More

    ಮಾನವ ಮುಖ ಹೋಲುವ ಮೇಕೆಯನ್ನು ದೇವರ ಅವತಾರವೆಂದು ಪೂಜಿಸುವ ಜನರು; ಆದರೆ ನಿಜಕ್ಕೂ ಆ ಪ್ರಾಣಿಗಿರುವ ಸಮಸ್ಯೆ ಏನು ಗೊತ್ತಾ?

    ರಾಜಸ್ತಾನದ ನಿಮೋಡಿಯಾ ಎಂಬಲ್ಲಿ ಮೇಕೆಯೊಂದಿದೆ. ಆ ಮೇಕೆ ಉಳಿದವುಗಳಂತೆ ಇಲ್ಲ, ಸ್ವಲ್ಪ ವಿಭಿನ್ನವಾಗಿದೆ. ಹಾಗಾಗಿ ಈ ಮೇಕೆಯನ್ನು ಅಲ್ಲಿನ ಜನರು ಪೂಜಿಸುತ್ತಾರೆ.

    ಅಷ್ಟಕ್ಕೂ ಅದೇನು ದೈವಿ ಶಕ್ತಿ ಹೊಂದಿದೆಯಾ ಎಂದು ಕೇಳಿದರೆ ಆ ಬಗ್ಗೆ ಯಾರಿಗೂ ಗೊತ್ತಿಲ್ಲ. ಆದರೆ ನೋಡಲು ಅದು ವಿಭಿನ್ನವಾಗಿರುವ ಕಾರಣಕ್ಕೆ ಮನುಷ್ಯರು ಅದನ್ನು ಪೂಜಿಸುತ್ತಾರೆ. ದೇವರ ಅವತಾರವೆಂದೇ ನಂಬಿಕೊಂಡಿದ್ದಾರೆ.

    ಮುಖೇಶ್​ ಜೀ ಪ್ರಜಾಪಪ್​ ಎಂಬುವರು ಮೇಕೆಯ ಮಾಲೀಕ. ಹುಟ್ಟುವಾಗಲೇ ಸೈಕ್ಲೋಪಿಯಾ ಎಂಬ ಅಪರೂಪದ ಕಾಯಿಲೆಯೊಂದಿಗೆ ಹುಟ್ಟಿದ ಮೇಕೆಯ ಮುಖ ಮನುಷ್ಯರ ಮುಖವನ್ನು ಹೋಲುತ್ತದೆ. ಉಳಿದ ಮೇಕೆಗಳಂತೆ ಈ ಮೇಕೆಯ ಮುಖವಿಲ್ಲ. ಬದಲಿಗೆ ಆಕಾರ, ಅದರ ಕಣ್ಣುಗಳೆಲ್ಲ ತುಂಬ ಮನುಷ್ಯನ ಮುಖವನ್ನು ಹೋಲುತ್ತವೆ.

    ಆ ಮೇಕೆಯ ಕಷ್ಟ ಏನಿದೆಯೋ ಗೊತ್ತಿಲ್ಲ. ಆದರೆ ಸ್ಥಳೀಯರಂತೂ ಅದನ್ನು ದೇವರ ಅವತಾರವೆಂದೇ ಭಾವಿಸಿದ್ದಾರೆ. ಅದರ ಫೋಟೋಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿಕೊಂಡಿದ್ದಾರೆ.
    16,000 ಪ್ರಾಣಿಗಳಲ್ಲಿ ಒಂದು ಪ್ರಾಣಿ ಹೀಗೆ ಸೈಕ್ಲೋಪಿಯಾ ಸಮಸ್ಯೆಯನ್ನು ಒಳಗೊಂಡು ಹುಟ್ಟುತ್ತದೆ. ಇದು ಮನುಷ್ಯನಿಗೂ ಬರಬಹುದಾದ ರೋಗ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts