Tuesday, 20th November 2018  

Vijayavani

ಕಬ್ಬು ಬೆಳಗಾರರ ಜತೆ ಸಿಎಂ ಸಭೆ - ವಿಧಾನಸೌಧಕ್ಕೆ ಆಗಮಿಸಿದ ರೈತ ಮುಖಂಡರು - ಕಬ್ಬಿನ ಬಾಕಿ ಹಣ ಕೊಡಿಸ್ತಾರಾ ಎಚ್‌ಡಿಕೆ?        ಉ-ಕ ರೈತರ ಹೋರಾಟಕ್ಕೆ ಜಾತಿ ಲೇಪನ - ನಾಲಾಯಕ್ ಅನ್ನೋದು ಕೆಟ್ಟ ಪದ ಅಲ್ಲ - ಸಿಎಂ ವಿರುದ್ಧ ಮತ್ತೆ ಗುಡುಗಿದ ಯಡಿಯೂರಪ್ಪ        ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್‌- ಮುಜರಾಯಿ ದೇವಸ್ಥಾನದಲ್ಲಿ ಮದುವೆಗೆ ಬ್ರೇಕ್‌ - ಅರ್ಚಕರ ಮನವಿಗೆ ಇಲಾಖೆ ನಿರ್ಧಾರ        ದಿಗ್ಗಜರಿಂದಲೇ ಬಿಬಿಎಂಪಿಗೆ ಬಾಕಿ - ಜಾರ್ಜ್‌, ಹ್ಯಾರೀಸ್‌, ಕುಪೇಂದ್ರರೆಡ್ಡಿ ಕಟ್ಟಿಲ್ಲ ಟ್ಯಾಕ್ಸ್‌ - ಪಾಲಿಕೆ ದಿವಾಳಿಗೆ ಕಾರಣರಾದ್ರಾ ನಾಯಕರು        ಛತ್ತಿಸ್‌ಗಡದಲ್ಲಿ ಎರಡನೇ ಹಂತದ ಮತದಾನ -72 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್‌ - ಮಧ್ಯ ಪ್ರದೇಶದಲ್ಲಿ ಪ್ರಧಾನಿ ರ‍್ಯಾಲಿ        ಬೆಂಗಳೂರಿಗೆ ಬಂದಿಳಿದ ನವಜೋಡಿ - ಮುಂಬೈನಿಂದ ಸಿಲಿಕಾನ್‌ ಸಿಟಿಗೆ ರಣವೀರ್‌, ದೀಪಿಕಾ - ನಾಳೆ ಲೀಲಾ ಪ್ಯಾಲೇಸ್‌ನಲ್ಲಿ ರಿಸೆಪ್ಷನ್       
Breaking News

ಬಾಡಿಗೆದಾರನ ಕಪಿಮುಷ್ಠಿಯಲ್ಲಿದ್ದ ಮನೆ: ಕೊನೆಗೂ ವಾಪಸ್ ಪಡೆದ ಕುಟುಂಬ

Monday, 11.09.2017, 4:41 PM       No Comments

ಮುಂಬೈ: ಸತತ 48 ವರ್ಷಗಳ ಕಾಲ ಸುದೀರ್ಘ ಕಾನೂನು ಹೋರಾಟ ನಡೆಸಿ ಕೊನೆಗೂ ಬಾಡಿಗೆದಾರರ ಪಾಲಾಗಿದ್ದ ತಮ್ಮ ಮನೆಯನ್ನು ನಿಜ ಮಾಲೀಕರು ವಾಪಸ್ಸು ಪಡೆದ ಅಪರೂಪದ ಪ್ರಸಂಗವೊಂದು ಮುಂಬೈ ಮಹಾನಗರದಲ್ಲಿ ನಡೆದಿದೆ.

ತೀರ್ಪು ಪ್ರಕಟಿಸಿದ ಬಾಂಬೆ ಹೈಕೋರ್ಟ್ 12 ತಿಂಗಳ ಒಳಗಾಗಿ​ ಬಾಡಿಗೆದಾರರನ್ನು ಮನೆ ಖಾಲಿ ಮಾಡುವಂತೆ ಆದೇಶ ಹೊರಡಿಸಿದೆ. ದುರಾದೃಷ್ಟ ಏನಂದ್ರೆ ಪ್ರಕರಣವನ್ನು ಕೋರ್ಟ್​ ಅಂಗಳಕ್ಕೆ ಎಳೆದಿದ್ದ ಮನೆಯ ನಿಜವಾದ ಮಾಲೀಕ ಈಗಾಗಲೇ ಸಾವನ್ನಪ್ಪಿದ್ದಾರೆ.

ಏನಿದು ಪ್ರಕರಣ?
ಮುಂಬೈ ನಗರದ ನಿವಾಸಿ ನವೀನ್​ ಚಂದ್ರ ನಂಜಿ ಎಂಬುವವರು ತಮ್ಮ ಒಂದು ಮನೆಯನ್ನು 1967ರಲ್ಲಿ ಬಾಡಿಗೆಗೆ ನೀಡಿದ್ದರು. 2 ವರ್ಷಗಳ ಕಾಲ ಜೀವರಾಜ್​ ಭಾಂಜಿ ಎಂಬುವವರಿಗೆ ಮನೆಯನ್ನು ಬಾಡಿಗೆಗೆ ನೀಡಿದ್ದರು. ಆದರೆ 2 ವರ್ಷಗಳ ನಂತರ ಮನೆ ಖಾಲಿ ಮಾಡುವಂತೆ ಸೂಚಿಸಿದಾಗ ಆತ ನಿರಾಕರಿಸಿದ್ದ. ಅಷ್ಟೆ ಅಲ್ಲದೆ, ತಾನು ವಾಸವಿದ್ದ ಬಾಡಿಗೆ ಮನೆಯನ್ನು ತನ್ನ ಸ್ವಂತ ಮನೆಯಂತೆ ಸಂಪೂರ್ಣ ಬದಲಾಯಿಸಿಕೊಂಡಿದ್ದ.

ನಂತರ ಇದನ್ನು ಪ್ರಶ್ನಿಸಿ ಮನೆ ಮಾಲೀಕ ನವೀನ್​ ಚಂದ್ರ ನಂಜಿ, ಬಾಂಬೆ ಟ್ರಯಲ್​ ಕೋರ್ಟ್​ ಮೆಟ್ಟಿಲೇರಿದ್ದರು. ಆದರೆ ಬಾಡಿಗೆದಾರ ಮಾತ್ರ ಮನೆಯ ತಾತ್ಕಾಲಿಕ ಬದಲಾವಣೆಗೆ ಅವಕಾಶವಿದ್ದು, ಇಷ್ಟಕ್ಕೇ ಮನೆಯಿಂದ ಹೊರಹಾಕವ ನಿಯಮ ಬಾಂಬೆ ಬಾಡಿಗೆ​ ಕಾಯ್ದೆಯಲ್ಲಿ ಇಲ್ಲ ಎಂದು ಸಬೂಬು ನೀಡಿದ್ದ.

ಬಾಡಿಗೆದಾರನ ಕಾಟ ತಾಳಲಾರದೆ ನಂತರದ ದಿನಗಳಲ್ಲಿ ಮನೆ ಮಾಲೀಕ ನವೀನ್​ ಚಂದ್ರ ನಂಜಿ, ತನ್ನ ಪತ್ನಿ ಹಾಗೂ ಐವರು ಮಕ್ಕಳೊಂದಿಗೆ ಬೇರೆ ಪ್ರದೇಶಕ್ಕೆ ಹೋಗಿ ವಾಸವಿದ್ದ. ಆದರೆ ಇತ್ತ ಬಾಡಿಗೆದಾರ ಮಾತ್ರ ಹೇಳೋರು, ಕೇಳೋರು ಯಾರು ಇಲ್ಲ ಅಂತಾ ಮನೆಯನ್ನ ಅಕ್ರಮವಾಗಿ ಕೆಲಸಗಾರರ ಕ್ಯಾಂಟೀನ್​ ಆಗಿ ಮಾರ್ಪಾಡು ಮಾಡಿಕೊಂಡಿದ್ದ.

ಈ ಮಧ್ಯೆ ಪ್ರಕರಣ ಕೋರ್ಟಿನಲ್ಲಿದ್ದಾಗ ಅಕ್ರಮ ಮನೆ ಮಾರ್ಪಾಡು ಬಾಂಬೆ ಬಾಡಿಗೆ ಕಾಯ್ದೆ ಅಡಿ ಬರುತ್ತದೆ ಎಂದು 1984ರಲ್ಲಿ ಬಾಡಿಗೆದಾರನಿಗೆ ಮನೆಯಿಂದ ಹೊರಹೋಗಲು ಕೋರ್ಟ್​ ಆದೇಶ ನೀಡಿತ್ತು. ಆದರೆ ಬಾಡಿಗೆದಾರ ಭಾಂಜಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದ.

ಈ ಮಧ್ಯೆ ಮನೆ ಮಾಲೀಕ ತೀರಿಕೊಂಡಾಗ ಆತನ ಮಗ ಪ್ರಕರಣ ಇತ್ಯರ್ಥಕ್ಕಾಗಿ ಹೈಕೋರ್ಟ್​ ಮೆಟ್ಟಿಲೇರಿದ್ದ. ನಂತರದ ದಿನಗಳಲ್ಲಿ ಪ್ರಕರಣವನ್ನು ಪರಿಶೀಲಿಸಿದ ಬಾಂಬೆ ಹೈಕೋರ್ಟ್​ನ ನ್ಯಾಯಮೂರ್ತಿ ಬಾಡಿಗೆದಾರನನ್ನು ಮನೆಯಿಂದ ಹೊರಹಾಕಲು ಆದೇಶಿಸಿದೆ.(ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top