ಸಿನಿಮಾ

ಮತದಾರರಿಂದ ಬಿಜೆಪಿಗೆ ತಕ್ಕಪಾಠ

ಮುದ್ದೇಬಿಹಾಳ: ರಾಜ್ಯದಲ್ಲಿ ಬಿಜೆಪಿ ದುರಾಡಳಿತಕ್ಕೆ ಜನತೆ ತಕ್ಕಪಾಠ ಕಲಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ಅಸ್ಕಿ ಫೌಂಡೇಷನ್ ಅಧ್ಯಕ್ಷ ಸಿ.ಬಿ. ಅಸ್ಕಿ ಹೇಳಿದರು.

ಜಿಲ್ಲೆಯಲ್ಲಿ ಆರು ಜನ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾದ ಹಿನ್ನೆಲೆಯಲ್ಲಿ ತಮ್ಮ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಭ್ರಷ್ಟಾಚಾರ, ಏಕಪಕ್ಷೀಯ ಆಡಳಿತಕ್ಕೆ ಮತದಾರರು ತಕ್ಕಪಾಠ ಕಲಿಸಿದ್ದಾರೆ. ನೂತನವಾಗಿ ಆಯ್ಕೆಯಾದ ಶಾಸಕರು ಉತ್ತಮ ಅಭಿವೃದ್ಧಿ ಕೆಲಸ ಮಾಡಲಿ ಎಂದರು. ಪರಸ್ಪರ ಗುಲಾಲು ಹಾಕಿಕೊಂಡು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಟಿಎಪಿಸಿಎಂಎಸ್ ಉಪಾಧ್ಯಕ್ಷ ಗುರಣ್ಣ ಹತ್ತೂರ, ಗ್ರಾಪಂ ಸದಸ್ಯ ಅಶೋಕ ಕೆಂಭಾವಿ, ಮಹ್ಮದ ವಾಲೀಕಾರ, ಮಾಜಿ ಉಪಾಧ್ಯಕ್ಷ ರಹೀಂಸಾಬ ಅವಟಿ, ಅಸ್ಕಿ ಫೌಂಡೇಷನ್ ಉಪಾಧ್ಯಕ್ಷ ವೀರೇಶಗೌಡ ಅಸ್ಕಿ, ಮುಖಂಡ ಯಲ್ಲಪ್ಪ ಮಾದರ, ತಾಪಂ ಮಾಜಿ ಸದಸ್ಯ ದ್ಯಾಮಣ್ಣ ಸೋಮನಾಳ, ಕುಮಾರ ಐನಾಪುರ, ಪ್ರಶಾಂತ ಜಲಪುರ, ಮಹೇಶ ತಳವಾರ, ಬಸವರಾಜ ಕಣ್ಣಗುಡ್ಡಿ ಇದ್ದರು.

Latest Posts

ಲೈಫ್‌ಸ್ಟೈಲ್