ಯುವತಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಯುವಕನಿಗೆ ಧರ್ಮದೇಟು

ದಾವಣಗೆರೆ: ಯುವತಿಯೊಬ್ಬರಿಗೆ ಅಶ್ಲೀಲ ವಾಟ್ಸ್​ ಆ್ಯಪ್​ ಮತ್ತು ಫೇಸ್​ಬುಕ್​ನಲ್ಲಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಯುವಕನಿಗೆ ಯುವತಿಯರು ಧರ್ಮದೇಟು ಕೊಟ್ಟಿದ್ದಾರೆ. ಯುವಕನಿಗೆ ಥಳಿಸುತ್ತಿರುವ ವಿಡಿಯೋ ವೈರಲ್​ ಆಗಿದೆ.

ಜಗಳೂರು ಪಟ್ಟಣದಲ್ಲಿ ಭಾನುವಾರ ಸಂಜೆ ಘಟನೆ ನಡೆದಿದೆ. ಯುವತಿಯೊಬ್ಬರಿಗೆ ಜಗಳೂರು ತಾಲೂಕಿನ ಕಲ್ಲೇದೇವರಪುರ ಗ್ರಾಮದ ಯುವಕ ಪ್ರತಿನಿತ್ಯ ಫೇಸ್​ಬುಕ್​ ಮತ್ತು ವಾಟ್ಸ್​ ಆ್ಯಪ್​ನಲ್ಲಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ. ಇದರಿಂದ ಮನನೊಂದ ಯುವತಿ ಭಾನುವಾರ ಸಂಜೆ ಯುವಕನನ್ನು ಜಗಳೂರಿಗೆ ಕರೆಸಿ ಧರ್ಮದೇಟು ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *