ಇಂದು ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಆರ್​ಟಿಒ ಚೆಕ್​ಪೋಸ್ಟ್​ಗಳ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು: ಇಂದು(ಶುಕ್ರವಾರ) ನಸುಕಿನಲ್ಲಿ ರಾಜ್ಯದ ವಿವಿಧೆಡೆ ಆರ್​ಟಿಒ ಚೆಕ್​ಪೋಸ್ಟ್​ಗಳ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ದಾಳಿಯಾಗಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿಯ ಆರ್​ಟಿಒ ಚೆಕ್‌ ಪೋಸ್ಟ್, ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಚಡಚಣ ತಾಲೂಕಿನ ಧೂಳಖೇಡ ಆರ್​ಟಿಒ ಚೆಕ್‌ ಪೋಸ್ಟ್, ಬಳ್ಳಾರಿ ತಾಲೂಕಿನ ಹಗರಿ ಚೆಕ್​ ಪೊಸ್ಟ್, ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದ ಚೆಕ್​ ಪೋಸ್ಟ್, ಬಳ್ಳಾರಿಯ ಆರ್​ಟಿಒ ವ್ಯಾಪ್ತಿಯ ಆಂಧ್ರ ಗಡಿಭಾಗದಲ್ಲಿರುವ ಹಗರಿ ನದಿ ಸೇತುವೆ ಬಳಿಯ ಚೆಕ್ ಪೋಸ್ಟ್, ಬೀದರ್ ಜಿಲ್ಲೆ ಹುಮನಾಬಾದ್ ಬಳಿ … Continue reading ಇಂದು ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಆರ್​ಟಿಒ ಚೆಕ್​ಪೋಸ್ಟ್​ಗಳ ಮೇಲೆ ಲೋಕಾಯುಕ್ತ ದಾಳಿ