ಕುಣಿಗಲ್: ಸಖತ್ ವೈರಲ್ ಆಗ್ತಿದೆ ಇವರಿಬ್ಬರ ಮದ್ವೆ ಫೋಟೋ. ‘ಆಧುನಿಕ ಜಗತ್ತಿನ ಅದೃಷ್ಟವಂತ ನೀನೇ ಇರಬೇಕು ಕಣಪ್ಪಾ!’ ಎಂದು ಬಹುತೇಕ ಗಂಡೈಕ್ಳು ಹೊಟ್ಟೆ ಉರ್ಕೊಂಡು ಕಮೆಂಟ್ಸ್ ಮಾಡ್ತಿದ್ದಾರೆ. ‘ಕೆಲವರು ಒಲವಿನ ಬದುಕಿಗೆ ಪ್ರೀತಿಯೊಂದಿದ್ದರೆ ಸಾಕು ಬೇರೇನೂ ಬೇಡ… ಶುಭವಾಗಲಿ’ ಎಂದು ಶುಭ ಕೋರಿದ್ದಾರೆ.
ವಯಸ್ಸಿನಲ್ಲಿ ತನಗಿಂತ 20 ವರ್ಷ ದೊಡ್ಡವನ ಜತೆ ಯುವತಿಯೇ ಇಷ್ಟಪಟ್ಟು ಸರಳವಾಗಿ ಮದುವೆ ಆಗಿದ್ದಾಳೆ. ಆ ಯುವತಿ ಹೆಸರು ಮೇಘನಾ. 25 ವರ್ಷ ವಯಸ್ಸಿನ ಮೇಘನಾ, ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಸಂತೆಮಾವತ್ತೂರು ಗ್ರಾಮದವರು. ಇದೇ ತಾಲೂಕಿನ ಚೌಡನಕುಪ್ಪೆ ಗ್ರಾಮ ಸಮೀಪದ ಅಕ್ಕಿಮರಿಪಾಳ್ಯದ ಶಂಕರಣ್ಣ ಎಂಬುವರರನ್ನು ಇತ್ತೀಚಿಗೆ ಮದುವೆ ಆಗಿದ್ದಾರೆ. 45 ವರ್ಷ ವಯಸ್ಸಾದರೂ ಶಂಕರಣ್ಣಗೆ ಮದುವೆ ಆಗಿರಲಿಲ್ಲ. ಅವರ ಬಳಿ ಮೇಘನಾ ಹೋಗಿ ತನ್ನನ್ನು ಮದುವೆ ಆಗುವಂತೆ ಪ್ರಸ್ತಾಪ ಇಟ್ಟಿದ್ದರಂತೆ. ಇದಕ್ಕೆ ಒಪ್ಪಿದ ಶಂಕರಣ್ಣ ಸಮೀಪದ ದೇವಾಲಯದ ಬಳಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗಿದ್ದು, ಟ್ರೋಲಿಗರಿಂದ ಟ್ರೋಲ್ ಆಗುತ್ತಿವೆ. ಅಷ್ಟಕ್ಕೂ ಈ ಯುವತಿ ಶಂಕ್ರಣ್ಣನನ್ನು ಮದುವೆ ಆಗಿದ್ದು ಏಕೆ ಗೊತ್ತಾ?
ಮೇಘನಾಗೆ ಈಗಾಗಲೇ ಬೇರೊಬ್ಬನ ಜತೆ ಮೊದಲ ಮದುವೆ ಆಗಿತ್ತಂತೆ. ಆದರೆ, ಕಳೆದ 2 ವರ್ಷದಿಂದ ಪತಿ ಕಾಣೆಯಾಗಿದ್ದು, ಪತ್ನಿಯನ್ನು ನೋಡಲೂ ಬಂದಿರಲಿಲ್ಲವಂತೆ. ಇದೇ ಕಾರಣಕ್ಕೆ ಬೇಸತ್ತ ಮೇಘನಾ, ಶಂಕರಣ್ಣನನ್ನು ಮದುವೆ ಆಗಿದ್ದಾಳೆ ಎನ್ನಲಾಗಿದೆ.
ಆತ ಸಲಿಂಗಕಾಮಿ, ಅವನ ಜತೆ ಸಮಂತಾ ಸಂಬಂಧ ಬೆಳೆಸಲು ಸಾಧ್ಯವಿಲ್ಲ: ನಟಿ ಶ್ರೀರೆಡ್ಡಿ ಸ್ಫೋಟಕ ಹೇಳಿಕೆ
ವೇದಿಕೆಯಲ್ಲಿ ನಿಂತಿದ್ದ ವಧು-ವರರಿಗೆ ಪೆಟ್ರೋಲ್ ಕೊಟ್ಟ ಸ್ನೇಹಿತರು! ಅರೆಕ್ಷಣ ಶಾಕ್
ಲವ್-ಸೆಕ್ಸ್ ದೋಖಾ: ಎಎಸ್ಐ ಸೇರಿ 8 ಮಂದಿ ವಿರುದ್ಧ ಎಫ್ಐಆರ್! ಯುವತಿ ಸತ್ತ 11 ದಿನಕ್ಕೆ ಸಿಕ್ತು ಡೆತ್ನೋಟ್
ಪರಸ್ತ್ರೀ ಜತೆ ಗ್ರಾಪಂ ಅಧ್ಯಕ್ಷೆ ಗಂಡನ ಕಾಮದಾಟ! ವಾಟ್ಸ್ಆ್ಯಪ್ ಗ್ರೂಪ್ಗೆ ತನ್ನದೇ ಫೋಟೋ ತಾನೇ ಹಾಕಿಕೊಂಡ…