ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಿರುವುದಕ್ಕೆ ಒಡೆದ ಗಾಜುಗಳ ಮೇಲೆ ನಡೆದು ಹರಕೆ ತೀರಿಸಿದ ಅಭಿಮಾನಿ

ಚಿಕ್ಕೋಡಿ: ತಮ್ಮ ಆಸೆ ಈಡೇರಿಕೆಗೆ ಭಕ್ತರು, ಕೆಲವೊಮ್ಮೆ ಅಭಿಮಾನಿಗಳು ನಾನಾ ರೀತಿಯ ಹರಕೆ ಹೊತ್ತು, ಆಸೆ ಈಡೇರಿದ ಬಳಿಕ ಹರಕೆ ತೀರಿಸುವುದು ಸಾಮಾನ್ಯ. ಇಲ್ಲೊಬ್ಬ ವ್ಯಕ್ತಿ, ನರೇಂದ್ರ ಮೋದಿಯವರ ಅಭಿಮಾನಿಯಾಗಿದ್ದು ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ವಿಶೇಷ ಹರಕೆ ಹೊತ್ತು ಇಂದು ಅದನ್ನು ತೀರಿಸಿದ್ದಾನೆ.

ಗೋಕಾಕ ತಾಲೂಕಿನ ಮೂಡಲಗಿ ಗ್ರಾಮದ ಸಂತೋಷ್​ ಬೆಳವಿ ಮೋದಿಯವರ ಅಭಿಮಾನಿ. ಇವರು ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಒಡೆದ ಗಾಜಿನ ಮೇಲೆ ನಡೆಯುತ್ತೇನೆಂದು ಹರೆಕೆ ಹೊತ್ತಿದ್ದರು. ಇಂದು ಸಂಜೆ ಪ್ರಧಾನಿಯಾಗಿ ಎರಡನೇ ಬಾರಿಗೆ ಮೋದಿಯವರು ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆ ಒಡೆದ ಗಾಜುಗಳ ಮೇಲೆ ನಡೆದು ಹರಕೆ ತೀರಿಸಿದ್ದಾರೆ.

ಸಂತೋಷ್​, ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದು, ಗಾಜಿನ ಮೇಲೆ ನಡೆಯುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ. (ದಿಗ್ವಿಜಯನ್ಯೂಸ್​)

Leave a Reply

Your email address will not be published. Required fields are marked *