Thursday, 13th December 2018  

Vijayavani

Breaking News

ಯುವತಿಯನ್ನು ಕಾರಿನಲ್ಲಿ ಲಾಕ್ ಮಾಡಿ ಓಲಾ ಚಾಲಕನ ಲೈಂಗಿಕ ಕಿರುಕುಳ

Wednesday, 06.12.2017, 5:30 PM       No Comments

<< ಕಾಮುಕನ ಕಪಿಮುಷ್ಠಿಯಿಂದ ಪಾರಾದ ಫ್ಯಾಷನ್ ಡಿಸೈನರ್ >>
ಬೆಂಗಳೂರು: ರಾತ್ರಿ ನಿರ್ಜನ ಪ್ರದೇಶದಲ್ಲಿ ಕಾರಿನ ಚೈಲ್ಡ್ ಲಾಕ್ ಮಾಡಿ ಬಂಧನದಲ್ಲಿರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಓಲಾ ಕ್ಯಾಬ್ ಚಾಲಕನ ಕಪಿಮುಷ್ಠಿಯಿಂದ ಯುವತಿಯೊಬ್ಬಳು ಪಾರಾಗಿದ್ದಾಳೆ.

ಯುವತಿಯು 23 ವರ್ಷದ ಫ್ಯಾಷನ್ ಡಿಸೈನರ್ ಆಗಿದ್ದು, ಕಳೆದ ಭಾನುವಾರ ಇಂದಿರಾ ನಗರದಿಂದ ಬಿಟಿಎಂ ಲೇಔಟ್​ಗೆ ಕ್ಯಾಬ್​ನಲ್ಲಿ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಕ್ಯಾಬ್​ ರಿಂಗ್ ರಸ್ತೆಯ ನಿರ್ಜನ ಪ್ರದೇಶ ಪ್ರವೇಶಿಸುತ್ತಿದ್ದಂತೆ ಚಾಲಕ ರಸ್ತೆ ಬದಿ ಕಾರು ನಿಲ್ಲಿಸಿ, ಕಾರಿನ ಚೈಲ್ಡ್ ಲಾಕ್ ಮಾಡಿ ಯುವತಿ ಜತೆ ಅಸಭ್ಯವಾಗಿ ವರ್ತಿಸಲು ಮುಂದಾಗಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಯುವತಿ, ದಿಢೀರನೆ ಕ್ಯಾಬ್​ ನಿಲ್ಲಿಸಿದಾಗ ಸುತ್ತ ಮುತ್ತ ಯಾರು ಇರಲಿಲ್ಲ. ತಕ್ಷಣ ಚಾಲಕ ಬಂದು ನನ್ನ ಕಾಲನ್ನು ಮುಟ್ಟಿದ. ಭಯದಿಂದಲೇ ನಾನು ಆತನಿಗೆ ಎಚ್ಚರಿಕೆ ನೀಡಿದೆ. ನಂತರ ಕಾರಿಗೆ ಹಾನಿ ಮಾಡಲು ಪ್ರಯತ್ನಿಸಿದಾಗ ಆತನೇ ಬಾಗಿಲು ತೆರೆದ. ನಂತರ ಅಲ್ಲಿಂದ 100 ಮೀಟರ್​ ಓಡಿ ಆಟೋವನ್ನು ಹಿಡಿದೆ. ನಂತರವೂ ಆತ ನನಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ, ಆತನ ನಂಬರ್​ ಅನ್ನು ಬ್ಲಾಕ್​ ಮಾಡಿ ಠಾಣೆಗೆ ದೂರು ನೀಡಿದೆ ಎಂದು ತಿಳಿಸಿದ್ದಾಳೆ.

ಈ ಘಟನೆ ಬಗ್ಗೆ ನಮಗೂ ಪಶ್ಚಾತ್ತಾಪವಿದೆ. ಇಂತಹ ಪ್ರಕರಣಗಳ ಬಗ್ಗೆ ನಮಗೆ ದೂರು ಬಂದಲ್ಲಿ ತಕ್ಷಣ ಯಾವುದೇ ಮುಲಾಜಿಲ್ಲದೆ ಅಂತಹ ಚಾಲಕರನ್ನು ಅಮಾನತು ಮಾಡುತ್ತೇವೆ ಎಂದು ಓಲಾ ಕಂಪನಿ ವಕ್ತಾರ ಸ್ಪಷ್ಟನೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top