ಮಡಿಕೇರಿ:
ವಿರಾಜಪೇಟೆ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಹಾಗೂ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಸಹಯೋಗದೊಂದಿಗೆ ಪೊನ್ನಂಪೇಟೆ ತಾಲೂಕು ಬಾಳೆಲೆಯಲ್ಲಿ ಇತ್ತೀಚೆಗೆ ಗಾಂಧಿ ಸ್ಮೃತಿ ಬೃಹತ್ ಜನಜಾಗೃತಿ ಜಾಥಾ ಮತ್ತು ನವಜೀವನ ಸದಸ್ಯರ ಸಮಾವೇಶ ಕಾರ್ಯಕ್ರಮ ನಡೆಯಿತು. ಬಾಳೆಲೆ ಶ್ರೀ ವಿಜಯಲಕ್ಷಿö್ಮÃ ಪದವಿಪೂರ್ವ ಕಾಲೇಜು ಅಧ್ಯಕ್ಷ ಅಳಮೆಂಗಡ ಬೋಸ್ ಮಂದಣ್ಣ ಕಾರ್ಯಕ್ರಮ ಉದ್ಘಾಟಿಸಿದುರು. ನಂತರ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಗಬೇಕು, ಜನಜಾಗೃತಿ ಕಾರ್ಯಕ್ರಮಗಳು ಈ ಸಮಾಜಕ್ಕೆ ಹೆಚ್ಚಿನ ಅಗತ್ಯ ಇದೆ ಎಂದರು.
ಸಂಪನ್ಮೂಲ ವ್ಯಕ್ತಿ ಗಣೇಶ್ ಆಚಾರ್ಯ ಮಾತನಾಡಿ ಮದ್ಯವರ್ಜನಾ ಶಿಬಿರದಿಂದ ಒಟ್ಟು 1.50 ಲಕ್ಷ ಜನ ಕುಡಿತದಿಂದ ಮುಕ್ತಿ ಹೊಂದಿ ಉತ್ತಮ ಜೀವನ ನಡೆಸುತತಿದ್ದಾರೆ. ಮದ್ಯಪಾನ ಮಾಡುವುದರಿಂದ ಮಾಡುವವನಿಗೆ ಹಾನಿಯಾಗುವುದಲ್ಲದೆ ಕುಟುಂಬದ ಎಲ್ಲ ಸದಸ್ಯರಿಗೂ ಇದು ನಷ್ಟ. ಕುಡಿತದಿಂದ ಮುಕ್ತಿ ಹೊಂದಿದವರ ಈಗಿನ ಜೀವನ ಶೈಲಿಗೂ ಮೊದಲಿನ ಜೀವನಶೈಲಿಗೂ ಸಾಕಷ್ಟು ವ್ಯತ್ಯಾಸಗಳಿವೆ ಎಂದರು.
ಮದ್ಯವರ್ಜನ ಶಿಬಿರ ಸೇರಿ ಕುಡಿತ ಬಿಟ್ಟು ಮಾದರಿ ಜೀವನ ನಡೆಸುತ್ತಿರುವ ಗೋಣಿಕೊಪ್ಪದ ಕಳತ್ಮಾಡಿನ ತೀರ್ಥಕುಮಾರ್ ಅವರನ್ನು ಈ ವೇಳೆ ಅಭಿನಂದಿಸಲಾಯಿತು. ಈ ವೇಳೆ ಮಾತನಾಡಿದ ತೀರ್ಥಕುಮಾರ್ ಶಿಬಿರ ತಮ್ಮ ಜೀವನದ ಮೇಲೆ ಬೀರಿದ ಪರಿಣಾಮಗಳ ಮಾಹಿತಿ ನೀಡಿದರು. ಬ್ರಹ್ಮಗಿರಿ ಒಕ್ಕೂಟದ ಅಧ್ಯಕ್ಷೆ ಸುನೀತಾ ತಮ್ಮ ಪತಿ ಶಿಬಿರಕ್ಕೆ ಸೇರಿ ಕುಡಿತ ಬಿಟ್ಟ ನಂತರ ಕುಟುಂಬದಲ್ಲಿ ಆದ ಬದಲಾವಣೆ ಬಗ್ಗೆ ಅನಿಸಿಕೆ ಹಂಚಿಕೊAಡರು.
ಪೊನ್ನಂಪೇಟೆ ಠಾಣಾಧಿಕಾರಿ ನವೀನ್, ಗ್ರಾಮ ಪಂಚಾಯತ್ ಸದಸ್ಯೆ ಪಡಿಞರಂಡ ಕವಿತಾ ಪ್ರಭು, ಬಾಳೆಲೆ ಸಹಕಾರಿ ಬ್ಯಾಂಕ್ ಅಧ್ಯಕ್ಷ ಚಿಮ್ಮಣಮಾಡ ಶ್ರೀ ಕೃಷ್ಣ ಗಣಪತಿ, ಬಾಳೆಲೆ ಗ್ರಾ.ಪಂ. ಅಧ್ಯಕ್ಷೆ ಮುಕ್ಕಾಟಿರ ಜಾನಕಿ ಕಾವೇರಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕೊಡಗು ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಅರುಣ್ ಬಾನಂಗಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಾಳೆಲೆ ಒಕ್ಕೂಟ ಅಧ್ಯಕ್ಷೆ ಪದ್ಮಾವತಿ, ವಿರಾಜಪೇಟೆ ತಾಲೂಕಿನ ಯೋಜನಾಧಿಕಾರಿ ದಿನೇಶ್ ಇದ್ದರು.