ಬಾಳೆಹೊನ್ನೂರು: ಬದುಕಿನ ಅತಿ ದೊಡ್ಡ ಸಾಧನೆ ಹಿಂದೆ ದೊಡ್ಡ ತ್ಯಾಗವಿರುತ್ತದೆ. ತ್ಯಾಗ ಮತ್ತು ಪರಿಶ್ರಮ ಇಲ್ಲದೇ ಯಾವುದೂ ಸಿದ್ಧಿಸುವುದಿಲ್ಲ. ಮನುಷ್ಯ ಹಣದಿಂದ ದೊಡ್ಡವನಾಗದೇ ಗುಣದಿಂದ ದೊಡ್ಡವನಾಗಬೇಕು ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ರಂಭಾಪುರಿ ಪೀಠದಲ್ಲಿ ಸೋಮವಾರ ನಡೆದ ಶ್ರಾವಣ ಪೂಜಾನುಷ್ಠಾನ ಹಾಗೂ ಲಿಂ.ಶ್ರೀಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರ ಪುಣ್ಯ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸತ್ಯದ ದಾರಿ ಯಾವಾಗಲೂ ಕಷ್ಟಕರವಾಗಿರುತ್ತದೆ. ಆದರೆ ಆ ದಾರಿ ಎಂದಿಗೂ ನಮ್ಮನ್ನು ಸೋಲಲು ಬಿಡುವುದಿಲ್ಲ. ಬೆಂಕಿಯಲ್ಲಿ ಬೆಂದಷ್ಟು ಚಿನ್ನ ಹೊಳೆಯುವ ಹಾಗೆ ಸಂಕಟಗಳನ್ನು ಅನುಭವಿಸಿದಷ್ಟು ಮನುಷ್ಯ ಜ್ಞಾನಿಯಾಗುತ್ತಾನೆ. ಗುರಿ ಇಟ್ಟುಕೊಂಡು ಸಾಗುವವರು ಸಾಧಕರಾಗುತ್ತಾರೆ. ಆಸೆಗಳನ್ನು ಇಟ್ಟುಕೊಂಡು ಸಾಗುವವರು ಸಾಮಾನ್ಯರಾಗಿ ಉಳಿಯುತ್ತಾರೆ ಎಂದರು.
ಮನುಷ್ಯನಿಗೆ ಮರಣ ಇರುತ್ತದೆ. ಆದರೆ ಒಳ್ಳೆತನಕ್ಕೆ ಮರಣ ಇರುವುದಿಲ್ಲ. ಜೀವನದಲ್ಲಿ ಉನ್ನತಿ ಸಾಧಿಸಬೇಕಾದರೆ ಜನಬಲ ಹಣಬಲ ತೋಳಬಲ ಇದ್ದರೆ ಸಾಲದು. ದೈವಬಲ ಅಗತ್ಯವಾಗಿದೆ. ದುರ್ಯೋಧನನಿಗೆ ಎಲ್ಲವೂ ಇತ್ತು ಆದರೆ ದೈವಬಲ ಇರಲಿಲ್ಲ. ತಿಳವಳಿಕೆಗಿಂತ ನಡವಳಿಕೆಗಳು ಶ್ರೇಷ್ಠ. ತಿಳವಳಿಕೆ ಸೋಲಬಹುದು. ಆದರೆ ಉತ್ತಮ ನಡವಳಿಕೆ ಎಂದಿಗೂ ಸೋಲುವುದಿಲ್ಲ. ವೀರಶೈವ ಧರ್ಮ ಅರಿವು ಆದರ್ಶಗಳನ್ನು ಕೊಟ್ಟಿದೆ ಎಂದು ತಿಳಿಸಿದರು.
ಶ್ರೀ ಗುರುವಿಗೆ ಎಲ್ಲ ಧರ್ಮಗಳಲ್ಲಿ ಪ್ರಥಮ ಸ್ಥಾನ ಕಲ್ಪಿಸಿದ್ದಾರೆ. ಲಿಂ.ಶ್ರೀ ರಂಭಾಪುರಿ ರುದ್ರಮುನಿ ಜಗದ್ಗುರುಗಳು ನಿರಂತರ ಸಾಧನೆ ಮತ್ತು ಪ್ರಯತ್ನದಿಂದ ಜೀವನದಲ್ಲಿ ಶ್ರೇಯಸ್ಸು ಕಂಡವರು. ಕಿರಿ ವಯಸ್ಸಿನಲ್ಲಿ ಹೆತ್ತ ತಂದೆ ತಾಯಿ, ತಾರುಣ್ಯಾವಸ್ಥೆಯಲ್ಲಿ ಶ್ರೀ ಗುರುವಿನ ಮಾರ್ಗದರ್ಶನದಲ್ಲಿ ಬೆಳೆದು ಘನ ವಿದ್ವಾಂಸರಾದರು. ರಂಭಾಪುರಿ ಪೀಠವನ್ನು ಆರೋಹಣ ಮಾಡಿ ರಚನಾತ್ಮಕ ಮತ್ತು ಗುಣಾತ್ಮಕ ಕಾರ್ಯಗಳನ್ನು ಕೈಗೊಂಡ ಕೀರ್ತಿ ಅವರಿಗೆ ಸಲ್ಲುತ್ತದೆ. ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢಶಾಲೆ ಹಾಗೂ ಜಗದ್ಗುರು ರುದ್ರಮುನೀಶ್ವರ ಸಮುದಾಯ ಭವನ ನಿರ್ಮಿಸುವ ಮೂಲಕ ಶ್ರೀಪೀಠ ಅವರಿಗೆ ಕೃತಜ್ಞತೆ ಸಲ್ಲಿಸಿದೆ ಎಂದರು.
ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ, ಚಿಕ್ಕಮಗಳೂರು ಶಂಕರದೇವರಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿ ನಮನ ಸಲ್ಲಿಸಿದರು. ರಟ್ಟಿಹಳ್ಳಿ ವಿಶ್ವೇಶ್ವರ, ಸಿದ್ಧಲಿಂಗಯ್ಯ ಶಾಸಿ, ಆಲ್ದೂರು ವೀರಶೈವ ಸಮಾಜದ ಅಧ್ಯಕ್ಷ ಕೆ.ಎಸ್.ಮಹೇಶ್, ಪ್ರಧಾನ ಕಾರ್ಯದರ್ಶಿ ವೈ.ಸಿ.ಹಾಲೇಶ, ಖಜಾಂಚಿ ಇ.ಆರ್.ಗಂಗಾಧರಯ್ಯ, ಬಿ.ಆರ್.ಪ್ರಕಾಶ, ನಂದೀಶ, ದಯಾನಂದ, ಚಂದ್ರಶೇಖರ, ಶಂಕರಗೌಡ, ಪ್ರಶಾಂತ, ಸುಧಾಕರ, ಬಿ.ಬಿ.ರೇಣುಕಾರ್ಯ, ತಿಪಟೂರಿನ ಶಿವಶಂಕರ್, ಹಾನಗಲ್ಲ ಬಸವರಾಜ ಎಲಿ ಮತ್ತಿತರರು ಜಗದ್ಗುರುಗಳಿಂದ ಆಶೀರ್ವಾದ ಪಡೆದರು.
ಮನುಷ್ಯ ಗುಣದಿಂದ ದೊಡ್ಡವನಾಗಬೇಕು ಹಣದಿಂದಲ್ಲ
You Might Also Like
ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?
ಬೆಂಗಳೂರು: ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?
ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…
ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು
ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…