ಸಂಪಾದಕೀಯ | ಬಾಂಧವ್ಯದ ಹೊಸ ಅಧ್ಯಾಯ

blank

ದೀರ್ಘ ಅವಧಿಯ ಬಳಿಕ ಭಾರತ ಮತ್ತು ಚೀನಾ ಎರಡೂ ರಾಷ್ಟ್ರಗಳು ಸ್ನೇಹ ವರ್ಧನೆಯ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದು, ಈ ಬೆಳವಣಿಗೆಯನ್ನು ಜಾಗತಿಕ ವಲಯ ಕೂಡ ಕುತೂಹಲದಿಂದ ಗಮನಿಸುತ್ತಿದೆ. ‘ಭಾರತ ಮತ್ತು ಚೀನಾದ ನಡುವೆ ಆರೋಗ್ಯಕರ ಸ್ಪರ್ಧೆ ಇರಲಿ. ಸಂಘರ್ಷ ಬೇಡ’ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಚೀನಾ ಶ್ಲಾಘಿಸಿದೆ. ಅಮೆರಿಕದ ಪಾಡ್​ಕಾಸ್ಟರ್ ಲೆಕ್ಸ್ ಫ್ರಿಡ್​ವುನ್​ರೊಂದಿಗೆ ಮೋದಿ ಮಾತನಾಡುತ್ತ, ‘ಲಡಾಕ್​ನಲ್ಲಿ 2020ರ ಘರ್ಷಣೆ ಬಳಿಕ ಭಾರತ ಮತ್ತು ಚೀನಾ ಗಡಿ ಸಮಸ್ಯೆ ಪರಿಹಾರಕ್ಕಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರೊಂದಿಗೆ ಇತ್ತೀಚೆಗೆ ಮಾತುಕತೆ ನಡೆಸಿದ್ದೆ. ಆ ಬಳಿಕ ಗಡಿಯಲ್ಲಿನ ಸ್ಥಿತಿ ಸಹಜತೆಗೆ ಮರಳಿದೆ’ ಎಂದು ತಿಳಿಸಿದ್ದರು.

ಮೋದಿಯವರ ಹೇಳಿಕೆಯನ್ನು ಶ್ಲಾಘಿಸಿರುವ ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಮಾವೋ ನಿಂಗ್, ‘2000 ವರ್ಷಗಳಿಗೂ ಹೆಚ್ಚಿನ ಇತಿಹಾಸದಲ್ಲಿ ಎರಡೂ ದೇಶಗಳು ಸ್ನೇಹವನ್ನು ಕಾಯ್ದುಕೊಂಡಿವೆ. ಎರಡು ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳಾದ ಭಾರತ ಮತ್ತು ಚೀನಾ ತಮ್ಮ ಅಭಿವೃದ್ಧಿಗೆ ವೇಗ ನೀಡಲು ಪರಸ್ಪರರನ್ನು ಬೆಂಬಲಿಸುತ್ತಿವೆ. ಇದು 280 ಕೋಟಿಗೂ ಹೆಚ್ಚಿನ ಜನರ ಮೂಲಭೂತ ಹಿತಾಸಕ್ತಿಗಳನ್ನು ಪೂರೈಸುತ್ತಿದೆ’ ಎಂದಿದ್ದಾರೆ. ಅಲ್ಲದೆ, ‘ಚೀನಾ ಮತ್ತು ಭಾರತ ನಡುವಿನ ರಾಜತಾಂತ್ರಿಕ ಸಂಬಂಧಗಳ 75ನೇ ವಾರ್ಷಿಕೋತ್ಸವದ ಸಂದರ್ಭವನ್ನು ಅವಕಾಶವಾಗಿ ಬಳಸಿಕೊಂಡು ಸ್ಥಿರ ಮತ್ತು ಸುಭದ್ರ ಹಾದಿಯಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮುನ್ನಡೆಸಲು ಚೀನಾ ಭಾರತದೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ’ ಎಂಬ ಆಶ್ವಾಸನೆಯನ್ನೂ ನೀಡಿರುವುದು ಆಶಾವಾದ ಹುಟ್ಟಿಸಿದೆ.

‘ನೆರೆರಾಷ್ಟ್ರಗಳು ಭೌಗೋಳಿಕ ಸೃಷ್ಟಿ. ಆದರೆ, ಅವುಗಳೊಂದಿಗಿನ ಸಂಬಂಧ ಸುಧಾರಣೆಯ ಮೂಲಕ ಮಾನವೀಯತೆ, ಸುಧಾರಣೆಯ ಹಾದಿಯಲ್ಲಿ ದೃಢವಾದ ಹೆಜ್ಜೆಯನ್ನು ಇರಿಸಬಹುದು’ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು. ಇದು ವಾಸ್ತವ ಕೂಡ ಹೌದು. ನೆರೆರಾಷ್ಟ್ರಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಆದರೆ, ಇವು ಸಂಘರ್ಷಕ್ಕೆ ದಾರಿ ಮಾಡಿಕೊಡಬಾರದು, ದ್ವಿಪಕ್ಷೀಯ ಸಂಬಂಧವನ್ನು ಬಲಿ ಪಡೆಯಬಾರದು. ಚೀನಾದ ಮಟ್ಟಿಗೆ ಹೇಳುವುದಾದರೆ, ಡ್ರಾ್ಯಗನ್ ರಾಷ್ಟ್ರವು ಭಾರತದ ಹೆಚ್ಚುತ್ತಿರುವ ವರ್ಚಸ್ಸು, ಶಕ್ತಿ ಮತ್ತು ಅಂತಾರಾಷ್ಟ್ರೀಯ ವೇದಿಕೆಯಲ್ಲಿನ ಪ್ರಾಮುಖ್ಯವನ್ನು ಗಮನಿಸುತ್ತಿದೆ. ಹಾಗಾಗಿ, ಮಾತುಕತೆಯ ಮಾರ್ಗವನ್ನು ಮತ್ತಷ್ಟು ವಿಶಾಲಗೊಳಿಸಿದೆ.

ಇದು ಉತ್ತಮ ನಡೆಯೂ ಹೌದು. ಭಾರತ ಮತ್ತು ಚೀನಾ ನಡುವಿನ ಸ್ನೇಹಕ್ಕೆ ಸುದೀರ್ಘ ಇತಿಹಾಸವಿದೆ. ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರ ಸಂಬಂಧವೂ ಗಣನೀಯವಾಗಿ ಹೆಚ್ಚಿದೆ. ಜಾಗತಿಕವಾಗಿ ಚೀನಾ ಮತ್ತು ಭಾರತ ದೊಡ್ಡ ಶಕ್ತಿಗಳಾಗಿ ಬೆಳೆದಿವೆ. ಹಾಗಾಗಿ, ಗಡಿ ವಿವಾದದಂಥ ಸೂಕ್ಷ್ಮ ವಿಷಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡು, ಇತರ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರದಿಂದ ಸಾಗಿದರೆ ಅದರಿಂದ ಎರಡೂ ದೇಶಗಳಿಗೆ ಹಿತ ಎಂಬುದರಲ್ಲಿ ಅನುಮಾನವಿಲ್ಲ. ಜಾಗತಿಕ ರಾಜಕೀಯದ ಸಮೀಕರಣಗಳು ವೇಗವಾಗಿ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಭಾರತ ಮತ್ತು ಚೀನಾದ ನಡುವೆ ಬಾಂಧವ್ಯದ ಹೊಸ ಅಧ್ಯಾಯ ಆರಂಭವಾದರೆ ಅಭಿವೃದ್ಧಿ ಪ್ರಕ್ರಿಯೆಗೆ ಖಂಡಿತ ವೇಗ ಸಿಗಲಿದೆ.

ಭೂಮಿಯತ್ತ ಸುನೀತಾ: ಆಕೆ ಸುರಕ್ಷಿತವಾಗಿ ಹಿಂತಿರುಗಿದ್ರೆ ಸಾಕು! ಅದೇ ನಮಗೆ ಹಬ್ಬ, ಸಂಭ್ರಮ | Sunita Williams

Share This Article

Toilet ಬಳಸಿದ ನಂತರ ಈ ತಪ್ಪು ಎಂದಿಗೂ ಮಾಡಬೇಡಿ: ಅಪಾಯ ಕಾದಿದೆಯಂತೆ!

Toilet : ನಮಲ್ಲಿ ಹಲವರು ಶೌಚಾಲಯ (ಪಾಶ್ಚಾತ್ಯ ಶೌಚಾಲಯ) ಬಳಸಿದ ನಂತರ ಟಾಯ್ಲೆಟ್​ನ ಮುಚ್ಚುಳ ಮುಚ್ಚದೇ…

ಬೇಸಿಗೆಯಲ್ಲಿ ನಿಮ್ಮ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ, ಮೊಸರು ಅಥವಾ ಮಜ್ಜಿಗೆ?Summer Health Tips

  Summer Health Tips: ಬೇಸಿಗೆಯ ಸುಡುವ ಬಿಸಿಲಿನಲ್ಲಿ ಮಧ್ಯಾಹ್ನವಾಗಲಿ ಅಥವಾ ಸಂಜೆಯಾಗಲಿ, ನಮ್ಮ ದೇಹವನ್ನು…

Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು

Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…