ಶಿಗ್ಗಾಂವಿ: ಪಟ್ಟಣದ ಶ್ರೀ ಮೈಲಾರಲಿಂಗೇಶ್ವರ ನೂತನ ಶಿಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಹಾಗೂ ನೂತನ ದೇವಸ್ಥಾನದ ಲೋಕಾರ್ಪಣೆ ಅಂಗವಾಗಿ ಶ್ರೀ ಮೈಲಾರಲಿಂಗೇಶ್ವರ, ಗಂಗಮಾಳವ್ವದೇವಿ, ಗಣಪತಿ, ಭೂಲಿಂಗೇಶ್ವರ, ನಾಗಲಿಂಗೇಶ್ವರ, ತುಪ್ಪದ ಮಾಳವ್ವ, ಹೆಗ್ಗಪ್ಪಸ್ವಾಮಿ, ಆಂಜನೇಯ ಸ್ವಾಮಿ ಹಾಗೂ ನವಗ್ರಹ ಮೂರ್ತಿಗಳ ಪುರಪ್ರವೇಶ ಶುಕ್ರವಾರ ಅದ್ದೂರಿಯಾಗಿ ಜರುಗಿತು. ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕುಂಭ ಮೆರವಣಿಗೆ, ಡೊಳ್ಳು, ಭಜನೆ ಸೇರಿ ಸಕಲ ವಾದ್ಯಗಳೊಂದಿಗೆ ಜರುಗಿದ ಮೆರವಣಿಗೆಗೆ ವಿರಕ್ತಮಠದ ಸಂಗನಬಸವ ಮಹಾಸ್ವಾಮೀಜಿ ಚಾಲನೆ ನೀಡಿದರು.
ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಚೇತನ ಸ್ವಾಮಿ ಸೇರಿ ಸಮಿತಿ ಅಧ್ಯಕ್ಷ ಸುಭಾಸ ಚವ್ಹಾಣ, ರಮೇಶ ವನಹಳ್ಳಿ, ಸಂಗಪ್ಪ ಕಂಕನವಾಡ, ಲಿಂಗರಾಜ ಗಾಣಿಗೇರ, ಮಂಜುನಾಥ ಕಟ್ಟಿಮನಿ, ನಿಂಗಪ್ಪ ಇಂಗಳಗಿ, ನಿಂಗಪ್ಪ ಯಲಿಗಾರ, ಮಂಜುನಾಥ ಬ್ಯಾಹಟ್ಟಿ, ಮಾಲತೇಶ ಕಂಕನವಾಡ, ನಿಂಗಪ್ಪ ಯಲವಗಿ, ಮಲ್ಲೇಶಪ್ಪ ಅತ್ತಿಗೇರಿ, ಸೋಮಣ್ಣ ಮತ್ತೂರ, ತಿರಕಪ್ಪ ಅಂದಲಗಿ, ಭರತೇಶ ಬಳಿಗಾರ, ಸುರೇಶ ಯಲಿಗಾರ ಹಾಗೂ ಗದಿಗೆಪ್ಪ ಕೊಡ್ಲಿವಾಡ, ಚನ್ನಪ್ಪ ಯಲಿಗಾರ, ಫಕೀರಪ್ಪ ಕುಂದೂರ ಸೇರಿ ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.