More

    ಕರೊನಾ ಸಂಕಷ್ಟ: ಹಸಿವಾಗ್ತಿದೆ ಊಟ ಕೊಡಿ… ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡಿದ ವಲಸೆ ಕಾರ್ಮಿಕರು!

    ಯಾದಗಿರಿ: ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಹಸಿವಿನಿಂದ ಕಂಗೆಟ್ಟ ವಲಸೆ ಕಾರ್ಮಿಕರು ಊಟಕ್ಕಾಗಿ ಭಿಕ್ಷೆ ಬೇಡುತ್ತಿದ್ದ ದೃಶ್ಯ ಮಂಗಳವಾರ ಬೆಳಗ್ಗೆ ಕಂಡು ಬಂತು.

    ಮಹಾಮಾರಿ ಕರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಕರ್ನಾಟಕದಾದ್ಯಂತ 14 ದಿನ ವೀಕೆಂಡ್​ ಕರ್ಫ್ಯೂ ಮಾದರಿಯಂತೆ ​ಟೈಟ್​ ರೂಲ್ಸ್​ ಇಂದು ರಾತ್ರಿಯಿಂದಲೇ ಜಾರಿ ಆಗಲಿದೆ. ಈ ಸುದ್ದಿ ತಿಳಿಯುತ್ತಿದ್ದೆ ಹಲವರು ಸ್ವಗ್ರಾಮಕ್ಕೆ ಗುಳೆ ಹೊರಟಿದ್ದಾರೆ. ಯಾದಗಿರಿಯಲ್ಲಿದ್ದ ಮಧ್ಯಪ್ರದೇಶ ಮೂಲದ ನೂರಾರು ವಲಸೆ ಕಾರ್ಮಿಕರು ತಮ್ಮೂರಿಗೆ ಹೋಗಲು ನಿನ್ನೆ ರಾತ್ರಿಯೇ ರೈಲು ನಿಲ್ದಾಣಕ್ಕೆ ಆಗಮಿಸಿದ್ದರು. ಇದನ್ನೂ ಓದಿರಿ 3ನೇ ಅಲೆ ತಡೆಗೆ ಜನರು ಸ್ವಲ್ಪ ತ್ಯಾಗ ಮಾಡಲೇಬೇಕು: ಸಚಿವ ಡಾ.ಕೆ.ಸುಧಾಕರ್​

    ರಾತ್ರಿಯಿಂದ ಊಟ ಮಾಡದೆ ರೈಲ್ವೆ ನಿಲ್ದಾಣದಲ್ಲೇ ಮಲಗಿದ್ದ ಕಾರ್ಮಿಕರು, ಕೈಯಲ್ಲಿ ಹಣವಿಲ್ಲ ನಮಗೆ ಊಟ ನೀಡಿ ಎನ್ನುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಯಾದಗಿರಿ ಜಿಲ್ಲೆಯ ಸೈದಾಪುರದಲ್ಲಿ ರಸ್ತೆ ಕಾಮಗಾರಿ ಕೆಲಸ ಮಾಡುತ್ತಿದ್ದ ಮಧ್ಯಪ್ರದೇಶದ ಕಾರ್ಮಿಕರು ಊರಿಗೆ ಹೋಗಬೇಕು ಎಂದರೂ ಗುತ್ತಿಗೆದಾರ ಹೆಚ್ಚಿನ ಹಣ ನೀಡಿಲ್ಲ. ಇರೋ ಅಲ್ಪಸ್ವಲ್ಪ ಹಣದಲ್ಲಿ ರೈಲು ಟಿಕೆಟ್​ಗೆ ಆಗಲಿದೆ. ಆದರೆ ಊಟಕ್ಕೆ ಹಣವಿಲ್ಲ ಎಂದು ಕಾರ್ಮಿಕರು ಅಳಲು ತೋಡಿಕೊಂಡರು.

    ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ

    ಕಾರಿನಲ್ಲೇ ಟಿವಿ ಸೀರಿಯಲ್​ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts