More

    ಮಾರುಕಟ್ಟೆಗೆ ಬಂದಿದೆ ಐಷಾರಾಮಿ ಎಲೆಕ್ಟ್ರಿಕ್ ಕಾರು; ಒಂದು ಬಾರಿ ಚಾರ್ಜ್‌ ಮಾಡಿದರೆ 500 ಕಿ.ಮೀ ಸಂಚಾರ ಸಾಧ್ಯ

    ಬೆಂಗಳೂರು: ಪ್ರವೇಗ್ ಡೈನಾಮಿಕ್ ಕಂಪನಿಯು ತನ್ನ ಬಹುನೀರಿಕ್ಷಿತ ಡಿಫೈ ಎಸ್​​ಯುವಿ ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಬೆಂಗಳೂರಿನ ಸ್ಟಾರ್ಟ್ಅಪ್ ಕಂಪನಿಯಾಗಿರುವ ಪ್ರವೇಗ್ ಡೈನಾಮಿಕ್ ಐಷಾರಾಮಿ ಮಾದರಿಯ ಎಸ್​ಯುವಿ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಕಾರಿನ ಎಕ್ಸ್ ಶೋರೂಂ ಬೆಲೆ 39.50 ಲಕ್ಷ ರೂ.

    ಎಲೆಕ್ಟ್ರಿಕ್ ಎಸ್​ಯುವಿ ಕಾರು ಸುಧಾರಿತ ವ್ಯವಸ್ಥೆಗಳನ್ನು ಹೊಂದಿದ್ದು, ಈ ಕಾರು 90.9kWh ಬ್ಯಾಟರಿ ಪ್ಯಾಕ್ ಹೊಂದಿದೆ. ಒಂದು ಬಾರಿ ಚಾರ್ಚ್​​ ಮಾಡಿದರೆ 500 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಚಾರ್ಜ್​ ಮಾಡಲು 7.22 ಕಿ.ವ್ಯಾ. ಚಾರ್ಜರ್ ನೀಡಲಿದ್ದು, 150 ಕಿ.ವ್ಯಾ. ಫಾಸ್ಟ್​ ಚಾರ್ಜಿಂಗ್ ವ್ಯವಸ್ಥೆಯಿದೆ. ಕೇವಲ 90 ನಿಮಿಷಯದಲ್ಲಿ ಫಾಸ್ಟ್​ ಚಾರ್ಜಿಂಗ್ ಆಗಲಿದೆ.

    ಮಾರುಕಟ್ಟೆಗೆ ಬಂದಿದೆ ಐಷಾರಾಮಿ ಎಲೆಕ್ಟ್ರಿಕ್ ಕಾರು; ಒಂದು ಬಾರಿ ಚಾರ್ಜ್‌ ಮಾಡಿದರೆ 500 ಕಿ.ಮೀ ಸಂಚಾರ ಸಾಧ್ಯ

    ಡಿಫೈ ಎಸ್​​ಯುವಿ ಎಲೆಕ್ಟ್ರಿಕ್ ಕಾರು ಗಂಟೆಗೆ 200 ಕಿ.ಮೀ ಟಾಪ್ ಸ್ಪೀಡ್​ನಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಕೇವಲ 5.4 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳಲಿದೆ. ವಿನ್ಯಾಸದಲ್ಲಿ ಇತರೆ ಎಲೆಕ್ಟ್ರಾಕ್ ಕಾರುಗಳಿಗಿಂತ ವಿಭಿನ್ನವಾಗಿದ್ದು, ಐಷಾರಾಮಿಯಾಗಿ ರೂಪುಗೊಂಡಿದೆ. ಸುರಕ್ಷತೆಯ ದೃಷ್ಠಿಯಿಂದ ಆರು ಏರ್​ಬ್ಯಾಗ್ ಹೊಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts