ಪತ್ರಿಕಾ ಕ್ಷೇತ್ರದಲ್ಲಿ ಮರೆಯಾದ ಅಧ್ಯಯನ

blank

ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್​ ಬೇಸರ

ಕೋಲಾರ: ಇತ್ತೀಚೆಗೆ ಪತ್ರಿಕಾ ಕ್ಷೇತ್ರದಲ್ಲಿ ಅಧ್ಯಯನ ಎಂಬುವುದು ಮರೆಯಾಗಿದೆ. ಆದರೆ, ಅಧ್ಯಯನಶೀಲತೆ ಮತ್ತು ಜ್ಞಾನ ಮಾತ್ರ ಒಬ್ಬ ಉತ್ತಮ ಪತ್ರಕರ್ತನನ್ನು ರೂಪಿಸಬಲ್ಲದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್​ ಅಭಿಪ್ರಾಯಪಟ್ಟರು.


ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾನುವಾರ ದಿ.ಜಿ.ನಾರಾಯಣಸ್ವಾಮಿ ಅವರ ಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ “ಹಿರಿಯರ ಸ್ಮರಣೆ ಮತ್ತು ಗ್ರಂಥಗಳ ಹಸ್ತಾಂತರ’ ಸಮಾರಂಭದಲ್ಲಿ ಮಾತನಾಡಿದರು.
ಪತ್ರಿಕಾ ಕ್ಷೇತ್ರದಲ್ಲಿ ಅಧ್ಯಯನಶೀಲತೆ ಎಂಬುದು ಇಲ್ಲವಾಗಿದ್ದು, ಆಧುನಿಕ ತಂತ್ರಜ್ಞಾನದ ವಾಟ್ಸ್​ಆ್ಯಪ್​ ಯೂನಿವರ್ಸಿಟಿ ಪದವೀಧರರೇ ಹೆಚ್ಚಾಗಿದ್ದು, ಕಾಪಿ-ಪೇಸ್ಟ್​ ಸುದ್ದಿಗಳೇ ಹೆಚ್ಚಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.


ಪತ್ರಿಕೋದ್ಯಮದಲ್ಲಿ ಅಧ್ಯಯನ ಮತ್ತು ಸಂಸ್ಕಾರ ಎಂಬುದು ದಾರಿದೀಪಗಳಾಗಿವೆ. ಪತ್ರಕರ್ತರು ಯಾವುದೇ ಪ್ರಶ್ನೆಗೂ ಮುನ್ನ ಆ ವಿಷಯದ ಬಗ್ಗೆ ಮಾಹಿತಿ ಹೊಂದಿರಬೇಕು ಎಂದ ಅವರು, ಪ್ರಾಮಾಣಿಕತೆ, ನೈತಿಕತೆ ಹೊಂದಿದವರು ನೇರ ಮತ್ತು ನಿಷ್ಠುರವಾದಿಗಳಾಗಿದ್ದು, ದಿಟ್ಟತನದಿಂದ ಯಾರಿಗೂ ಹೆದರದೆ ಯಾವುದೇ ಮುಲಾಜಿಲ್ಲದೆ ಪ್ರಶ್ನಿಸುತ್ತಾರೆ ಎಂಬುವುದಕ್ಕೆ ಮಾರ್ಗದರ್ಶಕರಾಗಿದ್ದ ದಿ.ಜಿ.ನಾರಾಯಣಸ್ವಾಮಿ ಹಾಗೂ ದಿ.ಕೆ.ಕೃಷ್ಣಸ್ವಾಮಿ ಅವರೇ ಸಾ ಎಂದರು.


ನಿವೃತ್ತ ಹಿರಿಯ ಸಹಾಯಕ ನಿರ್ದೇಶಕ ಎನ್​.ಜಗನ್ನಾಥ್​ ಪ್ರಕಾಶ್​ ಮಾತನಾಡಿ, ಜಿ.ನಾರಾಯಣಸ್ವಾಮಿ ಅವರು ಸ್ವಾತಂತ್ರ$್ಯ ಹೋರಾಟಗಾರ ಕೆ.ಪಟ್ಟಾಭಿರಾಮನ್​ ಅವರೊಂದಿಗೆ ಹೆಚ್ಚಿನ ಒಡನಾಟ ಹೊಂದಿದ್ದರು. ನೇರ, ನಿಷ್ಠುರವಾದಿಗಳಾಗಿದ್ದರು. ಅವರಲ್ಲಿ ಸ್ವಾರ್ಥತೆ ಎಂಬುವುದು ಇರಲಿಲ್ಲ ಎಂಬುವುದಕ್ಕೆ ಕುಟುಂಬಕ್ಕಾಗಲಿ, ಮಕ್ಕಳಿಗಾಗಲಿ ವೃತ್ತಿಯನ್ನು ದುರ್ಬಳಸಿಕೊಂಡಿಲ್ಲ ಎನ್ನುವುದೇ ನಿದರ್ಶನ ಎಂದರು.


ಜಿಲ್ಲೆ ಪ್ರಗತಿ, ಅಭಿವೃದ್ಧಿಗಾಗಿ ಸರ್ಕಾರದೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ ಸಂವಾದ ನಡೆಸುತ್ತಿದ್ದರು. ಯಾವುದೇ ಅಧಿಕಾರಿ ಶಿಷ್ಟಾಚಾರ ಮೀರಿ ವರ್ತಿಸಿದರೆ ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಇಂದಿನ ಬಿಇಎಂಎಲ್​ ಕಾರ್ಖಾನೆ ಜಿಲ್ಲೆಯಲ್ಲಿ ಸ್ಥಾಪನೆಯಾಗಲು ತಂದೆಯವರು ಬರೆದ ಸುದ್ದಿಗಳು ದೆಹಲಿಯಲ್ಲಿ ಪ್ರತಿಧ್ವನಿಸಿದ ಹಿನ್ನೆಲೆಯಲ್ಲಿ ಕೆಜಿಎಫ್​ನಲ್ಲಿ ಬೆಮಲ್​ ಸ್ಥಾಪನೆಗೆ ಕಾರಣವಾಯಿತು ಎಂದು ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್​ ಮಾತನಾಡಿ, ಇಂದು ನಾವೆಲ್ಲರೂ ಪತ್ರಕರ್ತರ ಸಂಘದ ಕಟ್ಟಡದಲ್ಲಿರಲು ದಿ.ಜಿ.ನಾರಾಯಣಸ್ವಾಮಿ, ಕೆ.ಆರ್​.ಕೃಷ್ಣಸ್ವಾಮಿಯೇ ಕಾರಣ. ಅಂದಿನ ಪುರಸಭೆ ಅಧ್ಯಕ್ಷ ಸಾ.ಮಾ.ರಂಗಪ್ಪಗೆ ಪತ್ರಕರ್ತರ ಸಂಘಕ್ಕೆ ನಿವೇಶನ ಮಂಜೂರಾತಿ ಮಾಡಲು ತಿಳಿಸಿದ ಹಿನ್ನೆಲೆಯಲ್ಲಿ ನಮಗೆ ನಿವೇಶನ ಮಂಜೂರಾಯಿತು. ಕಿರಿಯ ಪತ್ರಕರ್ತರನ್ನು ತಿದ್ದಿ, ತೀಡಿ, ಆತ್ಮೀಯತೆಯತೆ ರೂಪುಗೊಳಿಸುತ್ತಿದ್ದರು. ಅವರು ತಮ್ಮ ವೃತ್ತಿಯಲ್ಲಿ ಸಾಮಾಜಿಕ ಜವಾಬ್ದಾರಿ ಹೊತ್ತು ವರದಿ ಮಾಡುತ್ತಿದ್ದರು. ಅವರು ಮನೆಯಲ್ಲಿ ಪುಸ್ತಕದ ಬಂಡಾವರನ್ನೆ ಇಟ್ಟಿದ್ದರು ಎಂದು ಸ್ಮರಿಸಿದರು.


ಜಿಲ್ಲಾ ಕಲ್ಯಾಣ ನಿಧಿಗೆ 5 ಲಕ್ಷ ನೀಡಲಿ: ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್​ ಅವರು ಕಳೆದ ಸಭೆಯಲ್ಲಿ ತಿಳಿಸಿದಂತೆ ರಾಜ್ಯದ 5,500 ಗ್ರಾಮೀಣ ಪತ್ರಕರ್ತರಿಗೆ ಬಸ್​ಪಾಸ್​ ವ್ಯವಸ್ಥೆ ಕಲ್ಪಿಸಿದ್ದಾರೆ. ಪತ್ರಕರ್ತರಿಗೆ ಪಿಂಚಣಿ ಸೌಲಭ್ಯ, ಜಾಹೀರಾತುಗಳ ಬಾಕಿ ಬಿಲ್​ ಬಿಡುಗಡೆ ಸೇರಿ ಪತ್ರಕರ್ತರಿಗೆ ಸೌಲಭ್ಯ ಒದಗಿಸಿಕೊಡಬೇಕು. ಕೋಲಾರ ಗಡಿ ಜಿಲ್ಲೆಯಾಗಿದ್ದು, ವಿಶೇಷವಾಗಿ ಮಾಸಿಕ ಕನಿಷ್ಠ ಒಂದು ಜಾಹೀರಾತು ನೀಡುವಂತಾಗಬೇಕು. ಜಿಲ್ಲಾ ಪತ್ರಕರ್ತರ ಸಂಘದ ಕಲ್ಯಾಣ ನಿಧಿಗೆ 25 ಲಕ್ಷ ರೂ. ಮಂಜೂರು ಮಾಡಿಸಬೇಕು ಎಂದು ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮನವಿ ಮಾಡಿದರು.
ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯ ಕೆ.ಎಸ್​.ಗಣೇಶ್​, ವಾರ್ತಾಧಿಕಾರಿ ಚೇತನ್​ಕುಮಾರ್​, ಚಿಂತಕ ಜಯಸಿಂಹ, ಎಚ್​.ಎ.ಪುರುಷೋತ್ತಮ್​, ಜಿ.ನಾರಾಯಣಸ್ವಾಮಿ, ಕೆ.ವಿ.ಸುರೇಶ್​ಕುಮಾರ್​, ಸಂಘದ ಪ್ರಧಾನ ಕಾರ್ಯದರ್ಶಿ ಎಸ್​.ಕೆ.ಚಂದ್ರಶೇಖರ್​ ಇದ್ದರು.

Share This Article

ಈ 3 ನಕ್ಷತ್ರದವರು ಕೋಟೇಶ್ವರ ಯೋಗದೊಂದಿಗೆ ಹುಟ್ತಾರೆ! ಇವರನ್ನು ಅರಸಿ ಬರುತ್ತೆ ಅಪಾರ ಸಂಪತ್ತು | Birth of Stars

Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…

ನಿಮ್ಮ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದರರ್ಥ ಏನು ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಸಂಗತಿ | Snakes in a Dream

Snakes in a Dream : ಯಾವುದೇ ವ್ಯಕ್ತಿ ನಿದ್ರೆಗೆ ಜಾರಿದಾಗ ಸಹಜವಾಗಿ ಎದುರಾಗುವ ಸಂಗತಿಯೆಂದರೆ,…

ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಈ ಕೂಡಲೇ ಹೊರಗೆ ಎಸೆಯಿರಿ… ಇಲ್ಲದಿದ್ರೆ ಅಪಾಯ ತಪ್ಪಿದ್ದಲ್ಲ! Household items

Household items : ಎಂದಾದರೂ ಮನೆಯನ್ನು ವಿಷಪೂರಿತಗೊಳಿಸುವ ವಸ್ತುಗಳು ಬಗ್ಗೆ ನೀವು ಯೋಚನೆ ಮಾಡಿದ್ದೀರಾ? ಮಾರುಕಟ್ಟೆಯಲ್ಲಿ…