ಮೂಡಿಗೆರೆ: ಮೈಸೂರು ಮುಡಾ ಹಗರಣದ ಹಿನ್ನಲೆಯಲ್ಲಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಮೂಡಿಗೆರೆಯಲ್ಲಿ ಪ್ರತಿಭಟನೆ ನಡೆಸಿದರು.
ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಹಗರಣಗಳಲ್ಲಿ ಮುಳುಗಿದೆ. ತುಳಿತಕ್ಕೊಳಗಾದ ಸಮಾಜದ ಅಭಿವೃದ್ಧಿಗೆ ಇದ್ದ 24 ಸಾವಿರ ಕೋಟಿ ರೂ. ಗ್ಯಾರಂಟಿ ಯೋಜನೆ ಬಳಸಿ ಕೊಂಡು ಪ.ಜಾತಿ, ಪಂಗಡದವರಿಗೆ ಮೋಸ ಮಾಡಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಎಲ್ಲ ಭ್ರಷ್ಟಾಚಾರ ಈಗ ಹೊರ ಜಗತ್ತಿಗೆ ತಿಳಿದಿದೆ ಎಂದು ದೂರಿದರು.
ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮಾತನಾಡಿ, ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡುತ್ತಿರುವುದು ಸಂವಿಧಾನ ವಿರೋಧಿ ಬೆಳವಣಿಗೆಯಾಗಿದೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ ಕೆಲವೇ ದಿನದಲ್ಲಿ ಪತನವಾಗಲಿದೆ ಎಂದರು.
ದೀಪಕ್ ದೊಡ್ಡಯ್ಯ, ಜೆ.ಎಸ್.ರಘು, ಟಿ.ಎಂ.ಗಜೇಂದ್ರ, ಬಿ.ಎನ್.ಜಯಂತ್, ಡಿ.ಎಸ್.ಸುರೇಂದ್ರ, ಧನಿಕ್, ಪ್ರಶಾಂತ್, ಪಿ.ಜಿ.ಅನುಕುಮಾರ್, ಕಮಲಾಕ್ಷಮ್ಮ, ಗೌರಮ್ಮ, ನಯನ ತಳವಾರ, ಪರಿಕ್ಷಿತ್ ಜಾವಳಿ, ಸಂದೀಪ್, ಸಚಿನ್, ರವಿ ಒಡೆಯರ್, ತಾರೇಶ್, ವಿನಯ್ ಹಳೆಕೋಟೆ ಇತರರಿದ್ದರು.
