ತಿ.ನರಸೀಪುರದಲ್ಲಿ ವಿಷ ಸೇವಿಸಿ ತಾಯಿ-ಮಗಳು ಆತ್ಮಹತ್ಯೆ

ಮೈಸೂರು: ತಿ.ನರಸೀಪುರ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ತಾಯಿ- ಮಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ಮಂಗಳವಾರ ಸಂಭವಿಸಿದೆ. ನಂದಿನಿ(35) ಮತ್ತು ಇವರ ಪುತ್ರಿ ಸಿಂಚನಾ(9) ಮೃತ ದುರ್ದೈವಿಗಳು. ಹಲವು ದಿನಗಳಿಂದ ನಂದಿನಿ ಪತಿಯಿಂದ ಬೇರ್ಪಟ್ಟಿದ್ದರು. ಈ ವಿಚಾರದಲ್ಲಿ ಆಗಾಗ ಗಲಾಟೆಗಳಾಗಿತ್ತು. ಇದೇ ವಿಚಾರಕ್ಕೆ ಮನನೊಂದು ಮಗಳ ಜತೆ ವಿಷ ಕುಡಿದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಡರಾತ್ರಿ ಘೋರ ದುರಂತ: 8 ತಿಂಗಳ ಮಗು ಸೇರಿ ಐವರು ಮಲಗಿದ್ದಲ್ಲೇ … Continue reading ತಿ.ನರಸೀಪುರದಲ್ಲಿ ವಿಷ ಸೇವಿಸಿ ತಾಯಿ-ಮಗಳು ಆತ್ಮಹತ್ಯೆ