More

    ‘ತಲೈವರ್​ 170’, ‘ಕೆಎಚ್​ 234’ ನಂಬರ್​ ಟೈಟಲ್​ ಮೂಲಕ ಟ್ರೆಂಡ್​ ಸೃಷ್ಟಿಸಲು ಸಜ್ಜಾದ್ರಾ ಸ್ಟಾರ್​ ನಟರು?

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್​ವುಡ್​, ಕಾಲಿವುಡ್​, ಬಾಲಿವುಡ್​, ಟಾಲಿವುಡ್​ ಹಾಗೂ ಮಾಲಿವುಡ್​ ಚಿತ್ರರಂಗಗಳ ಸ್ಟಾರ್​ ನಟರ ಸಿನಿಮಾಗಳು ಪ್ಯಾನ್​ ಇಂಡಿಯಾ ಚಿತ್ರವಾಗಿ ಹೊರಹೊಮ್ಮುವ ಮುಖೇನ ಜಾಗತಿಕವಾಗಿ ರಿಲೀಸ್ ಆಗುತ್ತಿದೆ.

    ಇದನ್ನೂ ಓದಿ: ವೈಚಾರಿಕತೆ ಕೊಂದರೆ ಬೌದ್ಧಿಕ ಅಂಗವೈಕಲ್ಯ: ಸಂಸ್ಕೃತಿ ಚಿಂತಕ ರಹಮತ್ ತರೀಕೆರೆ ಅಭಿಮತ

    ಈ ಮೂಲಕ ಸಹಸ್ರಾರು ಸಂಖ್ಯೆಯ ಸಿನಿಪ್ರೇಕ್ಷಕರ ಮನವನ್ನು ಭಾರತೀಯ ಸಿನಿಮಾಗಳು ತಲುಪುತ್ತಿದ್ದು, ಇದೀಗ ಟಾಲಿವುಡ್​ನಲ್ಲಿ ಹೊಸ ನಂಬರ್​ ಟೈಟಲ್​ ಟ್ರೆಂಡ್​ ಶುರುವಾಗಿದೆ. ಏನಿದು ನಂಬರ್​ ಟೈಟಲ್​ ಟ್ರೆಂಡ್​?

    ಪ್ಯಾನ್​ ಇಂಡಿಯಾ ಫಿಲಂ ಆಗಿರುವ ಕಾರಣವೋ ಏನೋ ಸ್ಟಾರ್​ ನಟರ ಚಿತ್ರಗಳಿಗೆ ಇದೀಗ ಅವರ ಮುಂದಿನ ಸಿನಿಮಾ ಸಂಖ್ಯೆಯನ್ನು ತಿಳಿಸುವ ನಿಟ್ಟಿನಲ್ಲಿ ಈ ರೀತಿ ನಂಬರ್​ ಟೈಟಲ್ ಇಡಲಾಗುತ್ತಿದೆ. ಆಯಾ ಹೀರೋಗಳು ಅಭಿನಯಿಸಲಿರುವ ಚಿತ್ರಗಳ ಸಂಖ್ಯೆಯನ್ನೇ ಶೀರ್ಷಿಕೆಯಾಗಿ ಘೋಷಿಸಲಾಗುತ್ತಿದೆ. ಈ ಸಾಲಿನಲ್ಲಿ ಟಾಲಿವುಡ್​, ಕಾಲಿವುಡ್​ನ​ ಟಾಪ್​ ನಟರು ಮುಂದಿದ್ದಾರೆ.

    ಇದನ್ನೂ ಓದಿ: ವಿಧಾನಸಭೆ ಚುನಾವಣೆ ಕಣದಲ್ಲಿ 82 ವರ್ಷದ ವೃದ್ಧೆ; ಕಾರಣ ತಿಳಿದ ಅಧಿಕಾರಿಗಳು ಶಾಕ್!

    ಇತ್ತೀಚೆಗಷ್ಟೇ ಕಮಲ್​ ಹಾಸನ್​ ಮತ್ತು ಮಣಿರತ್ನಂ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಚಿತ್ರಕ್ಕೆ ‘ಕೆಎಚ್​ 234’ ಎಂದು ಶೀರ್ಷಿಕೆ ಇಡಲಾಯಿತು. ಇದೇ ರೀತಿ ರಜನಿಕಾಂತ್​ ಅವರ ಚಿತ್ರಕ್ಕೆ ‘ತಲೈವರ್​ 170’, ರವಿತೇಜ ಸಿನಿಮಾಗೆ ‘ಆರ್​ಟಿ4ಜಿಎಂ’, ವಿಜಯ್​ ದೇವರಕೊಂಡ ಚಿತ್ರಕ್ಕೆ ‘ವಿಡಿ 13’ ಎಂದು  ಘೋಷಿಸಲಾಗಿದೆ.

    ಇದರೊಟ್ಟಿಗೆ ನಂದಮೂರಿ ಬಾಲಕೃಷ್ಣ ಅಭಿನಯದ ‘ಭಗವಂತ ಕೇಸರಿ’ ಚಿತ್ರ ಉತ್ತಮ ಯಶಸ್ಸು ಪಡೆದ ಬೆನ್ನಲ್ಲೇ ಅವರ ಮುಂದಿನ ಸಿನಿಮಾಗೆ ‘ಎನ್‌ಬಿಕೆ 109’ ಎಂದು ಟೈಟಲ್ ಘೋಷಿಸಿದ್ದಾರೆ. ಈ ಚಿತ್ರವನ್ನು ವಾಲ್ಟೇರ್ ವೀರಯ್ಯ ಖ್ಯಾತಿಯ ಬಾಬಿ ಕೊಲ್ಲಿ ನಿರ್ದೇಶಿಸಲಿದ್ದಾರೆ. ಒಟ್ಟಾರೆ ಸ್ಟಾರ್​ ಹೀರೋಗಳ ಸಿನಿಮಾಗಳಿಗೆ ಈ ರೀತಿ ಟೈಟಲ್​ಗಳನ್ನು ಘೋಷಿಸುತ್ತಿರುವುದು ಚಿತ್ರರಂಗದಲ್ಲಿ ಒಂದು ರೀತಿ ನಂಬರ್​ ಟ್ರೆಂಡ್​ ಆಗಿ ಮುಂದುವರೆಯುತ್ತಿದೆ.

    ಫೇಸ್​ಬುಕ್​ನಲ್ಲಿ ‘ಬ್ಯಾಕ್ ಪೇನ್​’; ಬಳಕೆದಾರರಿಂದ ವಿಶೇಷ ಬೇಡಿಕೆ..

    ರಾಜ್ಯೋತ್ಸವ ರಸಪ್ರಶ್ನೆ - 20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts