More

  ಶುರುವಾಯ್ತು ಹೊಸಬರ ‘ಜರ್ನಿ’; ನಿರೂಪಕನಿಂದ ನಿರ್ದೇಶನದತ್ತ ಅಗ್ನಿ!

  ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸಬರ ಅಬ್ಬರ ಜೋರಾಗಿದೆ. ಹಲವು ಹೊಸಬರು ಗುಣಮಟ್ಟದ, ಕಂಟೆಂಟ್​ವುಳ್ಳ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬರುತ್ತಿದ್ದಾರೆ. ದೊಡ್ಡ ಆಸೆಗಳನ್ನು ಹೊತ್ತು ಚಿತ್ರಂಗದಲ್ಲಿ ಪ್ರಶಂಸೆಯನ್ನು ಪಡೆದು, ಇದೀಗ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ. ಈ ಸಾಲಿನಲ್ಲಿ ಇದೀಗ ಅಗ್ನಿ ‘ಜರ್ನಿ’ ಸಿನಿಮಾ ಮುನ್ನೆಲೆಗೆ ಬಂದಿದೆ.

  ಇದನ್ನೂ ಓದಿ: ಹುಲ್ಲು, ಎಲೆ ತಿಂದಿದ್ದಕ್ಕಾಗಿ ಒಂದು ವರ್ಷ ಜೈಲು; ಕೊನೆಗೂ ಬಿಡುಗಡೆ ಭಾಗ್ಯ

  ಇತ್ತೀಚೆಗೆಷ್ಟೇ ಬೆಂಗಳೂರಿನ ಬಂಡೇ ಮಹಾಕಾಳಿ ಸನ್ನಿಧಿಯಲ್ಲಿ ಜರ್ನಿ ಸಿನಿಮಾದ ಮುಹೂರ್ತ ನೆರವೇರಿದೆ. ಈ ವೇಳೆ ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿದೆ. ಚಿತ್ರದ ನಿರ್ದೇಶಕ ಅಗ್ನಿ ಮಾತನಾಡಿದ್ದು, “5 ಜನ ಸ್ನೇಹಿತರ ನಡುವೆ ನಡೆಯುವ ಕಥೆ. ಕಾಲೇಜ್ ನಂತರದ ದಿನಗಳನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ. ಹಾಸನ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. ನಿರ್ದೇಶಕನಾಗಿ ನನಗೆ ಇದು ಮೊದಲ ಸಿನಿಮಾ. ನಿರೂಪಕನಿಂದ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಡುತ್ತಿದ್ದೇನೆ” ಎಂದು ಹೇಳಿದರು.

  “ಅಗ್ನಿ ಅವರು ಹೇಳಿದ ಕಥೆ ನನಗೆ ಬಹಳ ಇಷ್ಟವಾಯ್ತು. ಸಿನಿಮಾ ಶುರುವಾದಾಗಿನಿಂದ ಅಂತ್ಯದವರೆಗೂ ಮನರಂಜನೆ ಸಿಗುತ್ತದೆ. ಕ್ಲೈಮ್ಯಾಕ್ಸ್​ಗೂ ಮುನ್ನ ಪ್ರತಿಯೊಬ್ಬರ ಮುಖದಲ್ಲಿ ನಗು ಇರುತ್ತದೆ, ಅಂತಿಮದಲ್ಲಿ ಕಣ್ಣೀರಿಡುತ್ತಾರೆ. ಕತೆ ಅದ್ಭುತವಾಗಿ ಮೂಡಿಬಂದಿದೆ. ನಮ್ಮಂತ ಹೊಸಬರಿಗೆ ನಿಮ್ಮ ಆಶೀರ್ವಾದವಿರಲಿ” ಎಂದು ಚಿತ್ರದ ನಾಯುಕ ದಿನಿ ಹೇಳಿದ್ದಾರೆ.

  ಇದನ್ನೂ ಓದಿ:  ಗುರು- ಶಿಷ್ಯರು ಒಂದೇ ನಾಣ್ಯದ ಎರಡು ಮುಖಗಳು; ಶಿಕ್ಷಕರ, ಮಕ್ಕಳ ದಿನಾಚರಣೆಯಲ್ಲಿ ಶಿಕ್ಷಕಿ ಡಾ.ಗೀತಾ ಸುತ್ತಕೋಟಿ ಹೇಳಿಕೆ

  ಈ ಚಿತ್ರದ ಮೂಲಕ ದಿನಿ ಎಂಬ ಯುವ ಪ್ರತಿಭೆ ನಾಯಕನಾಗಿ ಬಣ್ಣ ಹಚ್ಚುತ್ತಿದ್ದು, ಮುಖ್ಯಭೂಮಿಕೆಯಲ್ಲಿ ಪೃಥ್ವಿ, ಸ್ಪೂರ್ತಿ, ಚೇತನ್ ದುರ್ಗ ಕಾಣಿಸಿಕೊಳ್ಳಲಿದ್ದಾರೆ. ‘ಜರ್ನಿ’ ಒಂದೊಳ್ಳೆ ಯೂತ್ ಎಂಟರ್​ಟೈನರ್ ಸಿನಿಮಾ. ಕಾಮಿಡಿ ಜತೆಗೆ ಎಮೋಷನಲ್ ಮಿಶ್ರಣವನ್ನು ಹದವಾಗಿ ಬೆರೆಸಿ ಚಿತ್ರ ಎಣೆಯಲಾಗಿದೆ. ನಿರ್ದೇಶಕರಾಗಿರುವ ಅಗ್ನಿ, ಹರಿಪ್ರಸಾದ್ ನಾಯಕ್ ಜತೆಗೂಡಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

  ಅರುಣ್ ಕುಮಾರ್ ಬಿಟಿ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ ಜರ್ನಿ ಚಿತ್ರಕ್ಕಿದೆ. ಡಿಸೆಂಬರ್ ಮೊದಲ ವಾರದಂದು ಜರ್ನಿ ಸಿನಿಮಾದ ಚಿತ್ರೀಕರಣ ಚಾಲುವಾಗಲಿದೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಮಾಹಿತಿಯನ್ನು ಒಂದೊಂದಾಗಿ ರಿವೀಲ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

  VIDEO | BBKS10: ಹೊರಗಡೆ ನನಗೂ 35 ಕಂಪನಿಯಿದೆ ಎಂಬ ವಿನಯ್​ ಹೇಳಿಕೆಗೆ ಇಶಾನಿ ಕೊಟ್ರು ಉತ್ತರ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts