ಶನಿವಾರಸಂತೆ: “ನೀನು ನನ್ನನ್ನು ಪ್ರೀತಿಸಬೇಕು, ಇಲ್ಲದಿದ್ದರೆ ಕೊಲೆ ಮಾಡುತ್ತೇನೆ” ಎಂದು ಹಿಂದೂ ಧರ್ಮದ ಅಪ್ರಾಪ್ತೆಗೆ ಬೆದರಿಕೆ ಹಾಕಿದ್ದ ಅನ್ಯ ಕೋಮಿನ ಯುವಕನನ್ನು ಶುಕ್ರವಾರ ಶನಿವಾರಸಂತೆ ಪೊಲೀಸರು ಬಂಧಿಸಿದ್ದಾರೆ.
ಸಲ್ಮಾನ್ ಎಂಬಾತ ಬಂಧಿತ ಆರೋಪಿ. ಈತ ಶನಿವಾರಸಂತೆಯಲ್ಲಿ ಡಾನ್ಸ್ ತರಗತಿ ನಡೆಸುತ್ತಿದ್ದು, ಎರಡು ವರ್ಷಗಳ ಹಿಂದೆ ಬಾಲಕಿ ಡಾನ್ಸ್ ತರಗತಿಗೆ ಹೋಗುತ್ತಿದ್ದಳು. ನಂತರ ತರಗತಿಗೆ ಹೋಗುವುದನ್ನು ನಿಲ್ಲಿಸಿದ್ದಳು. ಈ ನಡುವೆ, ಅಪ್ರಾಪ್ತ ಹುಡುಗಿಗೆ ಕರೆ ಮಾಡಿದ ಸಲ್ಮಾನ್, “ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ, ತಕ್ಷಣ ಡಾನ್ಸ್ ತರಗತಿಗೆ ಬಾ” ಎಂದು ಒತ್ತಾಯಪೂರ್ವಕವಾಗಿ ಕರೆಸಿಕೊಂಡಿದ್ದಾನೆ. ನಂತರ, “ನೀನು ನನ್ನನ್ನು ಪ್ರೀತಿಸಬೇಕು. ಇಲ್ಲದಿದ್ದರೆ ಕೊಲೆ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ. ಇದನ್ನು ತಿಳಿದ ಹಿಂದುಪರ ಸಂಘಟನೆ ಕಾರ್ಯಕರ್ತರು ಡಾನ್ಸ್ ತರಗತಿಗೆ ತೆರಳಿ ಅಲ್ಲೇ ಇದ್ದ ಯುವಕ ಮತ್ತು ಅಪ್ರಾಪ್ತೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಡಾನ್ಸ್ ಕಲಿಸುವುದಾಗಿ ಸಲ್ಮಾನ್ ತಮ್ಮ ಪುತ್ರಿಯನ್ನು ತರಗತಿಗೆ ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಬಾಲಕಿಯ ಪಾಲಕರು ದೂರು ನೀಡಿದ್ದಾರೆ. ಈ ಸಂಬಂಧ ಶನಿವಾರಸಂತೆ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದು JAMES ರಹಸ್ಯ: ನಿಮ್ಮ ಕಣ್ಣಲ್ಲಿ ನೀರು ತರಿಸುತ್ತೆ ಶೈನ್ ಶೆಟ್ಟಿ ಬಿಚ್ಚಿಟ್ಟ ರೀಲ್ ಮತ್ತು ರಿಯಾಲಿಟಿ
ಅಪ್ಪು ನೆನಪಲ್ಲಿ ಮತ್ತೆ ಒಳ್ಳೆಯ ಕೆಲಸ ಮಾಡಿದ ಕಾಲಿವುಡ್ ಸೂಪರ್ ಸ್ಟಾರ್ ವಿಶಾಲ್