ಶಂಕರಾಚಾರ್ಯರ ಕೃತಿಗಳ ಅಧ್ಯಯನಕ್ಕೆ ಜೀವಮಾನವೇ ಸಾಲದು

blank

ಚಿಕ್ಕಮಗಳೂರು: ಶ್ರೀ ಶಂಕರಾಚಾರ್ಯರು ತಮ್ಮ ೩೨ ವರ್ಷಗಳ ಜೀವಿತಾವಧಿಯಲ್ಲಿ ರಚಿಸಿದ ಕೃತಿಗಳನ್ನು ಸುಮ್ಮನೆ ಅಧ್ಯಯನ ಮಾಡುತ್ತೇವೆಂದರೂ ನಮ್ಮ ಇಡೀ ಜೀವಮಾನವೇ ಸಾಲದಾಗುತ್ತದೆ ಎಂದು ಗಾಯಕ ಮೈಸೂರಿನ ಎಂ.ಆರ್.ಶ್ರೀಹರ್ಷ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ರಾಹ್ಮಣ ಮಹಾಸಭಾ ಹಾಗೂ ಶೃಂಗೇರಿ ಶ್ರೀ ಶಂಕರಮಠದ ಆಶ್ರಯದಲ್ಲಿ ಭಾನುವಾರ ಸಂಜೆ ನಗರದ ಬ್ರಹ್ಮಸಮುದ್ರ ಶ್ರೀ ರಂಗಣನವರ ಕಲ್ಯಾಣ ಮಂಟಪದಲ್ಲಿ ಶ್ರೀ ಶಂಕರಾಚಾರ್ಯರ ಜಯಂತಿ ಹಾಗೂ ಶ್ರೀ ರಾಮಾನುಜಾಚಾರ್ಯರ ಜಯಂತಿ ಪ್ರಯುಕ್ತ ಆಯೋಜಿಸಿದ್ದ ತತ್ತ್ವಜ್ಞಾನಿಗಳ ದಿನಾಚರಣೆ ಮತ್ತು ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಅವರು ಭಕ್ತಿಗೀತೆಗಳ ಗಾಯನ ಪ್ರಸ್ತುತಪಡಿಸಿ ಮಾತನಾಡಿದರು.
ಶಂಕರಾಚಾರ್ಯರು ಭಗವಾನ್ ಸಾಕ್ಷಾತ್ ಶಂಕರನ ಅವತಾರವೇ ಆಗಿದ್ದಾರೆ. ೧೨೦೦-೧೩೦೦ಕ್ಕೂ ಹೆಚ್ಚು ವರ್ಷಗಳು ಕಳೆದರೂ ಅವರು ರಚಿಸಿರುವ ಶ್ಲೋಕಗಳು, ಸ್ತೋತ್ರಗಳು ಇಂದಿಗೂ ನಮ್ಮ ಬದುಕಿಗೆ ಪ್ರಸ್ತುತವಾಗಿವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಶ್ರೀ ಶಂಕರಾಚಾರ್ಯರ ಬಗ್ಗೆ ಉಪನ್ಯಾಸ ನೀಡಿದ ಹವ್ಯಕ ಮಾಸಪತ್ರಿಕೆ ಸಂಪಾದಕ ಸಂದೇಶ ತಲಕಾಲಕೊಪ್ಪ, ಶ್ರೀ ಶಂಕರಾಚಾರ್ಯರು ಆವಿರ್ಭಸಿದ ಕಾಲಘಟ್ಟದಲ್ಲಿ ಭಾರತ ಕತ್ತಲಲ್ಲಿತ್ತು. ಯಜ್ಞ-ಯಾಗಾದಿಗಳು, ಹೋಮ-ಹವನಾದಿಗಳನ್ನು ಅನುಸರಿಸುವುದು ತಪ್ಪು ಎಂದೇ ಬಿಂಬಿಸಲಾಗುತ್ತಿತ್ತು. ಆದರೆ ಶಂಕರಾಚಾರ್ಯರು ಜ್ಞಾನ ಭಾಸ್ಕರರಾಗಿ ಭಾರತದಲ್ಲಿ ಉದಯಿಸಿ ಬೆಳಗಿದ್ದಾರೆ. ತಮ್ಮ ಜೀವಿತಾವಧಿಯಲ್ಲಿ ದೇಶಾದ್ಯಂತ ಮಠ-ಮಂದಿರಗಳನ್ನು, ದೇವಾಲಯಗಳನ್ನು ಸ್ಥಾಪಿಸಿದರು. ಆ ಮೂಲಕ ಸನಾತನ ಭಾರತೀಯ ಸಂಸ್ಕೃತಿಗೆ ಶಕ್ತಿ ಕೇಂದ್ರಗಳನ್ನು ಒದಗಿಸಿದ್ದಾರೆ ಎಂದರು.
ಅಖAಡ ಭಾರತದ ಕಲ್ಪನೆ ಭಾರತೀಯರಿಗೆ ಇರಲಿಲ್ಲ. ಬ್ರಿಟಿಷರ ಆಳ್ವಿಕೆ ಬಂದ ನಂತರ ಆ ಕಲ್ಪನೆ ಬಂತು ಎನ್ನುವ ಮಾತಿದೆ. ಆದರೆ ಶ್ರೀಶಂಕರಾಚಾರ್ಯರ ಪಂಚಾಯತನ ಪೂಜಾ ಹಾಗೂ ಅವರ ಪರ್ಯಟನೆಯನ್ನು ಗಮನಿಸಿದರೆ ಅಖಂಡ ಭಾರತದ ಪರಿಕಲ್ಪನೆ ಇರುವುದು ಸ್ಪಷ್ಟವಾಗುತ್ತದೆ. ಅವರು ಜನಬಲ, ಬಾಹುಬಲ, ಧನಬಲ, ರಾಜಾಶ್ರಯ ಇಲ್ಲದೆ ಅಂತಃಶಕ್ತಿಯಿAದ ಸನಾತನ ಧರ್ಮವನ್ನು ಪುನರ್ ಪ್ರತಿಷ್ಠಾಪಿಸಿದರು. ಭಾರತವನ್ನು ಮೂರು ಬಾರಿ ಪರಿಕ್ರಮಿಸಿ, ಆ ಮೂಲಕ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ದೇಶವನ್ನು ಒಗ್ಗೂಡಿಸಿದ್ದಾರೆ ಎಂದರು.
ಶ್ರೀ ರಾಮಾನುಜಾಚಾರ್ಯರ ಬಗ್ಗೆ ಉಪನ್ಯಾಸ ನೀಡಿದ ಹಿರೇಮಗಳೂರು ಶ್ರೀ ಕೋದಂಡರಾಮಚAದ್ರ ಸ್ವಾಮಿ ದೇವಾಲಯದ ಅರ್ಚಕ ಹಾಗೂ ವಾಗ್ಮಿ ವೈಷ್ಣವಸಿಂಹ, ವಿಶಿಷ್ಟಾದ್ವೆÊತ, ಅದ್ವೆÊತ, ದ್ವೆÊತ ಸಿದ್ಧಾಂತಗಳು ತಾತ್ವಿಕತೆಯ ವಿಚಾರಗಳು. ಆದರೆ ನಾವ್ಯಾರೂ ಆ ತಾತ್ವಿಕ ಸಂಗತಿಗಳ ಮಟ್ಟದಲ್ಲಿ ವೈಮನಸ್ಸನ್ನು ಇಟ್ಟುಕೊಂಡಿಲ್ಲ. ಆದರೆ ನಾವು ಆಚರಣೆಯ ಮಟ್ಟದಲ್ಲಿ ವೈಮನಸ್ಸನ್ನು ಇಟ್ಟುಕೊಂಡಿz್ದೆÃವೆ. ಇದು ವಿಪರ್ಯಾಸ ಎಂದು ಹೇಳಿದರು.
ನಾವು ಭಾರತೀಯರಾಗಿ, ಸನಾತನಿಗಳಾಗಿ ಆಚರಣೆಯ ನೆಪದಲ್ಲಿ ವೇದ ಪರಂಪರೆಯನ್ನು ಮರೆತು ಕೂರುವುದು ಸರಿಯಲ್ಲ. ನಮ್ಮ ವೇದ ಸಂರಕ್ಷಣೆಯ ಕಡೆಗೆ ಗಮನ ಹರಿಸಬೇಕು. ಎಲ್ಲ ವ್ಯವಹಾರದಲ್ಲೂ ನಾವು ಭಾರತೀಯತೆಯನ್ನು ಕಾಪಾಡಿಕೊಳ್ಳಬೇಕು. ಇಂದು ಕಾಲದ ಪ್ರವಾಹದಲ್ಲಿ ನಾಸ್ತಿಕ್ಯ ಬಹುಬೇಗ ಆಕರ್ಷಿಸುತ್ತದೆ. ನಾವು ಅವುಗಳನ್ನೆಲ್ಲ ದೂರ ಮಾಡಿ ವೈದಿಕ ಮಾರ್ಗದ ಕಡೆಗೆ ಹೋಗಬೇಕು ಎಂದು ಸಲಹೆ ನೀಡಿದರು.
ಸಮಾಜದ ಉದ್ಧಾರ ಕಾರ್ಯ ಕೈಗೊಂಡಿರುವುದನ್ನು ನಾವು ಶ್ರೀ ಶಂಕರಾಚಾರ್ಯರಲ್ಲಿ, ಶ್ರೀ ರಾಮಾನುಜಾಚಾರ್ಯರಲ್ಲಿ ಕಾಣುತ್ತೇವೆ ಎಂದು ಹೇಳಿದರು.
ಬಿ.ಎಂ.ಎಸ್. ಸಂಘಟನಾ ಕಾರ್ಯದರ್ಶಿ ಜಿ.ಎಂ.ಸತ್ಯನಾರಾಯಣಸ್ವಾಮಿ ನೇತೃತ್ವದಲ್ಲಿ ಏರ್ಪಡಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ವಿತರಿಸಲಾಯಿತು. ಬಾಲಶಂಕರರಾಗಿ ಮೆರವಣಿಗೆಯಲ್ಲಿ ಗಮನ ಸೆಳೆದ ಸಮರ್ಥ, ಶ್ರೀಹಾನ್, ಪೃಥ್ವಿ ಹಾಗೂ ಪ್ರಣಮ್ಯ ಇವರಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಪಿ.ಮಂಜುನಾಥ ಜೋಷಿ ವಹಿಸಿದ್ದರು. ದಾನಿಗಳಾದ ರಾಮಚಂದ್ರ ಹಾಸ್ಯಗಾರ್, ಯೋಗಶಿಕ್ಷಕ ದಿವಾಕರಭಟ್, ದಾಸ ಸಾಹಿತ್ಯ ಪ್ರಚಾರಕ ಉದಯಸಿಂಹ, ಸಮಾಜ ಸೇವಕ ಹಿರೇಮಗಳೂರು ಪುಟ್ಟಸ್ವಾಮಿ, ಬ್ರಾಹ್ಮಣ ಮಹಾಸಭಾದ ಖಜಾಂಚಿ ಶ್ಯಾಮಲಾ ಎಂ.ರಾವ್ ಉಪಸ್ಥಿತರಿದ್ದರು.

Share This Article

ಕೂಡಲೇ ಇವುಗಳನ್ನು ತಿನ್ನುವುದನ್ನು ನಿಲ್ಲಿಸದಿದ್ರೆ ನಿಮ್ಮ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗೋದು ಗ್ಯಾರಂಟಿ! Sperm Count

Sperm Count : ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದು…

ಕ್ಯಾರೆಟ್​ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ | Recipe

ಕ್ಯಾರೆಟ್​​ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ…

ಆರೋಗ್ಯಕರ ಹೃದಯಕ್ಕೆ ಮೊಟ್ಟೆ ಎಷ್ಟು ಸಹಕಾರಿ ಗೊತ್ತಾ?; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ,…