ನರೇಗಲ್ಲ: ದಾನ, ಧರ್ಮದ ಮಹತ್ವ ಸಾರುವ ಬಕ್ರೀದ್ ಅನ್ನು ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಸೋಮವಾರ ಆಚರಿಸಲಾಯಿತು.
ಅಬ್ಬಿಗೇರಿ, ಕೊಚಲಾಪುರ, ತೋಟಗಂಟಿ, ಜಕ್ಕಲಿ, ಯರೇಬೇಲೇರಿ, ಕುರಡಗಿ, ಗುಜಮಾಗಡಿ, ಡ.ಸ. ಹಡಗಲಿ, ಹಾಲಕೆರೆ, ನಿಡಗುಂದಿಕೊಪ್ಪ, ಮಾರನಬಸರಿ, ಕಳಕಾಪುರ, ನಿಡಗುಂದಿ ಸೇರಿದಂತೆ ವಿವಿಧೆಡೆ ಶ್ರದ್ಧಾ, ಭಕ್ತಿಯಿಂದ ಬಕ್ರೀದ್ ಆಚರಿಸಲಾಯಿತು.
ಪಟ್ಟಣದ ಗದಗ ರಸ್ತೆಯಲ್ಲಿರುವ ಈದ್ಗಾ ಮೈದಾನಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.
ಮೌಲಾನ್ ಇಮಾಮ್ ಸಾಬ್ ಹಳ್ಳಿಕೇರಿ, ಎ.ಎ. ನವಲಗುಂದ, ಲಾಡಸಾಬ್ ಹದ್ಲಿ, ಎ.ಐ. ರಾಹುತ್, ಡಿ.ಎಚ್. ಅಣ್ಣಿಗೇರಿ, ಅಲ್ಲಾಬಕ್ಷೀ ನದಾಫ್, ಅಬ್ದುಲ್ ಘಫಾರ ಲತೀಫ್‌ಸಾಬನವರ, ನಜೀರ್ ಹದ್ಲಿ, ಸಿಕಂದರ್ ಕುದರಿ, ದಾವುದಲಿ ಕುದರಿ, ಹಟೇಲಸಾಬ ಲತೀಫ್‌ಸಾಬನವರ, ಖಾದರ್‌ಭಾಷಾ ಹೊಲಗೇರಿ, ನಜೀರ್‌ಸಾಬ್ ಇಟಗಿ, ಹುಸೇನ್‌ಸಾಬ್ ಕುದರಿ, ಮೈಬೂಬ್ ಸಾಬ್ ನದಾಫ್,ನಜೀರ್ ಸಾಬ್ ದಳವಾಯಿ, ರೈಮಾನ್ ಸಾಬ್ ಮುಲ್ಲಾ, ಮಲಿಕಸಾಬ್ ರೋಣದ, ಗೌಸುಸಾಬ್ ನದಾಫ, ಹುಸೇನ್ ಗಡಾದ, ದಸ್ತಗಿರ್ ಸಾಬ್ ರವಡೂರ, ಹುಸೇನಸಾಬ್ ಕೊಪ್ಪಳ ಇತರರಿದ್ದರು.