಿ, ಹೊರಗೂ ಹೆಣ… ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸುತ್ತೆ ಚಾಮರಾಜನಗರದ ಘಟನೆ