ಬೆಳಗಾವಿಯಲ್ಲಿ ಚಾಲಾಕಿ ಚಿರತೆ ಸೆರೆಗೆ ಹನಿಟ್ರ್ಯಾಪ್​! 9 ಕಡೆ ಹೆಣ್ಣು ಚಿರತೆಯ ಮೂತ್ರ ಸಿಂಪಡಣೆ

ಬೆಳಗಾವಿ: ಇಪ್ಪತ್ತು ದಿನಗಳಿಂದ ಬೆಳಗಾವಿ ಜನರ ನಿದ್ದೆಗೆಡಿಸಿರುವ ಚಿರತೆ ಸೆರೆಗೆ ‘ಹನಿಟ್ರ್ಯಾಪ್​’ ಅಸ್ತ್ರ ಬಳಸಲು ಅರಣ್ಯ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಅದಕ್ಕಾಗಿ 9 ಬೋನ್​ಗಳನ್ನು ಇಟ್ಟು ಅದಕ್ಕೆ ಹೆಣ್ಣು ಚಿರತೆಗಳ ಮೂತ್ರವನ್ನು ಸಿಂಪಡಿಸಲಾಗಿದೆ! 2 ಆನೆ, 180 ಅರಣ್ಯ ಸಿಬ್ಬಂದಿ, 8 ಶಾರ್ಪ್ ಶೂಟರ್​ಗಳನ್ನೊಳಗೊಂಡು ಬೃಹತ್ ಕಾರ್ಯಾಚರಣೆ ನಡೆಸಿದರೂ ಚಾಲಾಕಿ ಚಿರತೆ ಬಲೆಗೆ ಬೀಳುತ್ತಿಲ್ಲ. ಹೇಗಾದರೂ ಮಾಡಿ ಚಿರತೆಯನ್ನು ಸೆರೆ ಹಿಡಿಯಲೇಬೇಕು ಎಂದು ಪಣತೊಟ್ಟಿರುವ ಅರಣ್ಯ ಇಲಾಖೆಯ ಪ್ರಯತ್ನ ವಿಫಲವಾಗುತ್ತಲೇ ಇದೆ. ದಿನವೂ ಒಂದಿಲ್ಲೊಂದು ಹರಸಾಹಸ ನಡೆಸಿದ್ದ … Continue reading ಬೆಳಗಾವಿಯಲ್ಲಿ ಚಾಲಾಕಿ ಚಿರತೆ ಸೆರೆಗೆ ಹನಿಟ್ರ್ಯಾಪ್​! 9 ಕಡೆ ಹೆಣ್ಣು ಚಿರತೆಯ ಮೂತ್ರ ಸಿಂಪಡಣೆ