ಬೆಂಗಳೂರು: ಬಾದಾಮಿ, ಮಲ್ಲಿಕಾ, ರಸಪುರಿ, ಬೈಗಂಪಲ್ಲಿ, ಸೇಂದೂರ, ತೋತಾಪುರಿ, ದಶಹರಿ, ಮಲಗೋವಾ, ಹಿಮಾಮ್ ಪಸಂದ್, ಕಾಲಾಪಾಡ್, ಕೇಸರ್ ಸೇರಿ ಬಗೆ ಬಗೆಯ ಮಾವುಗಳು…. ಮತ್ತೊಂದೆಡೆ ಚಂದ್ರ ಹಲಸು, ಗಮ್‌ಲೆಸ್, ರುದ್ರಾಕ್ಷಿ ಹಲಸು, ಸ್ಥಳೀಯ ಹಲಸುಗಳು ಸೇರಿ 6ಕ್ಕೂ ಹೆಚ್ಚಿನ ತಳಿಯ ರಾಶಿರಾಶಿ ಹಲಸಿನ ಹಣ್ಣು… ಇದು ಲಾಲ್‌ಬಾಗ್‌ನ ಹಾಪ್‌ಕಾಮ್ಸ್‌ನಲ್ಲಿ ಕಂಡು ಬಂದ ದೃಶ್ಯ.
ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸಲು ಹಾಪ್‌ಕಾಮ್ಸ್ ಈ ವರ್ಷ ಮಾವು ಮತ್ತು ಹಲಸಿನ ಮಾರಾಟ ಮೇಳ ಆರಂಭಿಸಿದೆ. ಹಾಪ್‌ಕಾಮ್ಸ್‌ನಲ್ಲಿ ಇಂದಿನಿಂದ ನಡೆಯುವ ಮಾವು ಮತ್ತು ಹಲಸು ಮೇಳಕ್ಕೆ ತೋಟಾಗಾರಿಕೆ ಸಚಿವ ಮುನಿರತ್ನ ಚಾಲನೆ ನೀಡಿದ್ದಾರೆ. ಋತುಮಾನದ ಅಂತ್ಯದವರೆಗೆ ಗ್ರಾಹಕರಿಗೆ ಮಾವು ಮತ್ತು ಹಲಸಿನ ಹಣ್ಣುಗಳು ರಿಯಾಯಿತಿ ದರದಲ್ಲಿ ಲಭ್ಯವಿರಲಿದೆ.
14 ಬಗೆಯ ಮಾವು: ರಿಯಾಯಿತಿ ದರದಲ್ಲಿ ಉತ್ಕೃಷ್ಟ ಗುಣಮಟ್ಟದ ಮಾವು ಹಾಗೂ ಹಲಸಿನ ಹಣ್ಣುಗಳನ್ನು ಮೇಳದಲ್ಲಿ ಒದಗಿಸುವ ಮೂಲಕ ರೈತರಿಗೆ ಹಾಗೂ ಗ್ರಾಹಕರಿಗೆ ಅನುಕೂಲ ಕಲ್ಪಿಸಲಾಗಿದೆ. 14 ಬಗೆಯ ಮಾವು ಹಾಗೂ 6ಕ್ಕೂ ಹೆಚ್ಚಿನ ಹಲಸಿನ ತಳಿಗಳು ಈ ಬಾರಿಯ ಮೇಳದ ವಿಶೇಷತೆಯಾಗಿದೆ. ಈ ಬಾರಿ ಮಳೆಯಿಂದಾಗಿ ಮಾವು ಬೆಳೆಗಳಿಗೆ ನಷ್ಟ ಉಂಟಾಗಿದೆ. ಆದರೂ, ಹಾಪ್‌ಕಾಮ್ಸ್ ವತಿಯಿಂದ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಮುಂದಾಗಿದ್ದೇವೆ. ಈ ಮೇಳದಿಂದ ರೈತರಿಗೆ ಹೆಚ್ಚಿನ ಆದಾಯ ಬಂದು ಅನುಕೂಲವಾಗಬೇಕು ಎಂಬುದು ನಮ್ಮ ಕಾಳಜಿಯಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಮಾವಿನ ಹಣ್ಣುಗಳ ವಹಿವಾಟುಗಳು ಹೆಚ್ಚಾಗಿದೆ. ಆದರೆ, ಇಳುವರಿ ಕಡಿಮೆಯಾಗಿದೆ. ಹಾಪ್‌ಕಾಮ್ಸ್ ಉತ್ಪನ್ನಗಳಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಬಂದಿದೆ. ರಾಸಾಯನಿಕ ಬೆರೆಸದ ಸಾವಯವ ಹಣ್ಣು, ತರಕಾರಿಗಳನ್ನು ಹಾಪ್‌ಕಾಮ್ಸ್ ಗ್ರಾಹಕರಿಗೆ ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಹಾಪ್‌ಕಾಮ್ಸ್ ಅನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಹೆಚ್ಚಿನ ಪ್ರಮಾಣದ ತರಕಾರಿ, ಹಣ್ಣುಗಳು ಲಭ್ಯವಾಗುವಂತೆ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಮುನಿರತ್ನ ಹೇಳಿದರು.
ಮಾವು ತಳಿಗಳು- ಮಾರಾಟ ದರ ರೂ.ಗಳಲ್ಲಿ (ಪ್ರತಿ ಕೆಜಿಗೆ)
ಬಾದಾಮಿ- 110
ಮಲ್ಲಿಕಾ-110
ರಸಪುರಿ-93
ಬೈಗನ್ಪಲ್ಲಿ-88
ಸೇಂದೂರ-58
ತೋತಾಪುರಿ-32
ದಶಹರಿ-128
ಮಲಗೋವ-175
ಹಿಮಾಮ್ ಪಸಂದ್-215
ಅಲ್ಫಾನ್ಸೋ (ಬಾಕ್ಸ್) ಪ್ರತಿ ಕೆ.ಜಿ.ಗೆ-126
ಕಾಲಾಪಾಡ್-115
ಕೇಸರ್-118
ಸಕ್ಕರೆಗುತ್ತಿ-190
ಹಲಸು-25
ಎಲ್ಲ ಹಾಪ್‌ಕಾಮ್ಸ್ ಮಳಿಗೆಗಳಲ್ಲೂ ಲಭ್ಯ: ರೈತರ ಮತ್ತು ಗ್ರಾಹಕರ ಹಿತದೃಷ್ಠಿಯಿಂದ ಋತುಮಾನಗಳಲ್ಲಿ ಲಭ್ಯವಿರುವ ಹಣ್ಣುಗಳಿಗೆ ಅನುಗುಣವಾಗಿ ಕಳೆದ ಹಲವು ವರ್ಷಗಳಿಂದ ಮೇಳ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಮೂಲಕ ರೈತರು ಬೆಳೆದಂತಹ ಋತುಮಾನದ ಹಣ್ಣುಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಋತುಮಾನದ ಅಂತ್ಯದವರೆಗೂ ನಗರದ ಎಲ್ಲ ಹಾಪ್‌ಕಾಮ್ಸ್ ಮಾರಾಟ ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ಮಾವು-ಹಲಸು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಮಾಹಿತಿ ನೀಡಿದರು.
ಲ್ಯಾಪ್ಟಾಪ್ ಸರಿ ಮಾಡಲು ಬಂದಾತ ಮಾಡಬಾರದ್ದು ಮಾಡಿಬಿಟ್ಟ, ಆ ಫೋಟೋ ನೋಡಿ ಬೆಚ್ಚಿದ ಮಹಿಳೆ!
https://www.vijayavani.net/a-lover-life-is-tragic-end-in-car-udupi/