ಚಿಕ್ಕಮಗಳೂರು: ಕಳ್ಳರ ಕಾಟದಿಂದ ರಕ್ಷಣೆ ಪಡೆಯಲು ದೇವರ ಮೊರೆ ಹೋಗುವುದು ಸಾಮಾನ್ಯ. ಆದರೆ ಕಿಡಿಗೇಡಿಗಳು ಅರಣ್ಯಕ್ಕೆ ಕೊಳ್ಳಿ ಇಡುವುದನ್ನು ತಪ್ಪಿಸಲು ಇಲ್ಲಿನ ಗ್ರಾಮಸ್ಥರು ದೇವರಿಗೆ ಹರಕೆ ಹೊತ್ತಿದ್ದಾರೆ!
ಬೇಸಿಗೆಯಲ್ಲಿ ಕಾಡ್ಗಿಚ್ಚಿನಿಂದ ಅರಣ್ಯ ರಕ್ಷಣೆಗೆ ಹರಸಾಹಸ ಪಡುತ್ತಿದ್ದ ಸಿಂದಿಗೆರೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇಂಥದ್ದೊಂದು ಹರಕೆ ಕಟ್ಟಿದ್ದಾರೆ. ಸಿಂದಿಗೆರೆ ಬಯಲುಸೀಮೆ ಸಾಲಿನಲ್ಲಿದೆ. ಗ್ರಾಮದ ಅಕ್ಕಪಕ್ಕ ಕುರುಚಲು ಗಿಡಗಳುಳ್ಳ ಗುಡ್ಡಗಳಿವೆ. ಬೇಸಿಗೆಯಲ್ಲಿ ಅರಣ್ಯಕ್ಕೆ ಬೆಂಕಿ ಹೊತ್ತಿಕೊಳ್ಳುತ್ತದೆ. ಕಿಡಿಗೇಡಿಗಳೇ ಕಾಡಿಗೆ ಕಿಚ್ಚು ಇಡುತ್ತಾರೆ ಎಂಬುದು ಗ್ರಾಮಸ್ಥರ ಆರೋಪ. ಪ್ರತಿ ವರ್ಷ ಬೆಂಕಿಯಿಂದ ಕಾಡು ಉರಿಯುವುದನ್ನು ತಪ್ಪಿಸಲಾಗದೆ ಹತಾಶರಾಗಿದ್ದ ಜನರ ಮನಸ್ಸಿಗೆ ಹೊಳೆದ ಉಪಾಯ ದೇವರು.
‘ಸಿಂದಿಗೆರೆ ಮೀಸಲು ಅರಣ್ಯಕ್ಕೆ ಬೆಂಕಿ ಹಾಕುವವರ ಜೀವನ ಸರ್ವನಾಶವಾಗಲೆಂದು ಶ್ರೀ ರೇವಣಸಿದ್ದೇಶ್ವರ ಹಾಗೂ ಪುರದಮ್ಮ ದೇವರಲ್ಲಿ ಹರಕೆ ಹೊರಲಾಗಿದ್ದು, ಅರಣ್ಯಕ್ಕೆ ದೇವರ ಕಾವಲಿದೆ’ ಎಂಬ ಎಚ್ಚರಿಕೆಯ ಬರಹವುಳ್ಳ ಬ್ಯಾನರ್ ಅನ್ನು ಸಿಂದಿಗೆರೆ ಗ್ರಾಮ ಹಾಗೂ ಅರಣ್ಯದಲ್ಲಿ ಹಾಕಲಾಗಿದೆ. ಈ ಬ್ಯಾನರ್ ಹಾಕಿದ ಬಳಿಕ ಕಿಡಿಗೇಡಿಗಳ ಕೃತ್ಯ ಕಡಿಮೆಯಾಗಿದೆ.
ಏ.26ಕ್ಕೆ ನನ್ನ ಮದ್ವೆ ಇದೆ, ದಯವಿಟ್ಟು ಎಲ್ಲಿಗಾದ್ರೂ ಓಡೋಗೋಣ… ಸಖತ್ ವೈರಲ್ ಆಗ್ತಿದೆ ಪ್ರಿಯತಮೆ ಸಂದೇಶ
ಪಕ್ಕದ ರೂಮಲ್ಲಿ ಗಂಡ ಮಲಗಿದ್ರೂ ನಡೆದೇ ಹೋಯ್ತು ಘೋರ ದುರಂತ! ಬೆಳಗ್ಗೆ ಪತ್ನಿಯ ಕೋಣೆಗೆ ಹೋದವನಿಗೆ ಕಾದಿತ್ತು ಶಾಕ್
ತಡರಾತ್ರಿ ಪಂಪ್ಸೆಟ್ ಕದಿಯಲು ಬಂದ ಯುವಕರಿಬ್ಬರನ್ನು ಅಮಾನುಷವಾಗಿ ಕೊಂದ ತೋಟದ ಮಾಲೀಕ!