
ಕುಂದಾಪುರ: ತಾಯ್ತನವು ಒಂದು ಅಮೂಲ್ಯ ಭಾಗ್ಯವಾಗಿದ್ದು, ತಾಯಿ ಮಹಾನ್ ತ್ಯಾಗಿ, ಅವಳ ಪ್ರೀತಿಗೆ ಕೊನೆಯಿಲ್ಲ, ಊಟ ತಿಂಡಿ ಅವಳಿಗೆ ಇಲ್ಲದಿದ್ದರೂ ಮಕ್ಕಳಿಗೆ ಗಂಡನಿಗೆ ಉಣಬಡಿಸುತ್ತಾಳೆ. ತಾಯಿ ಯಾವ ತ್ಯಾಗಕ್ಕೂ ಸಿದ್ಧವಾಗಿರುತ್ತಾಳೆ ಎಂದು ಕುಂದಾಪುರ ರೋಜರಿ ವಾತಾ ಚರ್ಚಿನ ಧರ್ಮಗುರು ಪಾವ್ಲ್ ರೇಗೊ ಹೇಳಿದರು.
ರೋಜರಿ ವಾತಾ ಚರ್ಚಿನಲ್ಲಿ ಕುಟುಂಬ ಆಯೋಗದ ಸಹಯೋಗದಲ್ಲಿ ಭಾನುವಾರ ನಡೆದ ತಾಯಂದಿರ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿರಿಯ ತಾಯಂದಿರನ್ನು ಗೌರವಿಸಲಾಯಿತು. ಸವಾಜ ಸೇವಕಿ ಜೂಡಿತ್ ಮೆಂಡೊನ್ಸಾ, ಚಚ್ ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಆಯೋಗಗಳ ಸಂಯೋಜಕಿ ಪ್ರೇವಾ ಡಿಕುನ್ಹಾ ಮತ್ತಿತರರು ಉಪಸ್ಥಿತರಿದ್ದರು. ಕುಟುಂಬ ಆಯೋಗದ ಸಂಚಾಲಕಿ ಜೂಲಿಯಾನ ಮಿನೇಜೆಸ್ ಸ್ವಾಗತಿಸಿದರು. ಡೆಫೊಡೀಲ್ ಕ್ರಾಸ್ಟೊ ವಂದಿಸಿದರು. ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ ಅತಿಥಿ ಪರಿಚಯಿಸಿದರು. ಶೋಭಾ ವಾಜ್ ನಿರೂಪಿಸಿದರು.