More

  ಕಲಬುರಗಿಯಲ್ಲಿ ಕೋಲಿ ಸಮಾಜದ ಬೃಹತ್ ಸಮಾವೇಶ ಶೀಘ್ರ

  ಯಡ್ರಾಮಿ: ಕೋಲಿ ಸಮಾಜದ ಸಮಗ್ರ ಅಭಿವೃದ್ಧಿಗೆ ಪರಿಶಿಷ್ಟ ಪಂಗಡ ಸ್ಥಾನ ಅವಶ್ಯವಾಗಿದೆ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಕಲಬುರಗಿಯಲ್ಲಿ ಶೀಘ್ರದಲ್ಲಿ ಸುಮಾರು 5 ಲಕ್ಷ ಜನರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಲಾಗುವುದು. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಹೇಳಿದರು.

  ಕಣಮೇಶ್ವರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಅನಾವರಣ ಹಾಗೂ ಕೋಲಿ ಸಮಾಜದ ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಬದಲಾವಣೆ ಗಾಳಿ ಬೀಸಿದ್ದು, ಎಲ್ಲರೂ ಒಗ್ಗಟ್ಟಾಗುತ್ತಿದ್ದಾರೆ. ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಯುವಕರು ಅವರಿವರ ಹಿಂದೆ ಬಿದ್ದು ಹಾಳಾಗದೆ, ಸಮಾಜದ ಸಂಘಟನೆಯತ್ತ ಚಿತ್ತ ಹರಿಸಬೇಕು ಎಂದು ಸಲಹೆ ನೀಡಿದರು.

  ಸಿಂದಗಿಯ ಶ್ರೀ ಶಾಂತಗAಗಾಧರ ಸ್ವಾಮೀಜಿ, ತೊನಸನಹಳ್ಳಿಯ ಶ್ರೀ ಮಲ್ಲಣ್ಣಪ್ಪ ಮುತ್ಯಾ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಶರಣಪ್ಪ ಸುಣಗಾರ, ಪ್ರಮುಖರಾದ ಶಿವಶರಣಪ್ಪ ಕೋಬಾಳ, ಮಲ್ಲಿಕಾರ್ಜುನ ಸಾಹುಕಾರ, ಶೋಭಾ ಬಾಣಿ, ಡಾ.ಉಮೇಶ ಮುದ್ನಾಳ, ಬಸವರಾಜಗೌಡ ಮಾಲಿಪಾಟೀಲ್, ರೇವಣಸಿದ್ದಪ್ಪ ಕಮಾನಮನಿ, ವಸಂತರಾವ ನರಿಬೋಳ, ಸುನೀತಾ ತಳವಾರ, ಸರ್ದಾರ ರಾಯಪ್ಪ, ಶಿವಕುಮಾರ ನಾಟಿಕಾರ, ಶಿವಾಜಿ ಮೇಟಗಾರ, ಭಗವಂತ್ರಾಯ ಬೆಣ್ಣೂರ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts